Belagavi

ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ವಾಮನ ಕುಲಕರ್ಣಿ ಅವರ ನಿಧಾನಕ್ಕೆ ಸಂತಾಪ


ಬೆಳಗಾವಿ: ೨೪_ ಕ.ಸಾ.ಪ.ಬೆಳಗಾವಿ ಜಿಲ್ಲೆಯ, ಅಥಣಿ ತಾಲೂಕಿನ ಹಿರಿಯ ಸಾಹಿತಿಗಳಾದ ಶ್ರೀ ವಾಮನ ಕುಲಕರ್ಣಿ ಅವರು ನಿಧನರಾಗಿದ್ದಾರೆ, ಎಂದು ಹೇಳಲು ಅತೀವ ದುಃಖವೆನಿಸುತ್ತದೆ. ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ಹಾನಿಯಾಗಿದೆ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ಅವರ ಕುಟುಂಬ ವರ್ಗಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇವೆ. ಅವರ ದಿವ್ಯಾತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಕ.ಸಾ.ಪ.ಬೆಳಗಾವಿ ಜಿಲ್ಲಾಧ್ಯಕ್ಷರಾದ, ಶ್ರೀಮತಿ ಮಂಗಲಾ ಶ್ರೀ ಮೆಟಗುಡ್ಡ ಅವರು ಹಾಗೂ ಕ.ಸಾ.ಪ. ಕಾರ್ಯಕಾರಿ ಸಮಿತಿ ಸಭೆಯ ಸರ್ವ ಸದಸ್ಯರು, ಶ್ರೀ ವಾಮನ ಕುಲಕರ್ಣಿ ಅವರ ನಿಧನಕ್ಕೆ ಸಂತಾಪವನ್ನು ಸಲ್ಲಿಸಿದರು.


Leave a Reply