Koppal

ಆಸ್ಪತ್ರೆ ರೋಗಿಗಳಿಗೆ ಮತ್ತು ನಿರ್ಗತಿಕರಿಗೆ ಅನ್ನ ನೀಡಿದ ಅನ್ನದಾನ ಮಾಹಾದಾನ ಯುವ ಪಡೆ


ಕುಷ್ಟಗಿ: ಪಟ್ಟಣದ ಅನ್ನದಾನ ಮಾಹಾದಾನ ಯುವಪಡೆ ಕುಷ್ಟಗಿ ಪೋಲಿಸ್ ಠಾಣೆ ಸಿ.ಪಿ.ಐ ನಿಂಗಪ್ಪ ರುದ್ರಕೊಳ್ಳ, ಪಿ.ಎಸ್.ಐ ತಿಮ್ಮಣ್ಣ ನಾಯಕ, ಹನಮಸಾಗರ ಪಿ.ಎಸ್.ಐ ಅಶೋಕ ಬೇವೂರ ಸೇರಿ ಕುಷ್ಟಗಿ ಸರಕಾರಿ ಆಸ್ಪತ್ರೆಯ ಒಳ ರೋಗಿಗಳಿಗೆ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳಿಗೆ ಚಿತ್ರನ್ನ ಮೊಸರು ನೀಡಿದರು.ಆಸ್ಪತ್ರೆಯ ಒಳರೋಗಿಗಳಿಗೆ ಮತ್ತು ನಿರ್ಗತಿಕರಿಗೆ ಹಾಗೂ ಕೊವೀಡ್-೧೯ ಕೊರೋನಾ ವೈರಸ್ ರೋಗಿಗಳಿಗೆ, ಪಟ್ಟಣದ ಭಿಕ್ಷೆ ಬೇಡುವಂತವರಿಗೆ, ಕೊಳಚೆ ಪ್ರದೇಶದ ಕುಟುಂಬಕ್ಕೆ ಸುಮಾರು ೩೦೦ಕ್ಕು ಹೆಚ್ಚು ಚಿತ್ರಾನ್ನ ಮೊಸರು ನೀಡಿದರು.ಈ ಸಂದರ್ಭದಲ್ಲಿ ಅನ್ನದಾನ ಮಾಹಾದಾನ ಯುವ ಯುವಕರಾದ ಮುತ್ತಣ್ಣ ಹೊಸಮನಿ, ಶಿವಕುಮಾರ್ ಸಜ್ಜನ್, ಮುಬಾರಕ್, ಶ್ರೀನಿವಾಸ, ಮಲ್ಲು ಹಿರೇಮನಿ, ಸಂಗಮೇಶ ಸೇರಿದಂತೆ ಇನ್ನು ಹಲವಾರು ಯುವ ಮಿತ್ರರರು ಉಪಸ್ಥಿತರಿದ್ದರು.

ಆರ್ ಶರಣಪ್ಪ ಗುಮಗೇರಾ.


Leave a Reply