karwar uttar kannada

ಕಾರವಾರ ನಗರ, ಚಿತ್ತಾಕುಲ ಹಾಗೂ ಮಲ್ಲಾಪುರ ಗ್ರಾಮ ಪಂಚಾಯತ್ ಪ್ರದೇಶ ವಿಶೇಷ ಕಂಟೇನಮೆಂಟ್ ಜೋನ್


ಕಾರವಾರ ಮೇ 17 : ತಾಲೂಕಿನ ಕಾರವಾರ ನಗರ ವ್ಯಾಪ್ತಿ ಹಾಗೂ ಚಿತ್ತಾಕುಲ ಹಾಗೂ ಮಲ್ಲಾಪುರ ಗ್ರಾಮ ಪಂಚಾಯತ್ ಪ್ರದೇಶಗಳನ್ನು ವಿಶೇಷ ಕಂಟೇನಮೆಂಟ್ ಜೋನ್ ಎಂದು ಘೋಷಿಸಲ್ಪಟ್ಟಿದ್ದು ಈ ಪ್ರದೇಶದ ಜನರು ಮನೆಯಿಂದ ಹೊರಗಡೆ ತಿರುಗಾಡದಂತೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ. ಈ ಪ್ರದೇಶದಲ್ಲಿನ ಜನರಿಗೆ ಜೀವನಾವಶ್ಯಕ ವಸ್ತುಗಳು , ದಿನಸಿ ಹಾಗೂ ಇತರೆ ಆಹಾರ ಸಾಮಗ್ರಿಗಳನ್ನು ನಗರ ಪ್ರದೇಶದಲ್ಲಿ ನಗರಸಭೆ ಕಾರವಾರದಿಂದ ಹಾಗೂ ಚಿತ್ತಾಕುಲ ಹಾಗೂ ಮಲ್ಲಾಪುರ ಪಂಚಾಯತ ವ್ಯಾಪ್ತಿಯಲ್ಲಿ ಗ್ರಾಮಪಂಚಾಯತಿ ವತಿಯಿಂದ ಪೂರೈಕೆ ಮಾಡಲಾಗುತ್ತದೆ ಎಂದು ತಹಶೀಲ್ದಾ ಆರ್.ವಿ.ಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಲ್ಲಿಯ ಸಾರ್ವಜನಿಕರು ಕಂಟೇನಮೆಂಟ್ ಜೋನ್ ವ್ಯಾಪ್ತಿಯಲ್ಲಿ ಮನೆಯಿಂದ ಹೊರಗಡೆ ತಿರುಗಾಡತಕ್ಕದ್ದಲ್ಲ, ಯಾರಾದರು ಹೊರಗಡೆ ತಿರುಗಾಡುತ್ತಿರುವುದು ಕಂಡುಬಂದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ -2005 ರಡಿ ದಂಡ ಹಾಗೂ ಶಿಕ್ಷೆಗೆ ಒಳಪಡಿಸಲಾಗುವುದು. ಈ ಕುರಿತು ಸಾರ್ವಜನಿಕರು ಸಹಕರೀಸಬೇಕು ಕೋವಿಡ್ -19 ಸಂಬಂಧಿಸಿದ ಯಾವುದೇ ಮಾಹಿತಿ ಬೇಕಾದಲ್ಲಿ ಕಾರವಾರ ತಹಶೀಲ್ದಾರ ಕಾರ್ಯಾಲಯದಲ್ಲಿ ಸ್ಥಾಪಿಸಲ್ಪಟ್ಟ 24*7 ಕೋವಿಡ್ ಕಾಲ್ ಸೆಂಟರ್ ನಂ: 08382-226331 ಅಥವಾ ಮೊಬೈಲ್ ಸಂಖ್ಯೆ: 8147745176ಗೆ ಸಂಪರ್ಕಿಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ಕಾರವಾರ ‌ನಗರಸಭೆ ವ್ಯಾಪ್ತಿಯಲ್ಲಿ ಮತ್ತು ಕಾರವಾರ ತಾಲೂಕಿನ ಚಿತ್ತಾಕುಲಾ ಮತ್ತು ಮಲ್ಲಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರದೇಶಗಳನ್ನು SPL Containment Zone ಗಳನ್ನಾಗಿಸಿ ಮಾನ್ಯ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು ಸದರಿ ಪ್ರದೇಶಗಳಲ್ಲಿ ಕೋವಿಡ್-19 ಮಾರ್ಗಸೂಚಿಯನ್ವಯ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ Dysp Karwar, CMC Commissioner Karwar, Tahshildar Karwar, EO Taluk Panchayath Karwar, CPI Karwar/ Rural PSI Karwar/ Rural ರವರೊಂದಿಗೆ ಸಭೆ ನಡೆಸಲಾಯಿತು. 1. ತುರ್ತು ವೈದ್ಯಕೀಯ ಸಂದರ್ಭಗಳನ್ನು ಹೊರತುಪಡಿಸಿ ಸಾರ್ವಜನಿಕರ ಓಡಾಟವನ್ನು ಕಡ್ಡಾಯವಾಗಿ ನಿರ್ಬಂಧಿಸುವುದು. 