karanatakaUncategorized

ರೆಮಿಡಿಸಿವರ್ ಇಂಜೆಕ್ಷನ್‌ ಅಕ್ರಮ ದಂದೆ ಹಿಂದೆ ಪ್ರಭಾವಿಗಳ ಕೈವಾಡ


ಬಳ್ಳಾರಿ ನಗರದಲ್ಲಿ ಹೆಸರು ಹೊಂದಿರುವ ಹೊಟೇಲ್ ಉದ್ಯಮಿಗಳ ಸಂಬಂಧಿಕರು,ಇನ್ನೂ ಸರ್ಕಾರದ ಪ್ರಭಾವಿ ಅಧಿಕಾರಿಗಳ ಸಂಬಂಧಿಗಳು ಖ್ಯಾತ ವೈದ್ಯರು,ಇವರ ಹಿಂದೆ ಪ್ರಭಾವಿ ರಾಜಕಾರಣಿಗಳ ಕೈವಾಡ ಇದೇ ಏಂದು ಸಾರ್ವಜನಿಕರು ಬಹಿರಂಗವಾಗಿ ಮಾತನಾಡಿಕೊಳ್ಳುತ್ತಿದ್ದಾರೆ .

ದೇಶ ದಲ್ಲಿ  ಕೊರೊನಾ ದಿಂದ ಸರಣಿ ಸಾವುಗಳು ಸಂಭವಿಸುತ್ತಿವೆ, ಜನರ ಜೀವನ ದುಸ್ತರವಾಗಿದೆ ಅತಂತ್ರವಾಗಿದೆ .ಯಾವ ಕ್ಷಣಕ್ಕೆ,ಯಾರೂ ಸಾಯುತ್ತಾರೊ, ಯಾವ ನಿಮಿಷದಲ್ಲಿ, ಏನು ಆಗುತ್ತದೆ ಏಂದು ಪ್ರಾಣವನ್ನು ಕೈನಲ್ಲಿ ಹಿಡಿದು ಜೀವನ ಮಾಡುವ ಪರಿಸ್ಥಿತಿ ಉದ್ಭವ ಅಗಿದೆ ಕೇಂದ್ರ ಮತ್ತು ರಾಜ್ಯ  ಸರ್ಕಾರ ಗಳು ಕೋರೋನಾ ನಿಯಂತ್ರಣ ಮಾಡಲು ಹರಸಾಹಸ ಮಾಡುತ್ತಿದ್ದರೂ ನಿರೀಕ್ಷಿತ  ಪ್ರಯೋಜನ ಆಗಿಲ್ಲ.

ಇಂತಹ ಸಂದರ್ಭಗಳಲ್ಲಿ ಮಾನವೀಯತೆಯಿ೦ದ ಸಹಾಯ ಮಾಡುವ ಗುಣಗಳನ್ನು ಹೊಂದಿರುವ ಮನುಷ್ಯನಾಗಬೇಕು ಅದನ್ನು ಬಿಟ್ಟು ಜನರ ರಕ್ತ ಹೀರುವ ಕಾರ್ಯ ನಡೆದಿರುವುದು ಅಕ್ಷಮ್ಯ .

ರೆಮಿಡಿಸಿವರ್ ಅಕ್ರಮ ದಂದೆ ನಲ್ಲಿ ಇರುವವರು ಶ್ರೀಮಂತ ವರ್ಗದವರು. ಕೋಟಿ ಕೋಟಿ ಅಸ್ಥಿ ಗಳ ಗೆ ಒಡೆಯರು ಇವರಿಗೆ ನಾಚಿಕೆ ಆಗಬೇಕು ಇವರ ಹೆಸರುಗಳನ್ನು ಹೇಳಲು ಅಸಹ್ಯವೆನಿಸುತ್ತದೆ .ಇವರು ಬಡವರಿಗೆ ಸಿಗಬೇಕಾಗಿದ್ದ ರೆಮಿಡಿಸಿವರ್ ಇಂಜೆಕ್ಷನ್‌ ಗಳನ್ನು ದುಬಾರಿ ಹಣಕ್ಕೆ ಮಾರಾಟ ಮಾಡಿ ಬಡಜನರ ಉಸಿರು ಹೋಗುವಂತೆ ಮಾಡಿದ್ದಾರೆ.ಇದರಲ್ಲಿ     ಇನ್ನೂ ಹಲವರ  ಕೈವಾಡ ಇದೆ ಏಂದು ಹಲವು ಪ್ರಭಾವಿಗಳ ಕೈವಾಡ, ಅವರ ಕೃಪೆ ಇದೆ ಎಂದು ಜನರ ಅಭಿಪ್ರಾಯವಾಗಿದೆ.

ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ಜೋರಾಗಿಯೇ ನಡೆಯಿತು ,ಆದರೆ  ಜಿಲ್ಲಾ SP ಸೈದುಲ್ಲಾ ಅಡಾವತ್  ಪಟ್ಟು ಬಿಡದೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹಿನ್ನೆಲೆಯಲ್ಲಿ ಬಡಾ ಮಾಫಿಯಾ ಸೂತ್ರ ದಾರ ರನ್ನು ತಕ್ಷಣವೇ ಬಂಧಿಸಲಾಯಿತು. ಇನ್ನೂ ಉಳಿದವರಿಗಾಗಿ ಶೋಧನೆ ನಡೆಯುತ್ತದೆ.ಇದು ಮುಂದಿನ ದಿನಗಳಲ್ಲಿ ಇನ್ನೂ ಮಹತ್ತರ ಬೆಳವಣಿಗೆ ಪಡೆಯಲಿದೆ.(ಕೆ.ಬಜಾರಪ್ಪ ವರದಿಗಾರರು.ಬಳ್ಳಾರಿ).


Leave a Reply