Belagavi

ಅಗ್ನಿಹೋತ್ರದಿಂದ ಸರ್ವವೂ ಶುದ್ಧಿಕರಣ : ಅರುಣ ಐಹೊಳೆ ಅಭಿಮತ


ಅತಿ ಕಡಿಮೆ ವೆಚ್ಚದಲ್ಲಿ ಅಗ್ನಿಹೋತ್ರ ಮಾಡುವುದರಿಂದ ವೈರಸ್‌ಗಳು ಬರದಂತೆ ನೋಡಿಕೊಳ್ಳಬಹುದು. ಗೋವಿನ ಸಗಣೆಯಿಂದ ಮಾಡಿದ ಕುಳ್ಳುಗಳನ್ನು ತಾಮ್ರದ ಪಾತ್ರೆಯಲ್ಲಿರಿಸಿ ಪಾಲೀಶ್‌ ಮಾಡದ 1 ಚಮಚ ಅಕ್ಕಿ ಗೋವಿನ ತುಪ್ಪದಲ್ಲಿ ಅದ್ದಿ ಕುಳ್ಳಿನ ಮೇಲೆ ಹಾಕಿ ಬೆಂಕಿ ಹೊತ್ತಿಸಬೇಕು. ಇದರಿಂದ ಬರುವ ಹವೆ ಮನೆಯಲ್ಲಿ ವೈರಸ್‌ಗಳು ಬರದಂತೆ ನಿಯಂತ್ರಿಸುತ್ತದೆ ಎಂದು ರಾಯಭಾಗದ ಸಮಾಜಸೇವಕ, ಯುವ ಮುಖಂಡ ಅರುಣ ಐಹೊಳೆ ಅಭಿಪ್ರಾಯ ಪಟ್ಟರು.

ಸನಾತನ ಕಾಲದಿಂದಲೂ ರೂಢಿಸಿಕೊಂಡು ಬಂದ ಹೋಮಗಳಲ್ಲಿ ಅಗ್ನಿಹೋತ್ರ ಹೋಮ ಕೂಡ ಒಂದು. ಸರ್ವರೋಗಕ್ಕೂ ಮದ್ದು ಎನ್ನುತ್ತಾರೆ ವಿಜ್ಞಾನಿಗಳು. ಕಡಿಮೆ ಸಮಯದಲ್ಲಿ ಅಗ್ನಿ ಹೋತ್ರ ಹೋಮವನ್ನು ಮಾಡಬಹುದಾಗಿದೆ. ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಕೊರೋಣಾ ವೈರಸ್ ನ ಈ ಸಂದರ್ಭದಲ್ಲಿ ತೋರುತ್ತಿರುವ ಈ ಕಾಳಜಿಗೆ ನಾವೆಲ್ಲರೂ ತಲೆಬಾಗಬೇಕಾಗಿದೆ ಎಂದ ಅವರು ಪ್ರತಿ ನಿತ್ಯ ನಾವು ಮನೆಯವರೆಲ್ಲರೂ ಈ ಹೋಮವನ್ನು ನೆಡೆಯಿಸುತ್ತೇವೆ. ಅಗ್ನಿಹೋತ್ರ ಹೋಮದ ಪ್ರಯೋಜನ
ಸರಳ ಹೋಮ ಪದ್ಧತಿ ಇದಾಗಿದ್ದು, ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯಕ್ಕೆ ಸರಿಯಾಗಿ ಕೇವಲ 15 ನಿಮಿಷಗಳಲ್ಲಿ ಈ ಹೋಮವನ್ನು ಮಾಡಬಹುದು. ಮನೆಯಲ್ಲಿ ಯಾರು ಬೇಕಾದರೂ ಈ ಹೋಮವನ್ನು ಮಾಡಬಹುದು. ವಯಸ್ಸಿನ ಭೇದ – ಭಾವವಿಲ್ಲದೇ ಎಲ್ಲರೂ ಈ ಹೋಮವನ್ನು ಮಾಡಬಹುದಾಗಿದೆ ಎಂದು ವಿವರಿಸಿದರು.


Leave a Reply