Belagavi

ಅಗ್ನಿಹೋತ್ರವನ್ನು ಮಾಡಿ ಎಲ್ಲವೂ ಸರಿ ಹೋಗುತ್ತದೆ : ಶ್ರೀ ನಿಜಗುಣ ದೇವರು


ಕೊರೋನಾ ಕನಸಿನಲ್ಲಿಯೂ ಕೂಡ ಭಯವನ್ನು ನಿರ್ಮಾಣ ಮಾಡುತ್ತಿದೆ. ಇದಕ್ಕೆ ಕಾರಣ ಎಲ್ಲಾ ಕಡೆ ಭಯದ ವಾತಾವರಣವೇ ನಾವೆಲ್ಲಾ ಬಿತ್ತುತ್ತಿದ್ದೇವೆ ಎನಿಸುತ್ತಿದೆ. ಎಲ್ಲದಕ್ಕೂ ಒಂದು ಮಾರ್ಗ ಇರುತ್ತದೆ. ಆ ಮಾರ್ಗವನ್ನು ಅನುಸರಿಸಿದರೆ ಖಂಡಿತವಾಗಿಯೂ ಇದರಿಂದ ಹೊರಬರಲು ಸಾಧ್ಯ. ಅಗ್ನಿಹೋತ್ರವನ್ನು ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಮಾಡಿದರೆ ಖಂಡಿತವಾಗಿಯೂ ಪ್ರಕೃತಿ ಶುದ್ಧವಾಗುತ್ತದೆ. ಇದಕ್ಕೆ ಹೋಮೋತೆರಪಿ, ಅಗ್ನಿಚಿಕಿತ್ಸೆ ಹೀಗೆಲ್ಲ ಹೇಳುತ್ತಾರೆ. ಇದರಿಂದ ಕೇವಲ ಮನೆಯ ಪರಿಸರ ಮಾತ್ರ ಸೂಕ್ತವಾಗುವುದಿಲ್ಲ. ನಿಮ್ಮ ತೋಟದಲ್ಲಿ ಮಾಡುವುದರಿಂದ ರೋಗಬಿದ್ದ ಪರನ್ನು ಕೂಡ ಇದರಿಂದ ತಡೆಗಟ್ಟಬಹುದು. ಅಂದಮೇಲೆ ಆರೋಗ್ಯಕ್ಕೆ ಇದು ಪೂರಕವಾಗಿದೆ ಅಗ್ನಿಹೋತ್ರ. ಇದನ್ನು ನಾವು ಕೂಡ ಮಾಡುತ್ತಿದ್ದೇವೆ. ಬೆಳಗಾವಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಎಲ್ಲಾ ಮಠಗಳಿಗೆ ದೇವಸ್ಥಾನಗಳಿಗೆ ತಾವೇ ಹೋಗಿ ಅದರ ಉಪಯೋಗದ ಮಾಹಿತಿಯನ್ನು ಕೊಡುತ್ತಿರುವುದು ನಿಜಕ್ಕೂ ಕೂಡ ಅಭಿಮಾನದ ಸಂಗತಿ ಎಂದು ಪಿ.ಜಿ ಹುಣಶ್ಯಾಳದ ಶ್ರೀ ಸಿದ್ದಲಿಂಗ ಕೈವಲ್ಯ ಆಶ್ರಮದ ಶ್ರೀ ನಿಜಗುಣ ದೇವರು ತಮ್ಮ ಮಠದಲ್ಲಿ ಅಗ್ನಿಹೋತ್ರವನ್ನು ಆರಂಭಿಸಿ ಮಾತನಾಡುತ್ತ ಹೆದರಬೇಡಿ ಎಲ್ಲದಕ್ಕೂ ಉಪಾಯವಿದೆ ಎಂದು ಕೊರೋಣಾದಿಂದ ತತ್ತರಿಸಿ ಜನರಿಗೆ ಧೈರ್ಯದ ಮಾತುಗಳನ್ನು ಹೇಳಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಬೆಳಗಾವಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರು ಎಲ್ಲಾ ಕಡೆ ಇವತ್ತು ಅಶುದ್ಧ ಗಾಳಿಯನ್ನು ಕುಡಿಯುತಿದ್ದೇವೆ. ನಾವೆಲ್ಲರೂ ಗಾಳಿಯನ್ನು ಶುದ್ಧೀಕರಣ ಮಾಡಬೇಕಾದರೆ ಖಂಡಿತವಾಗಿಯೂ ನಾವು ಅಗ್ನಿಹೋತ್ರ ವನ್ನು ಮಾಡಬೇಕು. ಈ ಹೋಮ ಹವನದಿಂದ ಪ್ರಕೃತಿ ಶುದ್ಧಿಯಾಗುತ್ತದೆ. ಅಗ್ನಿಹೋತ್ರ ನಿತ್ಯವೂ ಮಾಡುವಂಥದ್ದು ಇದಕ್ಕೆ ಜಾತಿ ಮತ ಪಂಥ ಪಂಗಡವಿಲ್ಲ. ಎಲ್ಲರೂ ಕೂಡ ಮಾಡಬಹುದಾಗಿದೆ. ಇವತ್ತು ಪಿ.ಜಿ ಹುಣಶ್ಯಾಳದ ನಿಜಗುಣ ದೇವರು ಕೂಡ ಆರಂಭಿಸುತ್ತಿರುವುದು ನನಗೆ ಅತೀವ ಸಂತೋಷ ತಂದಿದೆ ಎಂದರು.


Leave a Reply