Belagavi

ಸರಳ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಣೆ


ಯರಗಟ್ಟಿ: ಸ್ಥಳೀಯ ಯರಗಟ್ಟಿಯ ತಹಶೀಲ್ದಾರ ಕಾರ್ಯಲಯದಲ್ಲಿ ಶಿವ ಶರಣೆ ಹೇಮರಡ್ಡಿ ಮಲ್ಲಮ್ಮನ 599ನೇ ಜಯಂತಿಯನ್ನು ಕೋವಿಡ್ ಮಾರ್ಗಸೂಚನೆಯಂತೆ ಸರಳವಾಗಿ ಆಚರಿಸಲಾಯಿತ್ತು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಯರಗಟ್ಟಿ ತಹಶೀಲ್ದಾರ ಮಂಜುನಾಥ ಸ್ವಾಮಿ ಎನ್ ಆರ್ ಶಿವ ಶರಣೆ ಹೇಮರಡ್ಡಿ ಮಲ್ಲಮ್ಮನ ರಡ್ಡಿ ಸಮಾಜದ ಕಣ್ಣು ಸಮಾಜಕ್ಕೆ ತ್ರಿಕಾಲ ಲಿಂಗ ಪೂಜ್ಯ ಮಾಡಿ ರಡ್ಡಿ ಸಮಾಜದ ದಾರಿದೀಪವಾದ ಮಹಾಶರಣೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಉಪತಹಶೀಲ್ದಾರರ ಎಸ್ ಜಿ ದೊಡ್ಡಮನಿ, ಸಿಬ್ಬಂದಿಯಾದ ಕೆ. ಎಂ. ಗಟಕರಿ, ಶ್ರೀಮತಿ ಭಾರತಿ ಗೌಡರ, ಭೀಮಶಿ ಯರಝರ್ವಿ, ಶ್ರೀಧರ ಅಂಬಲಜರಿ, ಈರಣ್ಣಾ ಪಮ್ಮಾರ ಹಾಗೂ ಸಿಬ್ಬಂದಿ ವರ್ಗದರು ಉಪಸ್ಥಿತರಿದ್ದರು.
(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)

 


Leave a Reply