karwar uttar kannada

ಕೋವಿಡ್-೧೯ ಹಿನ್ನೆಲೆ; ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ ಪ್ರತೀ ಅರ್ಜಿದಾರರಿಗೆ ಉಚಿತವಾಗಿ ೧೦ ಕೆಜಿ ಆಹಾರಧಾನ್ಯ ವಿತರಣೆ


  • ಕಾರವಾರ ಮೇ. :* ಪಡಿತರ ಚೀಟಿಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಈವರೆಗೂ ಪಡಿತರ ಚೀಟಿ ಪಡೆಯದ ಅರ್ಜಿದಾರರಿಗೆ ೨೦೨೧ರ ಮೇ ಮತ್ತು ಜೂನ್‌ನ ಮಾಯೆಗೆ ಸಂಬಂದಿಸಿದಂತೆ ಕೋವಿಡ್-೧೯ ಹಿನ್ನಲೆಯಲ್ಲಿ ಪ್ರತಿ ಅರ್ಜಿಗೆ ೧೦ ಕೆಜಿ ಆಹಾರಧಾನ್ಯ ವಿತರಣೆ ಮಾಡಲಾಗುತ್ತದೆ ಎಂದು ಜಿಲ್ಲಾ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಮಂಜುನಾಥ ರೇವಣಾಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಜಿದಾರರು ತಮ್ಮ ಪಡಿತರ ಚೀಟಿ ಅರ್ಜಿಯ ಸಂಖ್ಯೆ ಹಾಗೂ ಆಧಾರ್ ಸಂಖ್ಯೆಯನ್ನು ಸಮೀಪದ ನ್ಯಾಯಬೆಲೆ ಅಂಗಡಿಗಳಿಗೆ ನೀಡಿ ಅಕ್ಕಿಯನ್ನು ಪಡದುಕೊಳ್ಳಬಹುದು. ಆದ್ಯತಾ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ಪ್ರತಿ ಮಾಯೆ ೧೦ ಕೆಜಿ ಅಕ್ಕಿಯನ್ನು ಉಚಿತವಾಗಿ ಹಾಗೂ ಆದ್ಯತೇತರ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿ, ಒಪ್ಪಿಗೆ ಸೂಚಿಸಿದ ಅರ್ಜಿದಾರರಿಗೆ ಪ್ರತಿ ಕೆಜಿಗೆ ೧೫ ರೂ ದರದಲ್ಲಿ ೧೦ ಕೆಜಿ ಅಕ್ಕಿಯನ್ನು ವಿತರಿಸಲಾಗುವುದು ಅವರು ಹೇಳಿದ್ದಾರೆ


Leave a Reply