karanataka

ಧ್ವನಿ ವರ್ಧಕ ಮೂಲಕ ಜಾಗೃತಿ : ಯುವಕರ ಕಾರ್ಯಕ್ಕೆ ಉತ್ತಮ ಪ್ರತಿಕ್ರಿಯೆ


ಇಳಕಲ್ : ನಗರದ ಹೊಸಪೇಟೆ ಓಣಿಯ ಯುವಕರು ವಿಶೇಷವಾಗಿ ನಗರದಲ್ಲಿ ಸಂಚರಿಸಿ ಕರೋನಾ ರೋಗದ ಬಗ್ಗೆ ಧ್ವನಿ ವರ್ಧಕದ ಮುಖಾಂತರ ಜಾಗೃತಿ ಸಂದೇಶ ರವಾನೆ ಮಾಡುತ್ತಿರುವುದು ಈಗ ಎಲ್ಲರ ಪ್ರಶಂಸೆಗೆ ಕಾರಣವಾಗಿದೆ.

ನಮ್ಮ ನಗರದಲ್ಲಿ ಸಾವು ನೋವು ನೋಡಿ ನಮಗೆ ತುಂಬಾ ಬೇಸರವಾಗುತ್ತಿದೆ. ಇದರಿಂದ ಜಾಗೃತರಾದರೆ ಮಾತ್ರ ನಮ್ಮ ಜೀವ, ನಮ್ಮ ಬದುಕು, ನಮ್ಮ ಕುಟುಂಬ ಉಳಿಯುತ್ತದೆ ಒಂದು ವೇಳೆ ನಿರ್ಲಕ್ಷ್ಯ ಮಾಡಿದರೆ ಮುಂದೆ ದೊಡ್ಡ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಂಬುಹುದು ಯುವಕರ ಅಂತರಾಳದ ಮಾತಾಗಿದೆ.

ಇತ್ತಿಚೀನ ದಿನಗಳಲ್ಲಿ ಯುವಕರು ಅಲ್ಲಿ ಇಲ್ಲಿ ಅನಾವಶ್ಯಕವಾಗಿ ತಿರುಗುವುದನ್ನು ನಾವು ನೋಡಿದ್ದೇವೆ. ಆದರೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮಾನವೀಯತೆಯಿಂದ ಜಾಗೃತಿ ಮೂಡಿಸುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯವಾದದ್ದು.

ಇನ್ನಷ್ಟು ಯುವಕರು ತಮ್ಮ ತಮ್ಮ ವಾರ್ಡಗಳಲ್ಲಿ ಈ ರೀತಿ ಜಾಗೃತಿ ಮೂಡಿಸಿದ್ದೆ ಆದರೆ ಕರೋನಾ ರೋಗವನ್ನು ನಾವು ಗೆಲ್ಲುತ್ತೇವೆ ಎನ್ನುತ್ತಾರೆ ಯುವಕ ಮಿತ್ರರಾದ ಸುರೇಶ ಯಾಳಗಿ, ಮಂಜು ನೀಲಿ, ಕುಮಾರ ಬಂಡಾರಿ.


Leave a Reply