Belagavi

ಸಂಸದೆ ಮಂಗಲಾ ಅವರಿಂದ ಆಶಾ ಕಾರ್ಯಕರ್ತರಿಗೆ ವಿವಿಧ ವಸ್ತುಗಳ ವಿತರಣೆ


¡ಬೆಳಗಾವಿ : ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದೆ ಶ್ರೀಮತಿ ಮಂಗಲಾ ಅಂಗಡಿ ಅವರು ಮಂಗಳವಾರ ಬೆಳಗಾವಿಯಲ್ಲಿ ಆಶಾ ಕಾರ್ಯಕರ್ತರಿಗೆ ವಿವಿಧ ವಸ್ತುಗಳನ್ನು ವಿತರಿಸಿದರು. ವಡಗಾವಿಯ ಆಶಾ ಕಾರ್ಯಕರ್ತರಿಗೆ ಮಾಸ್ಕ್, ಸ್ಯಾನಿಟೈಸರ್ ಹಾಗೂ ಕಿಟ್ ಗಳನ್ನು ನೀಡಿ ಮಾತನಾಡಿದ ಅವರು, ಕೊರೋನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿರುವ ಈ ಸಂದರ್ಭದಲ್ಲಿ ಅದರ ವಿರುದ್ಧ ಹೋರಾಡುವಲ್ಲಿ ನೀವು ಮಹತ್ವದ ಪಾತ್ರ ವಹಿಸುತ್ತಿದ್ದೀರಿ. ಈ ನಿಟ್ಟಿನಲ್ಲಿ ತಾವು ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಜನತೆಗೆ ಸೇವೆ ನೀಡುವಂತೆ ಮನವಿ ಮಾಡಿದರು.

ವಡಗಾವಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಿವಾನಂದ ಮಾಸ್ತಿಹೊಳಿ , ಮುಕ್ತಾ ಬೆಳಹಾರ, ದೀಪಾ ಲಕ್ಕನ್ನವರ, ರೇಣುಕಾ ಚವಾಣ್, ಲಕ್ಷ್ಮೀ ಲೋಹಾರ, ಭಾಗ್ಯಶ್ರೀ ಪಾಟೀಲ, ಸುನೀತಾ ಪಾಟೀಲ, ಆಶಾ ಸಾಂಗ್ಲಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.


Leave a Reply