karanataka

ನಾಗನೂರು ರುದ್ರಾಕ್ಷಿಮಠದಿ೦ದ ಕೋರೋನಾ ಚಿಕಿತ್ಸೆ ಪಡೆಯುತ್ತಿರುವ ಸಂಬಂಧಿಗಳಿಗೆ ಪ್ರಸಾದ


ಬೆಳಗಾವಿ : ನಾಗನೂರು ರುದ್ರಾಕ್ಷಿಮಠ (ಬೆಳಗಾವಿ )ದಿ೦ದ ಕರೋನಾ ಮಹಾಮಾರಿಗೆ ತುತ್ತಾದ ದವಾಖಾನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಬಂಧಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ.

ಸುಮಾರು ೨೫೦ ಪೊಟ್ಟಣಗಳನ್ನು ಇಂದು ಪರಮಪೂಜ್ಯ  ಪೂಜ್ಯ ಶ್ರೀ ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು    ಪ್ರಸಾದ ರೂಪದಲ್ಲಿ ನೀಡುವುದರ ಮೂಲಕ ಈ ಅನ್ನದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಕಾರ್ಯ ಪ್ರತಿನಿತ್ಯ ಆಸ್ಪತ್ರೆಗೆ ಬರತಕ್ಕಂತಹ ಬಡರೋಗಿಗಳಿಗೆ ಅರ್ಪಣೆಯಾಗಲಿದೆ.

ಈ ಆಹಾರದ ಪೊಟ್ಟಣಗಳನ್ನು ಬೆಳಗಾವಿಯ ಸರಕಾರಿ ಆಸ್ಪತ್ರೆಯಲ್ಲಿಂದು ವಿತರಿಸಲಾಯಿತು.
ನಾಗನೂರು ರುದ್ರಾಕ್ಷಿಮಠ ನೂರಾರು ವರ್ಷಗಳಿಂದ ಬೆಳಗಾವಿಯಲ್ಲಿ ಜ್ಞಾನ ದಾಸೋಹ ಮತ್ತು ಪ್ರಸಾದ ಸೇವೆಯನ್ನು ಪ್ರತಿ ಸಂಕಷ್ಟದ ಸಮಯದಲ್ಲಿ ಮಾಡುತ್ತ ಬಂದಿದೆ ಇದರ ಸದುಪಯೋಗವನ್ನು ಸಂಕಷ್ಟದಲ್ಲಿರುವ ಪಡೆದುಕೊಳ್ಳಬೇಕಾಗಿ ಪೂಜ್ಯರು ವಿನಂತಿಸಿದ್ದಾರೆ.
ಇಂದಿನಿಂದ ಈ ವಿತರಣೆಯ ಸೇವೆಯನ್ನು ಮಹಾಂತ ವಕ್ಕುಂದ ಫೌಂಡೇಶನ್ ತಂಡ ಮಾಡುತ್ತಿದೆ. ಮಹಾಂತೇಶ ವಕ್ಕುಂದ ಇವರ ತಂದೆಯವರು ಕೂಡ ಶ್ರೀಮಠದ ಸೇವಾ ಭಕ್ತರಾಗಿದ್ದದು ಇಲ್ಲಿ ಸ್ಮರಣಾರ್ಥ.


Leave a Reply