Belagavi

ಲಾಕ್ ಡೌನ್ ನಷ್ಟ : ಹಣ್ಣಿನ ಸಮೇತ ಬಾಳೆಗಿಡ ಕತ್ತರಿಸಿದ ರೈತ


ಯರಗಟ್ಟಿ : ಬಾಳೆ ಗಿಡವನ್ನು ಹಣ್ಣಿನ ಸಮೇತ ರೈತ ಕತ್ತರಿಸುತ್ತಿರುವ ಘಟನೆಯೊಂದು ತಾಲೂಕಿನ ಕಡಬಿ ಗ್ರಾಮದಲ್ಲಿ ನಡೆದಿದೆ.ಹೌದು ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಸರ್ಕಾರ ಕೆಲವು ನಿರ್ಬಂಧಗಳನ್ನು ಹೇರಿ ಲಾಕ್ ಡೌನ್ ಆದೇಶ ಹೊರಡಿಸಿದೆ.ರೈತ ಇಮಾಮಸಾಬ ಬಾಪುಸಾಬ ಕೊಟೂರ ಊರ್ಪ ಸನದಿ ಇವರು ತಮ್ಮ ಜಮೀನದಲ್ಲಿ ರಸಗೊಬ್ಬರ, ಬೀಜದಿಂದ ಹಿಡಿದು ಇತರೆ ಖರ್ಚುಗಳಿಗಾಗಿ ಸಾವಿರಾರು ರೂಪಾಯಿಗಳನ್ನು ಸಾಲ-ಸೂಲ ಮಾಡಿ ಸರ್ವೇ ನಂ 480/2 ರಲ್ಲಿ 4 ಎಕರೆ 2 ಗುಂಟೆ ವ್ಯಾಪ್ತಿಯಲ್ಲಿ ಬಾಳೆ ಬೆಳೆ ಬೆಳದಿದ್ದ.ಆದರೆ ಕೊರೊನಾ ಎರಡನೇ ಅಲೆಗೆ ಜನರು ಹೆದರಿ ಹೊರಗೆ ಬರುತ್ತಿಲ್ಲವಾದ್ದರಿಂದ ವ್ಯಾಪಾರ-ವಹಿವಾಟು ಸರಿಯಾಗಿ ನಡೆಯದೆ ಬಾಳೆಹಣ್ಣು ಕೊಳೆಯುತ್ತಿದ್ದು ತುಂಬಾ ನಷ್ಟ ಆಗುತ್ತಿದೆ ಬೆಳೆಗೆ ಮಾಡಿದ ಖರ್ಚಿನ ಹಣ ಸಹ ದೊರಕದೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.ಈ ಬಾಳೆಯಿಂದ ಅಧಿಕ ಉತ್ಪನ್ನ ತಗೆದು ಆರ್ಥಿಕವಾಗಿ ಸದೃಢನಾಗಬೇಕು ಎಂದುಕೊಂಡಿದ್ದ ರೈತನ ಕನಸು ಈಗ ಹುಸಿಯಾಗಿದೆ, ಇದರಿಂದ ಮನನೊಂದ ರೈತ ಸಂಪೂರ್ಣ ಬಾಳೆ ಬೆಳೆಯನ್ನು ನಾಶ ಪಡಿಸಿ. ಪತ್ರಕರ್ತರ ಜೊತೆ ತನ್ನ ಅಳಲನ್ನು ತೊಡಿಕೊಂಡು ಆಕ್ರೋಶ ಹೊರಹಾಕಿದ್ದಾನೆ.ಇಷ್ಟಾದರೂ ಸಹ ಸಂಬಂಧಿಸಿದ ಕೃಷಿ ಅಧಿಕಾರಿಗಳು ರೈತನಲ್ಲಿಗೆ ಧಾವಿಸದೆ ಇರುವುದು ಮುಜುಗರ ಉಂಟುಮಾಡಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ರೈತನಲ್ಲಿಗೆ ಧಾವಿಸಿ ಸಾಂತ್ವನ ಹೇಳಿ ಪರಿಹಾರ ನೀಡುವ ಕೆಲಸವನ್ನು ಮಾಡುತ್ತಾರೊ – ಇಲ್ಲವೊ ಎಂಬುದನ್ನು ಕಾದು ನೋಡಬೇಕಿದೆ.ರೈತನ ಹೆಸರು ಇಮಾಮಸಾಬ ಬಾಪುಸಾಬ ಕೊಟೂರ ಸಾವಿರಾರು ರೂಪಾಯಿಗಳ ಸಾಲ ತಂದು ಬಾಳೆ ಬೆಳೆ ಬೆಳದಿದ್ದೆ ಒಳ್ಳೆ ಉತ್ಪನ್ನ ತಗೆದು ಸಾಲ ಮುಟ್ಟಿಸಬೇಕೆಂದು ಕೊಂಡಿದ್ದೆ ಆದರೆ ಸರ್ಕಾರ ಲಾಕ್ ಡೌನ್ ಹೇರಿರುವುದರಿಂದ ವ್ಯಾಪಾರವಾಗದೆ ಬಾಳೆಹಣ್ಣು ಕೊಳೆಯುತ್ತಿದ್ದು ತೀರ ಸಂಕಷ್ಟಕ್ಕೀಡಾಗಿದ್ದೆನೆ ಬೆಳೆ ಮಾಡಿದ ಸಾದದ ಖರ್ಚುನ ಬಡ್ಡಿಗಾಗುವಷ್ಟು ಹಣ ಸಿಕ್ಕಿಲ್ಲ.
(ವರದಿ ಈರಣ್ಣಾ ಹೂಲ್ಲೂರ ಯರಗಟ್ಟಿ)


Leave a Reply