Belagavi

ಸವದತ್ತಿಯಲ್ಲಿ ಕೋವಿಡ್ ಆರೈಕೆ ಕೇಂದ್ರ ಉದ್ಘಾಟನೆ


ಸವದತ್ತಿ: ಮಹಾಮಾರಿ ಕೊರೋನಾ ರೋಗವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಆದರೆ ಸಾರ್ವಜನಿಕರು ಈ ರೋಗ ತಗುಲದಂತೆ ಎಚ್ಚರದಿಂದ ಇರಬೇಕು ಮುಖಕ್ಕೆ ಮಾಸ್ಕ ಧರಿಸುವುದು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು. ಸೋಂಕಿತರು ಯಾವುದೇ ರೀತಿಯಿಂದ ಭಯಪಡದೆ ದೈರ್ಯದಿಂದ ಇರಬೇಕು.

ಸೋಂಕಿತರಿಗೆ ನಾನು ಔಷಧಿ ಮಾತ್ರೆಗಳ ವ್ಯವಸ್ಥೆಯನ್ನೂ ಕೂಡಾ ನೀಡಿರುವೆ. ಮತ್ತು ನಮ್ಮ ಶಾಸಕರ ಅನುದಾನದಲ್ಲಿ ಸವದತ್ತಿ ತಾಲೂಕಿಗೆ 45 ಲಕ್ಷ ರೂಪಾಯಿಗಳ ವೆಚ್ಚದಲ್ಲಿ 3 ಸುಸಜ್ಜಿತವಾದ ಅಂಬುಲೆನ್ಸಗಳನ್ನು ಖರೀದಿಸಲಾಗುವುದು ಎಂದು ಶಾಸಕ ಹಾಗೂ ಉಪ ವಿಧಾನಸಭಾ ಉಪ ಸಭಾಧ್ಯಕ್ಷ ಆನಂದ ಮಾಮನಿಯವರು ಹೇಳಿದರು.

ಅವರು ಪಟ್ಟಣದ ಕರೀಕಟ್ಟಿ ರಸ್ತೆ ಪಕ್ಕದಲ್ಲಿ ಶ್ರೀ ಕುಮಾರೇಶ್ವರ ಬಿ ಎಡ್ ಕಾಲೇಜಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಷ್ಟ್ರೀಯ ಸೇವಾ ಭಾರತಿ ಇವರ ವತಿಯಿಂದ ತೆರೆದಿರುವ ಕೋವಿಡ್ ಆರೈಕೆ ಮತ್ತು ಪ್ರತ್ಯೇಕ ಕೇಂದ್ರದ ಉದ್ಘಾಟನೆ ಮಾಡಿ ಮಾತನಾಡಿದರು. “ಸವದತ್ತಿ ಮುನವಳ್ಳಿ ಯರಗಟ್ಟಿ ಸರಕಾರೀ ಸಾರ್ವಜನಿಕ ಆಸ್ಪತ್ರೆಗಳಿಗೆ ಅಂಬುಲೆನ್ಸಗಳನ್ನು ನೀಡಲಾಗುವುದು.

ಈ ಒಂದು ಸೇವೆ ಮಾಡಲು ಈ ಕಾಲೇಜನ್ನು ನೀಡಿದ ಮಾಜಿ ಶಾಸಕರಾದ ಸುಭಾಸ ಎಸ್ ಕೌಜಲಗಿಯವರಿಗೆ ನಾನು ಅಭಿನಂದಿಸುವೆ. ಮಾದ್ಯಮದವರು ಕೊರೊನಾ ಸೋಂಕಿತರ ಮತ್ತು ಮೃತಪಟ್ಟವರ ಬಗ್ಗೆ ಹೆಚ್ಚು ಒತ್ತು ಕೊಡದೆ ಕೊರೊನಾ ಸೋಂಕಿನಿಂದ ಗುಣ ಮುಖರಾಗಿ ಬಂದವರ ಬಗ್ಗೆಯೂ ಕೂಡ ಮಾಹಿತಿ ನೀಡಬೇಕು.

ಈ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಷ್ಟ್ರೀಯ ಸೇವಾ ಭಾರತಿ ಇವರು ಮಾಡುವ ಕಾರ್ಯ ಶ್ಲಾಘನೀಯವಾದ ಕಾರ್ಯವಾಗಿದೆ. ಇವರು ಮಾಡುವ ಈ ಸೇವೆಗೆ ನಾನು ಕೂಡ ಸಹಾಯ ಮಾಡುವೆ ಸಾರ್ವಜನಿಕರು ಮನೆಯಲ್ಲಿಯೇ ಇದ್ದು ಜಾಗೃತವಾಗಿರಬೇಕು” ಎಂದು ಮಾತನಾಡಿದರು.

ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿದ ಗೊರವನಕೊಳ್ಳದ ಶಿವಾನಂದ ಮಹಾಸ್ವಾಮಿಗಳು ಮಾತನಾಡಿ ಜನ ಕೋರೋನಾ ಕುರಿತು ಭಯ ಪಡಬಾರದು. ಸೋಂಕಿನಿಂದ ಗುಣಮುಖರಾದವರು ದೈರ್ಯದಿಂದ ಅವರು ಬದುಕಿ ಬಂದ ರೀತಿಯನ್ನು ಅರಿಯಬೇಕು.ತಾವೂ ಧೈರ್ಯ ತಂದುಕೊಳ್ಳುವ ಜೊತೆಗೆ ಇತರರಿಗೂ ಧೈರ್ಯ ನೀಡುವ ಕಾರ್ಯಮಾಡಬೇಕು.ಎಂದು ಕರೆ ನೀಡಿದರು.

ಸಮಾರಂಭದ ಪ್ರಾರಂಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತ ಸಹ ಸೇವಾ ಪ್ರಮುಖರಾದ ಡಾಕ್ಟರ ನರಸಿಂಹ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಭೆಯಲ್ಲಿ ತಹಶೀಲ್ದಾರ ಪ್ರಶಾಂತ ಬಿ ಪಾಟೀಲ. ಪುರಸಭೆ ಮುಖ್ಯಾದಿಕಾರಿ ಪ್ರಕಾಶ ಎಮ್ ಚನ್ನಪ್ಪನವರ. ತಾಲೂಕು ವೈದ್ಯಾಧಿಕಾರಿ ಡಾಕ್ಟರ ಮಹೇಶ ಚಿತ್ತರಗಿ. ಡಾ. ಹೇಮಂತ ಭಸ್ಮೇ. ಡಾ ನಯನಾ ಹೇಮಂತ ಭಸ್ಮೇ. ಡಾ ಶ್ರೀಪಾದ ಸಬನಿಸ. ಡಾ. ನಾಗವೇಣಿ ನ ಕುಲಕರ್ಣಿ.ಸಂಘದ ಮುಖಂಡರಾದ ಸಿ ಬಿ ದೊಡಗೌಡರ. ಜಿ ವಾಯ್ ಕರಮಲ್ಲಪ್ಪನವರ.ಚಂದ್ರು ಸುತಗಟ್ಟಿ. ಮಾರುತಿ ಮೆಳ್ಳಿಕೇರಿ ಮೊದಲಾದವರೂ ಉಪಸ್ಥಿತರಿದ್ದರು.
(ವರದಿ ಈರಣ್ಣಾ ಹುಲ್ಲೂರ)


Leave a Reply