karanataka

ಹುಕ್ಕೇರಿ ಹಿರೇಮಠದಿಂದ ಕೋವಿಡ್ ಕಿಟ್ಟ ವಿತರಣೆ


ಬೆಳಗಾವಿ – ದೇಶದಲ್ಲಿ ಕೊರೋನಾ ಮಹಾಮಾರಿ ಅಟ್ಟಹಾಸದಿಂದ ದೀನೆ ದೀನೆ ಜನರು ಭಯಭೀತರಾಗಿದ್ದಾರೆ ಹಿಂತಹ ಸಂದರ್ಭದಲ್ಲಿ ಜನರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯವನ್ನ ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾಡುತ್ತಿದ್ದಾರೆ ಇ ದೀನ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಎಮ್ ಜಿ ಹಿರೇಮಠ ಅವರಿಗೆ 150 ಕೋವಿಡ್ ಕಿಟ್ಟನ್ನು ನೀಡಿದ್ದಾರೆ ಜಿಲ್ಲೆಯ ತುಂಬಾ 1000 ಕೋವಿಡ್ ಕಿಟ್ಟನ್ನು ನೀಡುವುದಾಗಿ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು ಹುಕ್ಕೇರಿ ಹಿರೇಮಠದ ಶ್ರೀ ಗುರುಶಾಂತೇಶ್ವರ ಜಾತ್ರೆಯನ್ನು ರದ್ದು ಮಾಡಿ ಶ್ರೀ ಮಠದಿಂದ ಕೋವಿಡ್ ರೋಗಿಗಳಿಗೆ ಉಚಿತ ಅಂಬುಲೆನ್ಸ ನೀಡುವುದಾಗಿ ಹೇಳಿದರು.

ಹುಕ್ಕೇರಿ ಹಿರೇಮಠದ ಶ್ರೀ ಗಳು ಸದಾ ಸಾಮಾಜಿಕ ಕಾರ್ಯವನ್ನು ಮಾಡುವುದರ ಜೊತೆಗೆ ಇ ಕೋವಿಡ್ ಸಂದರ್ಭದಲ್ಲಿ ಕೋವಿಡ್ ಕಿಟ್ಟನ್ನು ನೀಡಿ ಜನರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯವನ್ನ ಮಾಡುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಎಮ್ ಜಿ ಹಿರೇಮಠ ಅವರು ಹೇಳಿದರು. ಕೋವಿಡ್ ಕಿಟ್ಟ ಸೇವೆಯನ್ನು ಬುಡಾ ಇಂಜಿನಿಯರ್ ಮಹಾಂತೇಶ ಹಿರೇಮಠ ಅವರು ಮಾಡಿದರು .
ಇ ಸಂದರ್ಭದಲ್ಲಿ ವೀರೆಶ ಹಿರೇಮಠ, ಪವನ ಹಿರೇಮಠ , ಈರಣ್ಣಾ ಗಣಾಚಾರಿ , ಮಹಾಂತೇಶ ಹಿರೇಮಠ ಉಪಸ್ಥಿತರಿದ್ದರು


Leave a Reply