karanataka

ಮಹಾತ್ಮ ಗಾಂಧಿ ನರೇಗಾ ಯೋಜನೆ ಅನುಷ್ಠಾನಕ್ಕೆ ಕಟ್ಟುನಿಟ್ಟಿನ ನಿಯಮಗಳು


ದಿನಾಂಕ:12-05-2021 ರಂದು ಸರ್ಕಾರವು ಹೊರಡಿಸಿರುವ ತಿದ್ದುಪಡಿ ಆದೇಶದಲ್ಲಿ “ಪ್ರತಿ ಕಾಮಗಾರಿ ಸ್ಥಳದಲ್ಲಿ 40 ಕ್ಕಿಂತ ಕಡಿಮೆ ಕೂಲಿಕಾರರನ್ನು ತೊಡಿಗಿಸಿಕೊಂಡು ಮತ್ತು ಸೂಕ್ತ Covid Appropriate Behavior (CAB) ಅಳವಡಿಸಿಕೊಂಡು ಮಹಾತ್ಮ ಗಾಂಧಿ ನರೇಗಾ ಯೋಜನೆಯನ್ನು ಅನುಷ್ಠಾನಗೊಳಿಸಲು” ಅನುಮತಿ ನೀಡಲಾಗಿರುತ್ತದೆ.

ಸದರಿ ನಿರ್ಬಂಧದಂತೆ ನರೇಗಾ ಯೋಜನೆ ಅನುಷ್ಠಾನ ಮಾಡುವ ಮೊದಲು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಈ ಕೆಳಕಂಡ ಕ್ರಮಗಳನ್ನು ವಹಿಸುವಂತೆ ಗ್ರಾಮ ಪಂಚಾಯತಿಗಳಿಗೆ ನಿರ್ದೇಶನ ನೀಡಲು ತಿಳಸಿದೆ.

1. CAB ಬಗ್ಗೆ ಪಿಡಿಒ, BFT ಮತ್ತು ಮೇಟ್ ಗಳಿಗೆ CAB ಕುರಿತು ಆನ್ ಲೈನ್ ತರಬೇತಿ ಆಯೋಜಿಸುವುದು. ಕಾಮಗಾರಿ ಸ್ಥಳದಲ್ಲಿ CAB ಪಾಲಿಸುವ ಉದ್ದೇಶದಿಂದ ಕಾಮಗಾರಿ ಸ್ಥಳದಲ್ಲಿ ಒದಗಿಸಬೇಕಾದ ಮೂಲಭೂತ ಸೌಕರ್ಯಗಳ ಭಾಗವಾಗಿ ಕೈ ತೊಳೆಯಲು ಸಾಬೂನು, Pulse Oxymeter ಮತ್ತು Thermal Scanner ಗಳನ್ನು ಒದಗಿಸುವುದು.. ಈ ಸೌಲಭ್ಯಗಳನ್ನು ಒದಗಿಸದೇ ಇದ್ದಲ್ಲಿ CAB ಪಾಲಿಸಲು ಸಾಧ್ಯವಾಗುವುದಿಲ್ಲ.

2. ಒಂದು ಗ್ರಾಮದಲ್ಲಿ ಕಾಮಗಾರಿ ಪ್ರಾರಂಭಿಸುವ ಮೊದಲು ಆ ಗ್ರಾಮದಲ್ಲಿನ Active Cases ಮತ್ತು Positivity percentage ಪರಿಶೀಲಿಸಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು 40 ಕೂಲಿಕಾರರನ್ನು ನರೇಗಾ ಕಾಮಗಾರಿಯಲ್ಲಿ ತೊಡಗಿಸಿದಲ್ಲಿ ಕೋವಿಡ್ ಹರಡುವ ಸಾಧ್ಯತೆ ಇರುವುದಿಲ್ಲ ಎಂಬುದನ್ನು ದೃಢಪಡಿಸಿಕೊಂಡು ಕಾಮಗಾರಿಗಳನ್ನು ಪ್ರಾರಂಭಿಸುವುದು. ದಿನಾಂಕ: 07-05-2021 ರ ಸರ್ಕಾರದ ಆದೇಶದಲ್ಲಿ Containment Zone ಗಳಲ್ಲಿ ಎಲ್ಲಾ ರೀತಿಯ ಚಟುವಟಿಕೆಗಳನ್ನು ನಿರ್ಬಂಧಿಸಿರುವುದರಿಂದ ಈ ಪ್ರದೇಶಗಳಲ್ಲಿ ನರೇಗಾ ಕಾಮಗಾರಿ ಕೈಗೊಳ್ಳಲು ಕೂಡಾ ನಿರ್ಬಂಧ ಮುಂದುವರೆದಿರುತ್ತದೆ.

