karanataka

ಬೆಳಂಬೆಳ್ಳಗ್ಗೆ ಫಿಲ್ಡಿಗಿಳಿದ ಪಿಎಸ್ಐ ಪಾಟೀಲ


ಇಳಕಲ್ : ನಗರದಲ್ಲಿ ಕೊರೋನಾ ರೋಗವನ್ನು ತಡೆಗಟ್ಟಲು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿರುವ ತಾಲ್ಲೂಕಾ ಆಡಳಿತ, ನಗರಸಭೆ ಮತ್ತು ಪೋಲಿಸ್ ಇಲಾಖೆ. ಇದಕ್ಕೆ ವ್ಯತಿರಿಕ್ತವಾಗಿ ನಗರದ ಜನತೆ ಕ್ಯಾರೆ ಎನ್ನದೇ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿರುವುದು ಕಂಡ ನಗರ ಶಹರ ಪಿಎಸ್ಐ ಎಸ್.ಬಿ. ಪಾಟೀಲ ಬೆಳಂಬೆಳ್ಳಗ್ಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ನಗರದ ಜನತೆಗೆ ಮನವಿ ಮಾಡಿ ಕೊಳ್ಳುವುದರ ಜೊತೆಗೆ ಯಾರು ಹೊರಗಡೆ ಬರಬಾರದು ಮತ್ತು ಅನಾವಶ್ಯಕವಾಗಿ ವಾಹನಗಳಲ್ಲಿ ಹೊರಗಡೆ ಓಡಾಡ ಬಾರದೆಂದು ತಿಳಿಹೇಳಿದರು.

ಇದೆ ಸಂದರ್ಭದಲ್ಲಿ ಅನಾವಶ್ಯಕವಾಗಿ ತಿರುಗಾಡುತ್ತಿದ್ದ ಕೆಲವು ವಾಹನಗಳು ತಮ್ಮ ವಶಕ್ಕೆ ಪಡೆದರು.

ಸಂಪೂರ್ಣ ಲಾಕ್ ಡೌನ್ ಮಾಡಿರುವದರಿಂದ ನಗರ ಜನತೆ ಎಲ್ಲಿ ಅಗತ್ಯ ವಸ್ತುಗಳು ಸಿಗುತ್ತದೆಯೋ ಇಲ್ಲವೋ ಎಂಬ ಆತಂಕದಲ್ಲಿ ಸಾಮಾಜಿಕ ಅಂತರ ಮರೆತು ಒಬ್ಬರಿಗೊಬ್ಬರು ಹತ್ತಿರದಲ್ಲಿಯೇ ನಿಂತು ವ್ಯಾಪಾರ ಮಾಡಿದ್ದು ಅಲ್ಲಲ್ಲಿ ಕಂಡು ಬಂತು.

ಈಗಲಾದರೂ ಜನತೆ ಆತಂಕಕ್ಕೆ ಒಳಗಾಗದೆ ತಮಗೆ ಬೇಕಾಗುವ ಅಗತ್ಯ ವಸ್ತುಗಳು ದಿನನಿತ್ಯ ಸಿಗುತ್ತದೆ ದಯವಿಟ್ಟು ಅನಗತ್ಯವಾಗಿ ಹೊರಗಡೆ ಓಡಾಡುವುದು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ, ಮಾಸ್ಕ ಧರಿಸದೆ ಯಾರು ವ್ಯಾಪಾರ ವಹಿವಾಟು ನಡೆಸಬಾರದೆಂದು ಮನವಿ ಮಾಡಿಕೊಂಡಿದ್ದಾರೆ.

ವರದಿ: ನಾಗರಾಜ ನಗರಿ


Leave a Reply