Belagavi

22ರಿಂದ ಯರಗಟ್ಟಿ ಪಟ್ಟಣ ಲಾಕ್‌ಡೌನ್


ಯರಗಟ್ಟಿ : ಮಾನ್ಯ ಜಿಲ್ಲಾಧಿಕಾರಿಗಳ ಆದೇಶದಂತೆ ಕರೊನಾ ನಿಯಂತ್ರಣ ಉದ್ದೇಶದಿಂದ ಮೇ 22ರಿಂದ 25ರ ವರೆಗೆ ಯರಗಟ್ಟಿ ಪಟ್ಟಣದಲ್ಲಿ ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿದೆ

ಎಂದು ಪಿ ಎಸ್ ಐ ಪ್ರವೀಣ ಗಂಗೋಳ್ಳಿ ಮಾಹಿತಿ ನೀಡಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲಾಧಿಕಾರಿಗಳ ಆದೇಶದ ಜಾರಿಗೆ ಸಾರ್ವಜನಿಕರು ಸಹಕರಿಸಬೇಕು. 22ರ ಬೆಳಗ್ಗೆ 10 ಗಂಟೆಯಿಂದ ಆರಂಭಗೊಳ್ಳುವ ಲಾಕ್ ಡೌನ್ 25 ರ ಬೆಳಗ್ಗೆ 6ಗಂಟೆ ತನಕ ಇರಲಿದೆ. ಈ ವೇಳೆ ಔಷಧ ಅಂಗಡಿ, ಹಾಲಿನ ಮಳಿಗೆ ತೆರೆಯಲು ಮಾತ್ರ

ಅವಕಾಶ ಕಲ್ಪಿಸಲಾಗಿದೆ. ಅನಗತ್ಯವಾಗಿ ಪಟ್ಟಣದಲ್ಲಿ ಸಂಚರಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply