karanataka

ಒಂದೇ ಓಣಿಯಲ್ಲಿ  59 ಪಾಸಿಟಿವ್ ಪ್ರಕರಣಗಳು


ಕುಂದಗೋಳ : ಕುಂದಗೋಳ   ತಾಲೂಕು ದೇವನೂರು ಗ್ರಾಮದ ಒಂದೇ ಓಣಿಯಲ್ಲಿ  59 ಪಾಸಿಟಿವ್ ಪ್ರಕರಣಗಳು ಕಂಡು ಬಂದಿವೆ.ಪರಿಸ್ಥಿತಿ ಹತೋಟಿಗೆ ಗ್ರಾಮ ಪಂಚಾಯಿತಿ ಎಲ್ಲಿಲ್ಲದ ಶ್ರಮ ಪಟ್ಟು ಸೋತು ತಾಲೂಕು ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆಗೆ ವಿಷಯ ತಿಳಿಸಿದ್ದು ಇಂದು ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಮಹೇಶ್ ಕುರಿ ಹಾಗೂ ತಾಲೂಕು ವೈದ್ಯಾಧಿಕಾರಿ ಭಾಗಿರಥಿ ಮೆಡ್ಲೇರಿ ನೇತೃತ್ವದಲ್ಲಿ ಸಭೆ ನಡೆಸಿ ಕೋವಿಡ್ ಹತೋಟಿಗಾಗಿ ಇಡೀ ಗ್ರಾಮದ ಜನರಿಗೆ ಪ್ರತ್ಯೇಕವಾಗಿ ಸ್ವಾಬ್ ಕಲೆಕ್ಷನ್ ಕೈಗೊಳ್ಳಲಾಗಿದೆ.

ಗ್ರಾಮದಲ್ಲಿ ಸೋಂಕು ಕಾಣಿಸಿಕೊಂಡ ಜನರ ಮನೆ ಹಾಗೂ ಓಣಿಗಳನ್ನು ಸ್ಯಾನಿಟೈಜಿಂಗ್ ಮಾಡಿಸುವ ಕಾರ್ಯ ಸಹ ನಡೆದಿದ್ದು ಸೋಂಕು ಹತೋಟಿಗೆ ಬಾರದೆ ಇದ್ದಲ್ಲಿ ತಹಶೀಲ್ದಾರ ಮಾಹಿತಿ ಮೇರೆಗೆ ಮುಂದಿನ ನಾಲ್ಕು ದಿನಗಳಲ್ಲಿ ಇಡೀ ಗ್ರಾಮವನ್ನು ಸೀಲ್ ಡೌನ್ ಮಾಡುವ ಸೂತ್ರ ಕೈಗೊಳ್ಳಲಾಗುವುದು ಎನ್ನುತ್ತಿದ್ದಾರೆ  ಅಧಿಕಾರಿಗಳು.


Leave a Reply