2. ಹೋಟೆಲ್ ಗಳಲ್ಲಿ ಯಾವುದೇ ಆಹಾರಗಳನ್ನು ಪಾರ್ಸೆಲ್ ನೀಡದೇ Delivery Boys ಮೂಲಕವೇ ಹೊಟೇಲ್ ನವರೆ ಆಹಾರಗಳನ್ನು ತಲುಪಿಸುವ ವ್ಯವಸ್ಥೆ ಮಾಡುವುದು. 3. ಅನವಶ್ಯಕ/ ಅನಗತ್ಯವಾಗಿ ಓಡಾಡುತ್ತಿರುವವರ ವಿರುದ್ಧ. ಮತ್ತು ಅನುಮತಿ ಪಡೆಯದೆ ಯಾವುದೇ ಅಂಗಡಿ‌ ಮುಂಗಟ್ಟುಗಳು ತೆರೆದಿದ್ದರೆ ಅಂತಹವರ ವಿರುದ್ಧ ಕೋವಿಡ್- 19 ಮಾರ್ಗಸೂಚಿ ಉಲ್ಲಂಘಿಸಿದ ಬಗ್ಗೆ ಪೋಲೀಸರಿಗೆ ಪ್ರಕರಣ ದಾಖಲಿಸಲು ತಿಳಿಸಲಾಯಿತು. 4. ವೈದ್ಯಕೀಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜನರ ಓಡಾಟಕ್ಕೆ ಅನುಕೂಲವಾಗುವಂತೆ ಆಟೋ ಚಾಲಕರ / ಮಾಲೀಕರ ಸಂಘದಿಂದ ನಿಗಧಿಪಡಿಸಿದ ಸ್ಥಳಗಳಲ್ಲಿ ತುರ್ತು ಸೇವೆಗಾಗಿ ಆಟೋಗಳು ಲಭ್ಯವಿರುವುದಾಗಿ ನಗರಸಭೆ ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರಚಾರ ಮಾಡುವುದು. 5. Home Isolation ಲ್ಲಿ ಇದ್ದವರ ಮನೆಗಳಿಗೆ ಗುರುತಿಗಾಗಿ Stickering ಮಾಡಿಸಿ ನೆರೆಹೊರೆಯ ಮನೆಗಳಲ್ಲಿರುವವರಿಗೆ ಮಾಹಿತಿ‌ ನೀಡಿ ಸೂಕ್ತ ಮುಂಜಾಗ್ರತೆ ವಹಿಸುವಂತೆ ತಿಳುವಳಿಕೆ ನೀಡುವುದು. ಈ ಬಗ್ಗೆ task force committee ರವರಿಂದ ಪ್ರತಿದಿನ ವರದಿ ಪಡೆದುಕೊಳ್ಳುವುದು. 6. NPCL Kaiga ದಲ್ಲಿ ಕೆಲಸ ಮಾಡುತ್ತಿರುವ ನೌಕರರು ಹೆಚ್ಚಿನದಾಗಿ ಕೈಗಾ ಟೌನ್ ಶಿಪ್ ನಲ್ಲಿ ಹಾಗೂ ಮಲ್ಲಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರದೇಶಗಳಲ್ಲಿದ್ದು ಸದರಿ ಕೆಲಸಗಾರರು NPCL Kaiga ಗೆ ಕೆಲಸಕ್ಕೆ ಹೋಗಿ ಬರಲು ಮುಂಜಾಗ್ರತ ಕ್ರಮಗಳೊಂದಿಗೆ ಸೂಕ್ತ ವ್ಯವಸ್ಥೆ ಮಾಡುವಂತೆ NPCL Kaiga ದ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸುವುದು. 7. ಕೋವಿಡ್- 19 ಸೋಂಕಿಗೊಳಗಾಗಿ Home Isolation ಲ್ಲಿ ಇದ್ದವರಿಗೆ Medicine Kit ಗಳನ್ನು ಸೋಂಕಿತರು ಇರುವ ಸ್ಥಳಗಳಿಗೆ ಹೋಗಿ ತಲುಪಿಸುವ ಬಗ್ಗೆ THO ರವರು ಕ್ರಮ ಕೈಗೊಳ್ಳುವುದು. 8. ವಿವಿಧ ಆಹಾರ ಪದಾರ್ಥಗಳನ್ನು/ ಸಾಮಗ್ರಿಗಳನ್ನು ಇತರೆ ದಿನಬಳಕೆಯ ವಸ್ತುಗಳನ್ನು ಮನೆ ಮನೆಗೆ ತಲುಪಿಸುವಂತಹ ವ್ತಕ್ತಿಗಳು ಸೂಕ್ತ ಮುಂಜಾಗ್ರತಾ ವಹಿಸಿ Mask , Glouse , Face shield ಗಳನ್ನು ಧರಿಸಿಯೇ Door Delivery ಗೆ ತೆರಳುವಂತೆ ಕ್ರಮ ವಹಿಸುವುದು. ಸಾರ್ವಜನಿಕರಿಗೆ ತೊಂದರೆಯಾಗದಂತೆ Containment Zone ಪ್ರದೇಶಗಳಲ್ಲಿ ಈ‌ ಮೇಲ್ಕಂಡ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಲು ಕ್ರಮ‌ಕೈಗೊಳ್ಳುವಂತೆ ತಿಳಿಸಲಾಯಿತು.


Leave a Reply