ವಿಕಲಚೇತನ ವಿದ್ಯಾರ್ಥಿಗಳ ಶುಲ್ಕ ಮರುಪಾವತಿಗೆ ಅರ್ಜಿ ಆಹ್ವಾನ

0

ಕೊಪ್ಪಳ ಜ.08: ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2020-21ನೇ ಸಾಲಿಗೆ ಎಸ್.ಎಸ್.ಎಲ್.ಸಿ ನಂತರದ ತರಗತಿಯಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಅರ್ಹ ವಿಕಲಚೇತನ ವಿದ್ಯಾರ್ಥಿಗಳಿಂದ ಶುಲ್ಕ ಮರುಪಾವತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅರ್ಹ ವಿಕಲಚೇತನ ವಿದ್ಯಾರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಂಗವಿಕಲರ ಗುರುತಿನ ಚೀಟಿ( UDID    ), ಚಾಲ್ತಿಯಲ್ಲಿರುವ ಜಾತಿ ಪ್ರಮಾಣ ಪತ್ರ, ಚಾಲ್ತಿ ಬ್ಯಾಂಕ್ ಖಾತೆ ಪುಸ್ತಕ, ಅಂಕಪಟ್ಟಿ, ಆಧಾರ್ ಕಾರ್ಡ್ಗಳ ಝರಾಕ್ಸ್ ಪ್ರತಿಗಳೊಂದಿಗೆ ಶುಲ್ಕ ಪಾವತಿಸಿದ ಮೂಲ ಪ್ರತಿಯನ್ನು ಶಾಲಾ-ಕಾಲೇಜು ಮುಖ್ಯಸ್ಥರ ದೃಢೀಕರಣದೊಂದಿಗೆ ಜನವರಿ.25 ರೊಳಗೆ ಕಛೇರಿ ಅವಧಿಯಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಾರ್ಯಾಲಯ, ನಗರಾಭಿವೃದ್ಧಿ ಪ್ರಾಧಿಕಾರ ಕಾರ್ಯಾಲಯ ಆವರಣ, ಕೊಠಡಿ ಸಂಖ್ಯೆ-31, 32, ರಿಲಾಯನ್ಸ್ ಪೆಟ್ರೋಲ್ ಬಂಕ್ ಎದುರುಗಡೆ, ಹೊಸಪೇಟೆ ರಸ್ತೆ, ಕೊಪ್ಪಳ ಇವರಿಗೆ ಸಲ್ಲಿಸಬೇಕು.
ಶುಲ್ಕ ಮರುಪಾವತಿ ಮೊತ್ತವನ್ನು ನೇರವಾಗಿ ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ ಜಮಾ ಮಾಡುವುದರಿಂದ ಕಡ್ಡಾಯವಾಗಿ ಪ್ರಚಲಿತ ಬ್ಯಾಂಕ್ ಖಾತೆಯ ವಿವರ ನೀಡತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ನಮೂನೆಗಾಗಿ ಆಯಾ ತಾಲ್ಲೂಕಿನ ಎಂ.ಆರ್.ಡಬ್ಲೂö್ಯಗಳಾದ ಜಯಶ್ರೀ(ಕೊಪ್ಪಳ)- 9980126391, ಬಸವನಗೌಡ(ಯಲಬುರ್ಗಾ)- 9964803047, ಮಂಜುಳಾ(ಗAಗಾವತಿ)-8123633027, ಚಂದ್ರಶೇಖರ(ಕುಷ್ಟಗಿ)-9916308585 ಹಾಗೂ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ ದೂ.ಸಂ: 08539-295496/295460 ಇವರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

- Advertisement -

Leave A Reply

Your email address will not be published.