3. ನರೇಗಾ ಕಾಮಗಾರಿಗಳಲ್ಲಿ ಹೆಚ್ಚಿನ ಕೂಲಿಕಾರರು ತೊಡಗಿಕೊಳ್ಳುವ ಜಿಲ್ಲೆಗಳಾದ ಬೆಳಗಾವಿ, ಬಳ್ಳಾರಿ, ಗದಗ, ಕಲ್ಬುರ್ಗಿ, ಬೀದರ್, ಕೊಪ್ಪಳ, ರಾಯಚೂರು, ಧಾರವಾಡ, ಹಾವೇರಿ, ಬಾಗಲಕೋಟೆ, ದಾವಣಗೆರೆ ಮುಂತಾದ ಜಿಲ್ಲೆಗಳಲ್ಲಿ ಪ್ರತಿ ಗ್ರಾಮದಲ್ಲಿ 100ಕ್ಕೂ ಮೇಲ್ಪಟ್ಟು ಮತ್ತು ಕೆಲವು ಗ್ರಾಮಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ನರೇಗಾ ಯೋಜನೆಯಡಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿ ಕೆಲಸ ಪಡೆಯುವುದು ಸಾಮಾನ್ಯವಾಗಿದೆ. ಸದರಿ ಗ್ರಾಮಗಳಲ್ಲಿ ಒಂದು ಕಾಮಗಾರಿ ಸ್ಥಳದಲ್ಲಿ‌ 40 ಕ್ಕಿಂತ ಕಡಿಮೆ ಕೂಲಿಕಾರರನ್ನು ಆಯ್ಕೆ ಮಾಡಿ ಕೆಲಸದಲ್ಲಿ ತೊಡಗಿಸಲು ಜಿಲ್ಲಾ ಮಟ್ಟದಲ್ಲಿ ಕೆಲವೊಂದು ಮಾನದಂಡಗಳನ್ನು ಅಳವಡಿಸಿಕೊಳ್ಳುವುದು ಸೂಕ್ತವಾಗಿದೆ. ಅವುಗಳಲ್ಲಿ ಈಗಾಗಲೇ ಲಸಿಕೆ ಪಡೆದವರಿಗೆ ಆದ್ಯತೆ ನೀಡುವುದು.‌ 18 ರಿಂದ 44 ವರ್ಷ ವಯಸ್ಸಿನವರಿಗೆ ಅವಕಾಶ ನೀಡಬಹುದು. ಆದರೆ 40 ಜನರನ್ನು ಆಯ್ಕೆ ಮಾಡಲು ಗ್ರಾಮ ಪಂಚಾಯತಿಯು ಸಾವಿರಾರು ಜನರಿಂದ ಅರ್ಜಿ ಸ್ವೀಕರಿಸಿದಲ್ಲಿ ಸರ್ಕಾರವು ದಿನಾಂಕ:07-05-2021 ರಂದು ಸರ್ಕಾರವು ಹೊರಡಿಸಿರುವ Break the Chain ನಿರ್ಬಂಧಗಳು ಫಲಕಾರಿಯಾಗುವುದಿಲ್ಲ. ಆದ್ದರಿಂದ ಈ ಜಿಲ್ಲೆಗಳಲ್ಲಿ‌ CAB ಕುರಿತು ಹೆಚ್ಚಿನ ಗಮನ ನೀಡಬೇಕು.

4. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ದಂತಹ ಜಿಲ್ಲೆಗಳಲ್ಲಿ ಹೆಚ್ಚಿನ ಜನರು ತೆರೆದ ಬಾವಿಯಂತಹ ವೈಯಕ್ತಿಕ ಕಾಮಗಾರಿಗಳಲ್ಲಿ 15 ಕ್ಕಿಂತ ಕಡಿಮೆ ಕೂಲಿಕಾರರು ಕಾಮಗಾರಿಯಲ್ಲಿ ತೊಡಗುತ್ತಾರೆ. ಈ ಕಾಮಗಾರಿಗಳನ್ನು CAB ತರಬೇತಿ ನಂತರ ಮುಂದುವರೆಸಬಹುದು. ಈ ಜಿಲ್ಲೆಗಳಲ್ಲಿ ಸಮುದಾಯ ಕಾಮಗಾರಿಗಳ ಒತ್ತಡ ಇಲ್ಲದೇ ಇರುವುದರಿಂದ 40 ಕ್ಕಿಂತ ಕಡಿಮೆ ಕೂಲಿಕಾರರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಅಗತ್ಯವಿರುವುದಿಲ್ಲ..

ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ, ಮಂಡ್ಯ, ರಾಮನಗರ ಜಿಲ್ಲೆಗಳಲ್ಲಿ ಹೆಚ್ಚಾಗಿ ನಾಲಾ ಮತ್ತು ಕೆರೆ ಹೂಳು ತೆಗೆಯುವ ಕಾಮಗಾರಿಗಳನ್ನು ಹೆಚ್ಚಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಇದನ್ನು ಬದಲಾಯಿಸಿ ವೈಯಕ್ತಿಕ ಕೃಷಿ ಹೊಂಡ, ಬದು ನಿರ್ಮಾಣ, ತೋಟಗಾರಿಕೆ ಮತ್ತು ಅರಣ್ಯ ಕಾಮಗಾರಿಗಳಿಗೆ ಮುಂಗಡ ಗುಂಡಿ ತೆಗೆಯುವುದು, ಸೋಕ್ ಪಿಟ್ ಇಂತಹ ಕಾಮಗಾರಿಗಳಿಗೆ ಆದ್ಯತೆ ನೀಡತಕ್ಕದ್ದು. ಸದರಿ ಕಾಮಗಾರಿಗಳಿಗೆ CAB ಅಳವಡಿಸಿಕೊಳ್ಳುವ ಕುರಿತು ಯೋಜನೆಯ ಎಲ್ಲಾ ಸಿಬ್ಬಂದಿಗಳಿಗೆ ತರಬೇತಿ ನೀಡಿದ ನಂತರ ಮುಂದಿನ ಕ್ರಮ ಜರುಗಿಸುವುದು.

ಕೆಲವು ಜಿಲ್ಲೆಗಳಲ್ಲಿ ಅರಣ್ಯ ಕಾಮಗಾರಿಗಳಿಗೆ ಮುಂಗಡ ಗುಂಡಿ ತೆಗೆಯುವ ಕಾಮಗಾರಿಗಳನ್ನು ಪ್ರಾರಂಭಿಸಿದ್ದು ಈ ಕಾಮಗಾರಿಗಳನ್ನು ಮುಂದುವರೆಸುವ ಮೊದಲು CAB ಅಳವಡಿಸಿಕೊಳ್ಳುವ ಕುರಿತು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ವಹಿಸಿ ಕಾಮಗಾರಿ ಅನುಷ್ಠಾನಗೊಳಿಸಲು ಸೂಚಿಸಿದೆ.‌

