Koppal

ಕರೋನಾ ಗೆ ತಹಸೀಲ್ದಾರ ವೇದ ವ್ಯಾಸ ಮುತಾಲಿಕ್ ಬಲಿ


ಕುಷ್ಟಗಿ:ಮಹಾಮಾರಿ ಕರೋನಾ ಕಾಯಿಲೆಯಿಂದ ಬಳಲುತ್ತಿದ್ದ ತಹಸೀಲ್ದಾರ ವೇದ ವ್ಯಾಸ ಮುತಾಲಿಕ್ ಬಲಿಯಾಗಿದ್ದಾರೆ. ಇವರು ಕೊಪ್ಪಳದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಾವನ್ನಪ್ಪಿದ್ದಾರೆ. ಇವರ ಅಂತ್ಯಕ್ರಿಯೆ ಭಾನುವಾರ ನೆರವೇರಿತು. ಇವರು ಹನುಮನಾಳ, ತಾವರಗೇರಾ ದಲ್ಲಿ ಉಪ ತಹಸೀಲ್ದಾರ ಆಗಿ, ಕುಷ್ಟಗಿ ತಹಸೀಲ್ ಕಛೇರಿಯಲ್ಲಿ ಶಿರಸ್ತೆದಾರ ರಾಗಿ, ಗ್ರೇಡ್2 ತಹಸೀಲ್ದಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.ನಂತರ ಬಾಗಲಕೋಟೆ ಜಿಲ್ಲೆಯ ಇಲಕಲ್ ತಾಲೂಕ ತಹಸೀಲ್ದಾರರಾಗಿ ಕಾರ್ಯ ನಿರ್ವಹಿಸಿದ್ದರು.ಇವರಿಗೆ ಪತ್ನಿ ಪುತ್ರ ಪುತ್ರಿ ಇದ್ದಾರೆ.ಇವರು ಕುಷ್ಟಗಿ ಪಟ್ಟಣದಲ್ಲಿ ವಾಸವಿದ್ದರು.

ಆರ್ ಶರಣಪ್ಪ ಗುಮಗೇರಾ.


Leave a Reply