Belagavi

ಗುತ್ತಿಗೆದಾರ ಡಿ.ಎಲ್.ಕುಲಕರ್ಣಿ ಕೋವಿಡ್ ಗೆ ಬಲಿ


ಬೆಳಗಾವಿ : ಬೆಳಗಾವಿ ಜಿಲ್ಲಾ ಗುತ್ತಿಗೆದಾರ ಸಂಘದ ಅಧ್ಯಕ್ಷರಾಗಿದ್ದ ಶ್ರೀ ಡಿ.ಎಲ್.ಕುಲಕರ್ಣಿ ಅವರು ಇಂದು ಮಂಗಳವಾರ ಮುಂಜಾನೆ ಕೋವಿಡ್ ಗೆ ಬಲಿಯಾಗಿದ್ದಾರೆ.ಅವರಿಗೆ 55 ವರ್ಷ ವಯಸ್ಸಾಗಿತ್ತು.

ಅವರ ಆಕ್ಸಿಜೆನ್ ಮಟ್ಟ ಕುಸಿದಿದ್ದರಿಂದ ಕಳೆದ ಕೆಲವು ದಿನಗಳಿಂದ ಕೆ.ಎಲ್.ಇ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ 10 ಗಂಟೆಗೆ ಕೊನೆಯುಸಿರೆಳೆದರು. ದಿವಂಗತರು ತಮ್ಮ ಹಿಂದೆ ಪತ್ನಿ,ಒಬ್ಬ ಪುತ್ರ ,ಒಬ್ಬ ಪುತ್ರಿ ,ತಂದೆ,ತಾಯಿ ಮತ್ತು ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ. ಬೆಳಗಾವಿ ಜಿಲ್ಲಾ ಗುತ್ತಿಗೆದಾರ ಸಂಘದ ಅಧ್ಯಕ್ಷರಾಗಿದ್ದ ಅವರು ಅನೇಕ ಸಾಮಾಜಿಕ ಸಂಘಟನೆಗಳೊಂದಿಗೆ ನಿಕಟ ಸಂಬಂಧ ಹೊಂದಿದ್ದರು.ಸ್ನೇಹ ಜೀವಿಯಾಗಿದ್ದ ಕುಲಕರ್ಣಿ ಅವರು ಕಳೆದ ಮೂರು ದಶಕಗಳಿಂದ ಸಿವಿಲ್ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದರು.


Leave a Reply