5. ಪ್ರತಿ ಕಾಮಗಾರಿ ಸ್ಥಳದಲ್ಲಿ ಕೈ ತೊಳೆಯಲು ಸೋಪ್ ಮತ್ತು ಸ್ಯಾನಿಟೈಸರ್ ಇರಬೇಕು.. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕಾಮಗಾರಿ ಸ್ಥಳದಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳಲು ಕಾಮಗಾರಿ ಆಯ್ಕೆಯು ಮುಖ್ಯವಾಗಿರುತ್ತದೆ. ಆದ್ದರಿಂದ ಸಮುದಾಯ ಕಾಮಗಾರಿಗಳ ಬದಲು ವೈಯಕ್ತಿಕ ಕಾಮಗಾರಿಗಳನ್ನು ಅನುಷ್ಠಾನಗೊಳಿಸಬೇಕು.

*ಉದ್ಯೋಗ ಖಾತರಿ ಸ್ಥಳದಲ್ಲಿ ಯಾವುದೇ ಕೂಲಿಕಾರನಿಗೆ ನೆಗಡಿ, ಕೆಮ್ಮು ಅಥವಾ ಜ್ವರದ ಲಕ್ಷಣಗಳು ಕಂಡು ಬಂದಲ್ಲಿ ಏನು ಮಾಡಬೇಕು?*

1. ಈ ರೀತಿಯ ಲಕ್ಷಣಗಳು ಕಂಡುಬಂದಲ್ಲಿ ಕಾಯಕ ಬಂಧು ಸದರಿ ವಿಷಯವನ್ನು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮತ್ತು ಸಹಾಯಕ ನಿರ್ದೇಶಕರ ಗಮನಕ್ಕೆ ತರಬೇಕು. ಸಹಾಯಕ ನಿರ್ದೇಶಕರು ತಾಲೂಕು ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿ 24 ಗಂಟೆಯೊಳಗೆ ಕೋವಿಡ್ ಪರೀಕ್ಷೆ ಮಾಡಿಸಬೇಕು. ಸದರಿ ಕೂಲಿಕಾರರ Travel history ಪರಿಶೀಲಿಸಿ ಅವರು ಸೋಂಕಿತ ವ್ಯಕ್ತಿಗಳ ಸಂಪರ್ಕದಲ್ಲಿ ಬಂದಿದ್ದಲ್ಲಿ ಅದರಿ ಕೂಲಿಕಾರ್ಮಿಕನ Primary Contact ಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು. ಸದರಿ ಕಾಮಗಾರಿಯನ್ನು ಮುಂದುವರೆಸುವ ಅಥವಾ ನಿಲ್ಲಿಸುವ ಬಗ್ಗೆ ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಮತ್ತು ಸಹಾಯಕ ನಿರ್ದೇಶಕರಿಗೆ ಅವಕಾಶವಿರುತ್ತದೆ.

2. ಕೂಲಿಕಾರರು ಕೆಲಸ ನಿರ್ವಹಿಸುವ ಸ್ಥಳದಲ್ಲಿ ಸೋಂಕು ದೃಢಪಟ್ಟಲ್ಲಿ ತಕ್ಷಣವೇ Primary Contact ಗಳಿಗೆ ಕೋವಿಡ್ ಪರೀಕ್ಷೆ ನಡೆಸಬೇಕು ಮತ್ತು ಕಾಮಗಾರಿಯನ್ನು ನಿಲ್ಲಿಸಬೇಕು.

3. ಹಲವಾರು ಜಿಲ್ಲೆಗಳಲ್ಲಿ ನರೇಗಾ ಕೂಲಿಕಾರರು ಕಾಮಗಾರಿ ಸ್ಥಳಕ್ಕೆ ಗುಂಪಾಗಿ ನಡೆದುಕೊಂಡು, ಒಟ್ಟಾಗಿ ಟ್ರಾಕ್ಟರ್ ಗಳಲ್ಲಿ ಮತ್ತಿತರ ವಾಹನಗಳಲ್ಲಿ ಬರುವುದು ಸಾಮಾನ್ಯವಾಗಿದೆ. ಈ ರೀತಿ ಕೂಲಿಕಾರರು ಕಾಮಗಾರಿ ಸ್ಥಳಕ್ಕೆ ಗುಂಪಾಗಿ ಬರುವುದನ್ನು ನಿರ್ಬಂಧಿಸಬೇಕು. ಈ ರೀತಿ ಗುಂಪಾಗಿ ಕಾಮಗಾರಿ ಸ್ಥಳಕ್ಕೆ ಬರುವ ಪದ್ಧತಿ ಇದ್ದಲ್ಲಿ ಆ ಸ್ಥಳದಲ್ಲಿ ಕಾಮಗಾರಿ ಮುಂದುವರೆಸುವುದು ಅಗತ್ಯವಿರುವುದಿಲ್ಲ.

*ಕಾಮಗಾರಿ ಸ್ಥಳದಲ್ಲಿ ವಹಿಸಬೇಕಾದ ಕೆಲಸ ಮುಂಜಾಗ್ರತಾ ಕ್ರಮಗಳು*

1. ಕಾಮಗಾರಿ ಸ್ಥಳದಲ್ಲಿ ಕೂಲಿಕಾರರ SPo2 ಪ್ರಮಾಣ ಪರಿಶೀಲಿಸುವುದು.

2. Thermal scanner ಮೂಲಕ ಕೂಲಿಕಾರರ ದೇಹದ ತಾಪಮಾನ ಪರಿಶೀಲಿಸುವುದು. ಜ್ವರ ಇದ್ದಲ್ಲಿ ಕೂಲಿಕಾರರಿಗೆ ಕಾಮಗಾರಿ ನಿರ್ವಹಿಸಲು ಅವಕಾಶ ನೀಡದೇ ಅವರನ್ನು ಕೋವಿಡ್ ಟೆಸ್ಟ್ ಗೆ ಒಳಪಡಿಸುವುದು.

3. ಪ್ರತಿ ದಿನ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಸಹಾಯಕ ನಿರ್ದೇಶಕರು ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಯು ಕಾಮಗಾರಿ ಸ್ಥಳದಲ್ಲಿ ಕೂಲಿಕಾರರಿಗೆ ಜ್ವರ, ಕೆಮ್ಮು, ನೆಗಡಿಯಂತಹ ಲಕ್ಷಣಗಳು ಇರುವ ಕುರಿತು ವರದಿ ತರಿಸಿಕೊಳ್ಳುವುದು ಮತ್ತು ಅವರನ್ನು 24 ಗಂಟೆಯೊಳಗೆ ಕೋವಿಡ್ ಪರೀಕ್ಷೆಗೆ ಒಳಪಡಿಸುವುದು.

4. ಕಾಮಗಾರಿ ಪ್ರಾರಂಭಿಸುವ ಮೊದಲು ಕೂಲಿಕಾರರಿಗೆ ಕಡ್ಡಾಯವಾಗಿ ಕೋವಿಡ್ ಪ್ರತಿಜ್ಞಾ ವಿಧಿ ಬೋಧಿಸಬೇಕು. ಕಡ್ಡಾಯವಾಗಿ ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು. ಸೋಪ್ ನಿಂದ ಕೈ ತೊಳೆದು ಕಾಮಗಾರಿ ಪ್ರಾರಂಭಿಸಬೇಕು. NMR ನಲ್ಲಿ ಸಹಿ ಪಡೆಯುವುದರ ಬದಲು ಕಾಮಗಾರಿ ಸ್ಥಳದಲ್ಲಿನ ಕೂಲಿಕಾರರ ಫೋಟೋ ತೆಗೆದು ಕಡತದಲ್ಲಿ ನಿರ್ವಹಿಸುವುದು. ಮೇಟ್ ಗಳಿಗೆ ಸಮರ್ಪಕವಾಗಿ ತರಬೇತಿ ನೀಡಬೇಕು ಮತ್ತು ನರೇಗಾ ಎಂಬ ಮುದ್ರಣವಿರುವ ಮಾಸ್ಕ್ ಗಳನ್ನು ವಿತರಿಸಬೇಕು.


Leave a Reply