Belagavi

ಕೊರೊನಾ ವಾರಿಯರ್ಸಗೆ ಮಾಸ್ಕ ಮತ್ತು  ಕೋವಿಡ್ ಕೇರ ಮೆಡಿಕಲ್ ಕಿಟ್ ವಿತರಣೆ


ಸವದತ್ತಿ : ಶುಕ್ರವಾರದಂದು ಸ್ಥಳಿಯ ಮಾಮನಿ ಕಲ್ಯಾಣ ಮಂಟಪದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಎಂಟು ಸಾವಿರ ಮಾಸ್ಕ, ಆಶಾ ಕಾರ್ಯಕರ್ತೆಯರಿಗೆ ಆರು ಸಾವಿರ ಮಾಸ್ಕ ಹಾಗೂ  ಸವದತ್ತಿ ಪುರಸಭೆ ಪೌರ ಕಾರ್ಮಿಕರಿಗೆ ನಾಲ್ಕು ಸಾವಿರ ಮಾಸ್ಕ, ಒಟ್ಟು:18000 ಸಾವಿರ ಮಾಸ್ಕಗಳು, ಸ್ಯಾನಿಟೈಸರ್, 1000 ಕೋವಿಡ್ ಕೇರ ಮೆಡಿಕಲ್ ಕಿಟ್ ಮತ್ತು ಗ್ಲೌಸ್ ಗಳನ್ನು,  ಸಾಂಕೇತಿಕವಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ವಿಧಾನ ಸಭಾ ಉಪಸಭಾಧ್ಯಕ್ಷ ಆನಂದ ಮಾಮನಿ ಅವರ ನೇತೃತ್ವದಲ್ಲಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ತಹಶೀಲ್ದಾರ ಪ್ರಶಾಂತ ಪಾಟೀಲ, ತಾಲೂಕಾ ವೈದ್ಯಾಧಿಕಾರಿ ಮಹೇಶ ಚಿತ್ತರಗಿ, ತಾಲೂಕಾ ಕಾರ್ಯನಿರ್ವಾಹಕ ಅಧಿಕಾರಿ ಯಶವಂತಕುಮಾರ, ಪುರಸಭೆ ಮುಖ್ಯಧಿಕಾರಿ ಪಿ ಎಮ್ ಚನ್ನಪ್ಪನವರ, ಹಿರಿಯರಾದ ಕೆ. ಜಿ. ತಲ್ಲೂರಮಠ ಹಾಗೂ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply