Belagavi

ಬೆಳಗಾವಿಗರು ಉತ್ತಮ ರೀತಿಯಲ್ಲಿ ಸ್ಪಂಧಿಸುತ್ತಿದ್ದಾರೆ: ಡಿಸಿಪಿ ವಿಕ್ರಮ ಅಮಟೆ


ಬೆಳಗಾವಿ: ನಗರದ ಜನತೆ ಲಾಕ್ ಡೌನ್ ಗೆ ಸ್ಪಂಧನೆ ನೀಡುತ್ತಿದ್ದಾರೆ. ಮೊದಲ ದಿನಕ್ಕಿಂತ ಎರನೆಯ ದಿನ ಸಾರ್ವಜನಿಕರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.  ಇನ್ನು ಮೊದಲೆನೆ ದಿನ ಬೆಳಗಾವಿ ನಗರ ಪೊಲೀಸರು ೧೫೦ ಬೈಕ್ ಸೀಜ್ ಮಾಡಿದ್ದಾರೆ. ಮಾಸ್ಕ್ ಇಲ್ಲದೆ ಓಡಾಟ ನಡೆಸುವ 130 ಜನರಿಗೆ ದಂಡ ಹಾಕಲಾಗಿದೆ.‌ ಜೊತೆಗೆ ಅವರ ವಿರುದ್ಧ ಪ್ರಕರಣ ಕೂಡಾ ದಾಖಲಿಸಲಾಗಿದೆ. ನಗರಾದ್ಯಂತ ಸುಮಾರು 25 ವೈಕಲ್ ತಪಾಸಣಾ ಕೇಂದ್ರ ಸ್ಥಾಪನೆ ಮಾಡಲಾಗಿದೆ ಎಂದು ಡಿಸಿಪಿ ವಿಕ್ರಮ ಅಮಟೆ ಅವರು ಮಾಹಿತಿ ನೀಡಿದ್ದಾರೆ.

ಇಂದು ಮಾದ್ಯಮಗಳೊಂದಿಗೆ ಮಾತನಾಡಿ ಮಾಹಿತಿ ನೀಡಿದ ಅವರು  ನಗರದಲ್ಲಿ  ಆ್ಯಂಬುಲೆನ್ಸ್ , ಗುಡ್ಸ್ ವಾಹನಗಳಿಗೆ ಹಾಗೂ ಚಿಕಿತ್ಸೆಗೆ ಎಂದು ತೆರಳುವ ಜನರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.‌ ಒಟ್ಟಾರೆಯಾಗಿ ಸಾರ್ವಜನಿಕರಿಗೆ ಬೇಕಾಗುವಷ್ಟು ವ್ಯವಸ್ಥೆ ಮಾಡಿದ್ದೇವೆ. ‌ಇದರ ಜೊತೆಗೆ ಸಾರ್ವಜನಿಕರು ಕೂಡಾ ಪೊಲೀಸರಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ.‌ ವಾಹನ ಮಾಲೀಕರಿಗೆ ಸಧ್ಯ ದಂಡ ಕಟ್ಟಿ ಬಿಡಲಾಗಿದೆ.‌ಆದರೆ ಇನ್ನೂ ಮೇಲೆ ಎನಾದರು ಬೈಕ್, ಕಾರಗಳು ಸೀಜ್ ಆದರೆ, ನ್ಯಾಯಾಲಕ್ಕೆ ಒಪ್ಪಿಸುತ್ತೇವೆ. ವಾಹನ ಮಾಲಿಕರು ಲಾಯರ್ ಮೂಲಕ ತಮ್ಮ ವಾಹನಗಳನ್ನು ಬಿಡಿಸಿಕೊಳ್ಳಬೇಕು.‌ ನಗರದಲ್ಲಿ 99%ಜನರು ಸಹಕಾರ ನೀಡುತ್ತಿದ್ದಾರೆ. ಆದರೆ ಉಳಿದ  ಜನತು ಸುಳ್ಳು ದಾಖಲೆ ತೊರಿಸಿ ಅನಗತ್ಯವಾಗಿ ಓಡಾಡುತ್ತಿದ್ದಾರೆ ಎಂದು ಹೇಳಿದರು


Leave a Reply