Belagavi

ಲಾಕ್ ಡೌನ್  ಪರಿಶಿಲನೆಗಾಗಿ ಫೀಲ್ಡಿಗಿಳಿದ ಗೋಕಾಕ ದಂಡಾಧಿಕಾರಿ


ಗೋಕಾಕ: ರಾಜ್ಯದಾದ್ಯಂತ ಮೊದಲನೆಯ ದಿನ ಲಾಕ್ ಡೌನ್ ಎರಡನೆಯ ದಿನದಂದು ಗೋಕಾಕ ತಹಸಿಲ್ದಾರ ಪ್ರಕಾಶ ಹೊಳೆಪ್ಪಗೋಳ ಇವರು ಪರಿಶಿಲನೆಗಾಗಿ  ಗೋಕಾಕ, ಕೊಣ್ಣೂರ ಮತ್ತು ಮಲ್ಲಾಪುರ ಪಿ,ಜಿ,ಪಟ್ಟಣಗಳಲ್ಲಿ ಮಳೆಯನ್ನು ಲೆಕ್ಕಿಸದೆ ಸಂಚಾರ ಮಾಡಿದರು.

ಈ ಸಂದರ್ಭದಲ್ಲಿ ಸ್ಥಳಿಯ ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಹೀರೆಮಠ, ಮಾರ್ಶಲಗಳು, ಸ್ಥಳಿಯ ಪೋಲಿಸ್ ಸಿಬ್ಬಂದಿಗಳು, ತಹಸಿಲ್ದಾರ ಇವರಿಗೆ ಸಾಥ ನಿಡುತ್ತಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸುತ್ತಾಡಿ ಅನಾವಶ್ಯಕವಾಗಿ ಯಾರೂ ಹೊರಬರದಂತೆ ಹೇಳಿದರು.

ಅದರಂತೆ  ಕೆಲವು ಕಿರಾಣಿ ಅಂಗಡಿ ಮಾಲಿಕರಿಗೆ ಹಾಗೂ ರೇಷನ್ ಅಂಗಡಿ ಮಾಲಿಕರಿಗೆ  ಹೆಚ್ಚಿಗೆ ದರ ತೆಗೆದುಕೊಳ್ಳದಿರಲು ಸೂಚಿಸಿ, ಗೋಕಾಕ ,ಮಲ್ಲಾಪುರ ಪಿಜಿ ಮತ್ತು ಕೊಣ್ಣೂರಲ್ಲಿನ‌ ಅಂಗಡಿಯವರು ಹೊಮ ಡೆಲಿವರಿ ಮಾಡಬೇಕೆಂದು ಮತ್ತು ಖಡ್ಡಾಯವಾಗಿ ಮಾಸ್ಕ್ ದರಸಿ ಸಾನಿಟೈಜರ ಬಳಸಲು ತಿಳಿಸಿ

ಈಗಾಗಲೆ ಗೋಕಾಕ ಪೋಲಿಸ್ ಇಲಾಖೆಯವರು ಅನಾವಶ್ಯಕ ಹೊರಗಡೆ ಬಂದವರ ಸೀಜ್ ಮಾಡಿದ ವಾಹನಗಳನ್ನು ಪೋಲಿಸ್ ಇಲಾಖೆಯ ನಿಯಮದಂತೆ ಬಿಡುಗಡೆಗೊಳಿಸುತ್ತರೆಂದು ತಿಳಿಸುತ್ತಾ ಸರಕಾರದ ಮಾರ್ಗಸೂಚಿಗಳನ್ನು ಪಾಲಿಸಲು ಹೇಳಿ ಆರೋಗ್ಯ ಮತ್ತು ಪೋಲಿಸ್ ಇಲಾಖೆಯ ಜೊತೆ ಸಹಕರಿಸಲು ತಿಳಿಸಿದರು.


Leave a Reply