Belagavi

ರೈತ ಹೊಟ್ಟೆ ತುಂಬಿಸಿದರೆ,ಕವಿ ಎದೆ ತುಂಬಿಸುತ್ತಾನೆ


ಚುಟುಕು ಸಾಹಿತ್ಯ ಸಮಾಜದ ದುರ್ವ್ಯವಸ್ತೆಯ ವಿರುದ್ದ ಸಿಡಿದೆದ್ದಿದೆ.ಇಂತಹ ಚುಟುಕು ಸಾಹಿತ್ಯ ರಚಿಸಿದ ಚುಟುಕು ಬ್ರಹ್ಮ ದಿನಕರ ದೇಸಾಯಿ.ಸಿ ಪಿ.ಕೆ.ಅಕಬರ ಅಲಿ.ದುಂಡಿರಾಜ.ಜಿನದತ್ತ ದೇಸಾಯಿ.ಜರಗನಹಳ್ಳಿ ಶಿವಶಂಕರ ಟಿ.ಸಿ.ಮೊಹರೆ ಇವರೆಲ್ಲ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಹೊಸ ದಿಕ್ಕನ್ನು ಹುಟ್ಟು ಹಾಕಿದರು.ಹೀಗಾಗಿ ರೈತ ನಾಗರಿಕನ ಹೊಟ್ಟೆ ತುಂಬಿಸಿದರೆ,ಕವಿ ಸಹ್ರದಯಿಗರ ಎದೆ ತುಂಬಿಸುತ್ತಾನೆ.ಎಂದು ಸವದತ್ತಿಯ ಕವಿ,ಸಾಹಿತಿ *ಶ್ರೀ ನಾಗೇಶ ನಾಯಕ* ಹೇಳಿದರು.

ಅವರು *ಗೋಕಾವಿ ಗೆಳೆಯರ ಬಳಗ* ಕೋರೋನಾ ಲಾಕ್ ಡೌನ್ ನಿಮಿತ್ಯ ಗೂಗಲ್ ಮೀಟ ನಲ್ಲಿ ಹಮ್ಮಿಕೊಂಡಿದ್ದ ವೆಬಿನಾರ್ ನ ನಾಲ್ಕನೇ ಉಪನ್ಯಾಸ ಮಾಲಿಕೆಯ ಚುಟುಕು ಸಾಹಿತ್ಯದ ಅವಲೋಕನ ವಿಷಯ ಕುರಿತು ಪ್ರಭಂಧ ಮಂಡಿಸಿದರು.
ಗೋಕಾಕದ ಸಂಶೋಧಕಿ.ವಿಮರ್ಶಕರಾದ *ಪ್ರೊ.ಮಹಾನಂದ ಪಾಟೀಲ* ಆಶಯ ನುಡಿ ಆಡುತ್ತಾ ಚುಟುಕು ವಾಮನ ರೂಪದಲ್ಲಿದ್ದರೂ ತ್ರಿವಿಕ್ರಮನ ಬಲವನ್ನು ಹೊಂದಿದೆ.ಹಲವು ದಶಕದ ಹಿಂದೆ ಅನಾದರವಿದ್ದರೂ ನಂತರದ ಕಾಲದಲ್ಲಿ ವಿಭಿನ್ನ ಚುಟುಕು ಸಾಹಿತ್ಯ ಪ್ರಕಾರವಾಗಿ ಬೆಳೆಯಿತು.ಎಂದರು.
ಐವತ್ತಕ್ಕೂ ಹೆಚ್ಚು ಜನ ಪಾಲ್ಗೊಂಡ ವೆಬಿನಾರದಲ್ಲಿ ಹಲವರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ಕಲ್ಲೋಳಿ ಅಧ್ಯಾಪಕ *ಶಂಕರ ನಿಂಗನೂರ* ಸ್ವಾಗತಿಸಿ.ಪರಿಚಯಿಸಿದರು.
ಬಳಗದ ಸಂಚಾಲಕ *ಪ್ರಾ ಜಯಾನಂದ ಮಾದರ* ನಿರೂಪಿಸಿ,ವಂದಿಸಿದರು.


Leave a Reply