Belagavi

ಸತ್ತಿಗೇರಿಯಲ್ಲಿ ನೂತನ ನ್ಯಾಯ ಬೆಲೆ ಅಂಗಡಿ ಪ್ರಾರಂಭ


ಯರಗಟ್ಟಿ: ಸಮೀಪದ ಸತ್ತಿಗೇರಿ ಗ್ರಾಮದಲ್ಲಿ ನೂತನ ನ್ಯಾಯ ಬೆಲೆ ಅಂಗಡಿ ಉದ್ಘಾಟನೆ ಹಾಗೂ ಪಡಿತರ ವಿತರಣೆ ಚಾಲನೆ ನೀಡಿದ ಪೂಜ್ಯ ಶ್ರೀ ಚಂದ್ರಶೇಖರ ಶಿವಾರ್ಚಾಯ ಮಹಾಸ್ವಾಮಿಗಳು.

ಈ ಸಂದರ್ಭದಲ್ಲಿ ಮಾತನಾಡಿದ ಮಳಿಮಲ್ಲೇಶ್ವರ ಕೃಷಿ ಪತ್ತಿನ ಸಹಕಾರಿ ಸಂಘ ಅಧ್ಯಕ್ಷರಾದ ಮಹಾಂತೇಶ ಗೋಡಿ ಸತ್ತಿಗೇರಿ ಗ್ರಾಮದ ಜನರ ಹಿತದೃಷ್ಠಿಯಿಂದ ನಮ್ಮ ಜನಪ್ರಿಯ ಶಾಸಕರಾದ ಆನಂದ ಮಾಮನಿಯವರು ನಮ್ಮ ಗ್ರಾಮಕ್ಕ ಹೊಸದಾಗಿ ನ್ಯಾಯ ಬೆಲೆ ಅಂಗಡಿ ಪ್ರಾರಂಭಿಲು ಎಲ್ಲಾರಿತೀಯ ಅನುಕೂಲ ಮಾಡಿಕೊಟ್ಟಿದ್ದಾರೆ. ಅವರಿಗೆ ನಮ್ಮ ಪಿಕೆಪಿಎಸ್ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸುತ್ತೆವೆ.

ಈ ಸಂದರ್ಭದಲ್ಲಿ ಗ್ರಾ. ಪಂ. ಅಧ್ಯಕ್ಷರಾದ ಗೌಡಪ್ಪ ಸವದತ್ತಿ, ಮುಖ್ಯಕಾರ್ಯನಿರ್ವಾಹಕರಾದ ಸಂಗಮೇಶ ಸಂಗಪ್ಪನವರ, ಗ್ರಾ. ಪಂ. ಸದಸ್ಯರಾದ ಬಸವರಾಜ ನಾರಗುನ್ನವರ, ಶಾಹಿನಶಾ ಬಾಗವಾನ, ಪಿಕೆಪಿಎಸ್ ಸದಸ್ಯರಾದ ಶ್ರೀಶೈಲ ಸವದತ್ತಿ, ಬಸವರಾಜ ಮುನ್ಯಾಳ, ಷಣ್ಮುಕ ಬಳಿಗಾರ, ಇಬ್ರಾಹಿಂಸಾಬ ಮುಲ್ಲಾ, ಗುರುಕಿರಣ ಇಳಿಗೇರ, ನಿಂಗಪ್ಪ ತುರಮಂದಿ, ಗುರಪ್ಪ ಗೋಡಿ, ಲಕ್ಷ್ಮಪ್ಪ ಹೆಗಡಿ, ಸಿದ್ದಭೀರಪ್ಪ ಪೂಜೇರ, ತಿಪ್ಪಣ್ಣ ಮುನ್ಯಾಳ, ಬಸವರಾಜ ಕೋಟ್ರಶೆಟ್ಟಿ, ದುರಗಪ್ಪ ಬಂಡಿವಡ್ಡರ, ಮಲ್ಲಿಕಾರ್ಜುನ ಹೂಗಾರ ಇನ್ನುಳಿದವರು ಉಪಸ್ಥಿತರಿದ್ದರು.
(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply