Belagavi

ಅಸುಂಡಿ, ಶಿಂಗಾರಗೊಪ್ಪದಲ್ಲಿ ಧ್ವನಿವರ್ದಕ ಮುಖಾಂತರ ಕೊರೋನಾ ಜಾಗೃತಿ


ಸವದತ್ತಿ: ತಾಲೂಕಿನ ಅಸುಂಡಿ‌ ಗ್ರಾಮ‌ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಅಸುಂಡಿ ಹಾಗೂ ಶಿಂಗಾರಗೊಪ್ಪ ಗ್ರಾಮಗಳಲ್ಲಿ ಸೆಕ್ಟರ್ ಅಧಿಕಾರಿ ಹಾಗೂ ಗ್ರಾಮೀಣ ಕಾರ್ಯಪಡೆಯ ಎಲ್ಲ ಸದಸ್ಯರು ಸೇರಿ ಎರಡು ಗ್ರಾಮಗಳಲ್ಲಿ ಧ್ವನಿವರ್ಧಕ ಮೂಲಕ ಕೊರೋನಾ ಸಾಂಕ್ರಾಮಿಕ ರೋಗದ ತಡೆಗಾಗಿ ಜನರಿಗೆ ಜಾಗೃತಿ ಮೂಡಿಸಲಾಯಿತು. ಮತ್ತು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಮನೆ‌ಮನೆಗೆ ತೆರಳಿ ಸರ್ವೇ ಕಾರ್ಯ ಮಾಡಲು ತರ್ಮಲ್ ಸ್ಕ್ಯಾನರ ಹಾಗೂ ಆಕ್ಸಿಮಿಟರ ಗಳನ್ನು ನೀಡಲಾಯಿತು. ಮತ್ತು ಪಾಸಿಟಿವ್ ಬಂದ ವ್ಯಕ್ತಿಗಳ ಸಂಪರ್ಕದಲ್ಲಿರುವ ಪ್ರಥಮ ಮತ್ತು ದ್ವಿತಿಯ ವ್ಯಕ್ತಿಗಳ ಸ್ವ್ಯಾಬ ಟೆಸ್ಟ ಮಾಡಲಾಯಿತು.

ಈ ಸಂದರ್ಭದಲ್ಲಿ ಸೆಕ್ಟರ್ ಅಧಿಕಾರಿಯಾದ ಸಂಗನಗೌಡ ಹಂದ್ರಾಳ,ಪಿಡಿಓ ಆನಂದ ಸುತಗಟ್ಟಿ,ದ್ವಿತಿಯ ದರ್ಜೆ ಲೆಕ್ಕ ಸಹಾಯಕ ಪಕೀರಪ್ಪ ಕಾಳೆ, ಗ್ರಾಪಂ ಸದಸ್ಯರಾದ ಶಿವಣ್ಣ ಮಲ್ಲೂರ ಸೇರಿದಂತೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.
(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply