Belagavi

ಕೋರೊನಾ ವಾರಿಯರ್ಸಗೆ ಸ್ವಚ್ಛತಾ ಅರಿವು ಮೂಡಿಸುವ ಕಾರ್ಯಕ್ರಮ


ಯರಗಟ್ಟಿ: ಯರಗಟ್ಟಿ ತಾಲ್ಲೂಕಿನ ಯರಝರ್ವಿ ಗ್ರಾಮ ಪಂಚಾಯತಿಯಲ್ಲಿ ಕೊರೊನಾ ವಾರಿಯರ್ಸ್‌ಗೆ ಸ್ವಚ್ಛತಾ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ನೋಡಲ್ ಅಧಿಕಾರಿ ಉಮೇಶ ಕಾಳಿ ಎಲ್ಲಾ ಕೊರೊನಾ ವಾರಿಯರ್ಸ್‌ಗಳು ಪ್ರತಿಯೊಬ್ಬರ ಮನೆ ಮನೆಗೆ ತೆರಳಿ ಸ್ವಚ್ಚತೆಯ ಕುರಿತು ಅರಿವು ಮೂಡಿಸಬೇಕೆಂದರು.

ನಂತರ ವೈದ್ಯಾಧಿಕಾರಿ ಆರ್ ಎಸ್ ಬಾಳಿಕಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ನಂತರ ಪತ್ರಕರ್ತರಾದ ಇಮಾಮಸಾಬ ಹಣಬರಕಡಬಿ, ಹೇಮಂತ ಗೋಪಾಳಿ ಎಲ್ಲ ಕೊರೊನಾ ವಾರಿಯರ್ಸ್‌ಗೆ ಉಚಿತವಾಗಿ ಚಹಾ ವಿತರಿಸಿದರು.

ಈ ಸಂದರ್ಭದಲ್ಲಿ ಪಿಡಿಓ ಸೆರಿದಂತೆ ಗ್ರಾಪಂ ಅಧ್ಯಕ್ಷರು,ಸದಸ್ಯರು, ಆಶಾ, ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply