Belagavi

ಪೋಲಿಸ್ ಇಲಾಖೆ ಅಧಿಕಾರಿಗಳಿಂದ ರೂಟ್ ಮಾರ್ಚ್ ಜರುಗಿತು


ಯರಗಟ್ಟಿ : ಪಟ್ಟಣದಲ್ಲಿ ಪೋಲಿಸ್ ಇಲಾಖೆ ಸಿಬ್ಬಂದಿಗಳಿಂದ ಕೋವಿಡ್ ಜಾಗೃತಿ ಹಾಗೂ ಲಾಕ್ಡೌನ್ ಪರಿಣಾಮಕಾರಿ ಜಾರಿ ಹಿನ್ನೆಲೆಯಲ್ಲಿ ರೂಟ್ ಮಾರ್ಚ್ ಜರುಗಿತು.

ಸವದತ್ತಿ ಹಾಗೂ ಯರಗಟ್ಟಿ ಪಟ್ಟಣ ಪ್ರತಿ ಓಣಿಗಳಲ್ಲಿ ಸಂಚರಿಸಿ ಕೋವಿಡ್19 ಹೆಚ್ಚುತ್ತಿರುವ ಕಾರಣ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ದಿ: 22 ರಿಂದ 24 ವರೆಗೆ ಮೂರು ದಿವಸ ಸಂಪೂರ್ಣ ಲಾಕ್ ಡೌನ್ ಮಾಡಿ ಆದೇಶ ಹೊರಡಿಸಿದ ಹಿನ್ನೆಲೆ ಪೋಲಿಸ್ ಇಲಾಖೆ ಅಧಿಕಾರಿಗಳಿಂದ ಜಾಗೃತಿ ಹಾಗೂ ಲಾಕ್ಡೌನ್ ಪರಿಣಾಮಕಾರಿ ಜಾರಿ ಅಂಗವಾಗಿ ರೂಟ್ ಮಾರ್ಚ್ ಜರುಗಿತು.

ಈ ಸಂದರ್ಭದಲ್ಲಿ ಡಿ ವಾಯ್ ಎಸ್ ಪಿ ರಾಮನಗೌಡ ಹಟ್ಟಿ, ಸವದತ್ತಿ ಸಿಪಿಐ ಮಂಜುನಾಥ ನಡವಿನಮನಿ, ಸವದತ್ತಿ ಪಿಎಸ್ಐ ಶಿವಾನಂದ ಗುಡಗನಟ್ಟಿ, ಮುರಗೋಡ ಪಿಎಸ್ಐ ಪ್ರವೀಣ ಗಂಗೋಳ್ಳಿ, ಸವದತ್ತಿ ತಹಶೀಲ್ದಾರ ಪ್ರಶಾಂತ ಪಾಟೀಲ, ಯರಗಟ್ಟಿ ಉಪತಹಶೀಲ್ದಾರ ಜಿ. ಎಸ್. ದೊಡ್ಡಮನಿ, ಪುರಸಭೆ ಮುಖ್ಯಾಧಿಕಾರಿ ಪಿ. ಎಂ. ಚನ್ನಪ್ಪನವರ, ಯರಗಟ್ಟಿ ಪಂಚಾಯತ ಅಭಿವೃದ್ಧಿಅಧಿಕಾಯಾದ ಮಲ್ಲಪ್ಪ ಹಾರುಗೋಪ್ಪ, ಆಶಾ ಕಾರ್ಯಕರ್ತರು ಪೋಲಿಸ್ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply