Koppal

ರಸಗೊಬ್ಬರ ಬೆಲೆ ಏರಿಕೆ ಮಾಡಿದ ಕೇಂದ್ರ ಸಚಿವ ಸದಾನಂದಗೌಡ ಬಿಜೆಪಿ ಸರ್ಕಾರ ಮೇಲೆ ಗುಡುಗಿದ ರೆಡ್ಡಿ ಶ್ರೀನಿವಾಸ್ 


ಗಂಗಾವತಿ ..ಸನ್ಮಾನ್ಯ ನರೇಂದ್ರ ಮೋದಿಯವರ ಸರ್ಕಾರ ರೈತರ ರಕ್ತ ಹೀರುವ ಸರಕಾರ ಎಂದು ಕನಕಗಿರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಹಾಗೂ ಕಾರ್ಯಕರ್ತರು ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಸರ್ಕಾರವನ್ನು ಆರೋಪಿಸಿದರು..

ಪತ್ರಿಕಾಗೋಷ್ಠಿಯಲ್ಲಿ ರೆಡ್ಡಿ ಶ್ರೀನಿವಾಸ್ ಅವರು ಮಾತನಾಡಿದರು ಕೇಂದ್ರ ಸರಕಾರ ರಸಗೊಬ್ಬರವನ್ನು ದರವನ್ನು ಏರಿಕೆ ಮಾಡಿದೆ
ರೈತರು ಸಂಕಟದಲ್ಲಿ ಇದ್ದಾರೆ ರೈತರು ಬೆಳೆದ ಬೆಳೆಗೆ ಹಾಗೂ ವಿವಿಧ ರೀತಿಯ ರೋಗಗಳು ಅಥವಾ ಭತ್ತದ ಬೆಲೆ ಇರಲಾರದೆ ಬಹಳಷ್ಟು ರೈತರು ಸಂಕಷ್ಟದಲ್ಲಿ ಇದ್ದಾರೆ

ರಸಗೊಬ್ಬರ ಹೆಚ್ಚಳವು ಮಾಡಿದ್ದ ಕೇಂದ್ರ ಸರಕಾರ ಇಂತಹ ಸಂದರ್ಭದಲ್ಲಿ ಕೇಂದ್ರ ಸರಕಾರ ರೈತ ವಿರೋಧಿ ಸರಕಾರ ರೈತರನ್ನು ರಕ್ತ ಹೀರುವ ಸರಕಾರ ಯಾವುದೆಂದರೆ ಸನ್ಮಾನ್ಯ ನರೇಂದ್ರ ಮೋದಿ ಸರಕಾರ ಹಾಗೂ ಬಿಜೆಪಿ ಸರಕಾರ ಎಂದು ಸುದ್ದಿಗೋಷ್ಠಿಯಲ್ಲಿ ರೆಡ್ಡಿಶ್ರೀನಿವಾಸ ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದರು
ರೈತರು ಬೆಳೆದಂತಹ ಭತ್ತಕ್ಕೆ ಬೆಲೆ ಇಲ್ಲ ಅದರ ರಸಗೊಬ್ಬರಕ್ಕೆ ಮಾತ್ರ ದುಪ್ಪಟ್ಟು ಬೆಲೆ
50 ಕೆ.ಜಿ ರಸಗೊಬ್ಬರಕ್ಕೆ ಶೇಕಡಾ 40% ರಸಗೊಬ್ಬರ ಬೆಲೆ ಹೆಚ್ಚಳ ಮಾಡಿದ್ದಾರೆ
ದರ ಈಗಿನ ಕೆಳಗಿನ ದರದಲ್ಲಿ ಈಗಿನ ಬೆಲೆ ಇದೆ
50 kg DAP ಹಳೆ ರಸಗೊಬ್ಬರದ ಬೆಲೆ ಅಂದಾಜು 1200 ಈಗಿನ ದರ 1900 ₹ಹೆಚ್ಚಳವಾಗಿದೆ

50 KG 20-20-13 ಹಳೆ ದರ 925 ಹೊಸ ರಸಗೊಬ್ಬರದ ದರ 1400 ₹
ಎಲ್ಲಾ ರಸಗೊಬ್ಬರ ಬೆಲೆ 40%ಹೆಚ್ಚಳವಾಗಿದ್ದು ರೈತರು ಕಂಗಲಾಗಿದ್ದಾರೆ
ಮುಂದಿನ ದಿನಮಾನದಲ್ಲಿ ರಾಸಾಯನಿಕ ಗೊಬ್ಬರದ ದರ ಬೆಲೆ ಕಡಿಮೆ ಆಗದಿದ್ದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಕೊಪ್ಪಳ ಜಿಲ್ಲಾ ದಲ್ಲಿ ದೊಡ್ಡ ಮಟ್ಟದಲ್ಲಿ ಹೋರಾಟವನ್ನು ಹಮ್ಮಿಕೊಳ್ಳುತ್ತೇವೆ ಎಂದು ಕನಕಗಿರಿ ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದರು
(ಹನುಮೇಶ್ ಬಟಾರಿ)


Leave a Reply