Gadag

ವೈದ್ಯಕೀಯ ಶಿಕ್ಷಣ ಸಚಿವ  ಡಾ. ಕೆ. ಸುಧಾಕರ್ ಅವರ ಗದಗ ಪ್ರವಾಸ


ಗದಗ     ಮೇ 20:  ಆರೋಗ್ಯ ಮತ್ತು ಕುಟುಂಬ ಕಲ್ಯಾಣ  ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು  ದಿ: 22-5-2021  ರಂದು  ಮಧ್ಯಾಹ್ನ  1.30 ಗಂಟೆಗೆ  ಗದುಗಿಗೆ ಆಗಮಿಸುವರು. ಮಧ್ಯಾಹ್ನ 2 ಗಂಟೆಗೆ ಗದಗ ಜಿಲ್ಲಾ ಆಸ್ಪತ್ರೆ ಹಾಗೂ ಸ್ಥಳೀಯ ಕೋವಿಡ್-19  ಆಸ್ಪತ್ರೆಗಳಿಗೆ ಭೇಟಿ  ನೀಡುವರು  ಹಾಗೂ ಪರಿಶೀಲನೆ ನಡೆಸುವರು.  ನಂತರ  ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ   ಜಿಲ್ಲಾ ಆರೋಗ್ಯ ಮತ್ತು  ಕುಟುಂಬ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಹಾಗೂ ಕೋವಿಡ್ -19 ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸುವರು. ನಂತರ ಬೆಂಗಳೂರಿಗೆ ಪ್ರಯಾಣ ನಡೆಸುವರು ಎಂದು ಸಚಿವರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.


Leave a Reply