Belagavi

ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ್ ಇನ್ನಿಲ್ಲ


ಬೆಳಗಾವಿ:- ಮಾಜಿ ಕೇಂದ್ರ ಸಚಿವರು, ರೈತ ಮುಖಂಡರು ಆಗಿದ್ದ ಬಾಬಾಗೌಡ ಪಾಟೀಲ್ ಅವರು ಮಹಾಮಾರಿ ಕೊರೊನಾಗೆ ಬಲಿಯಾಗಿದ್ದಾರೆ.
ಕೊರೊನಾ ಸೋಂಕಿ£Aದ ಬಳಲುತ್ತಿದ್ದ ಬಾಬಾಗೌಡ ಪಾಟೀಲ್ ಅವರು ಕಳೆದ ಒಂದು ವಾರದಿಂದ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ, ಶುಕ್ರವಾರ ಬೆಳಗಿನ ಜಾವ ಅವರು ಕೊನೆಯುಸಿರೆಳೆದಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕಬಾಗೇವಾಡಿ ಗ್ರಾಮದವರಾಗಿದ್ದ ಬಾಬಾಗೌಡ ಪಾಟೀಲ ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದರು. ರೈತ ಸಂಘದ ಮೂಲಕ ಮುನ್ನೆಲೆಗೆ ಬಂದಿದ್ದ ಬಾಬಾಗೌಡ ಪಾಟೀಲ್ ಈ ಭಾಗದ ರೈತರ ದೊಡ್ಡ ಶಕ್ತಿಯಾಗಿದ್ದರು. ರೈತರಿಗೆ ಅನ್ಯಾಯವಾಗಿದೆ ಎಂದು ತಿಳಿಯುತ್ತಿದ್ದಂತೆ ಆಳುವ ಪಕ್ಷದ ವಿರುದ್ಧ ಸಿಡಿದೆಳುತ್ತಿದ್ದ ಬಾಬಾಗೌಡ ಪಾಟೀಲ್‌ರು ಸರ್ಕಾರಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಅವರ ಅಗಲಿಕೆಯಿಂದ ಅವರ ಅಭಿಮಾ£ಗಳು, ಕುಟುಂಬಸ್ಥರಿಗೆ ತುಂಬಲಾರದ ನಷ್ಟವಾಗಿದೆ. ಇನ್ನು ಬಾಬಾಗೌಡ ಪಾಟೀಲ್‌ರ £ಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.


Leave a Reply