State

ಸಂಪೂರ್ಣ ಲಾಕ್ ಡೌನ್ ಗೆ ಜನತೆ ಸಹಕಾರ ನೀಡಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿಕೆ.


ಕುಷ್ಟಗಿ: ತಾಲೂಕಿನ ೩೫ ಗ್ರಾಮ ಪಂಚಾಯತಿಗೆ ಬೇಟಿ ನೀಡಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕೊರೋನಾದಿಂದ ಜನರು ಜಾಗೃತಿ ಆಗುವಂತೆ ಹೇಳಿದ್ದೇವೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.ಸುದ್ದಿಗಾರೊಂದಿಗೆ ಮಾತನಾಡಿದ ಅವರು ಪ್ರತಿ ಗ್ರಾಮ ಪಂಚಾಯತಿಗಳ ಅಧಿಕಾರಿಗಳು ಪ್ರತಿ ಹಳ್ಳಿಗೆ ತೆರಳಿ ವಾರ್ಡ ಸಭೆ ನೆಡೆಸಿ ಕೊರೋನಾ ಬಗ್ಗೆ ಜನರು ಜಾಗೃತರಾಗುವಂತೆ ಜಾಗೃತೆ ಮೂಡಿಸುತ್ತಿದ್ದಾರೆ ಎಂದರು.ಕಳೆದ ವರ್ಷ ಕರೋನಾ ಬೇರೆ ರೀತಿ ಇತ್ತು, ಆದರೆ ಈ ವರ್ಷ ಕರೋನಾ ಪ್ರತಿ ರೂಪವನ್ನು ಪಡೆದಿದೆ ಆದರೆ ಜನರು ಇನ್ನೂ ಜಾಗೃತರಾಗುತ್ತಿಲ್ಲ ಈ ಕ್ರೂರಿ ಕರೋನಾ ಹಳ್ಳಿಗಳಿಗೆ ನುಗ್ಗುತ್ತಿದೆ.

ಇದರಿಂದ ಜನರ ಜೀವ ಹಕ್ಕಿ ಪಕ್ಷಿಯಂತೆ ಹಾರಿ ಹೋಗುತ್ತಿವೆ. ಕೊಪ್ಪಳ ಜಿಲ್ಲೆಯಲ್ಲಿ ನಮ್ಮ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಕೃಷಿ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ ಪಾಟೀಲ ಐದು ದಿನ ಕೃಷಿ ಚಟುವಟಿಕೆ, ಆಸ್ಪತ್ರೆ ಪೆಟ್ರೋಲ್ ಬಂಕ್ ಹೊರತು ಪಡಿಸಿ ಉಳಿದ ಎಲ್ಲಾ ಅಂಗಡಿಗಳನ್ನು ಸಂಪೂರ್ಣ ಬಂದ್ ಮಾಡಲು ಸೂಚಿಸಿದ್ದಾರೆ. ಆದ್ದರಿಂದ ಜನತೆ ಜಾಗೃತರಾಗಿ ಲಾಕ್ ಡೌನ್ ಗೆ ಸಹಕರಿಸಿ ಕಡ್ಡಾಯವಾಗಿ ಮಾಸ್ಕ್ ದರಿಸಿ ಪ್ರತಿಯೊಬ್ಬರೂ ಸಾಮಾಜಿಕ‌ ಅಂತರವನ್ನು ಕಾಪಾಡಿಕೊಂಡು ಕರೋನಾದಿಂದ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.


Leave a Reply