Belagavi

ವಿಶ್ವ ಸ್ಕಿಜೊಪ್ರೆನಿಯಾ ದಿನಾಚರಣೆ


ಬೆಳಗಾವಿ: ಆರೋಗ್ಯವೆನ್ನುವದು ಮೂಲತಃ ಮೂರು ಮುಖ್ಯ ಅಂಶಗಳಿAದ ರೂಪುಗೊಳ್ಳುತ್ತದೆ ಅದರಲ್ಲಿ ಮಾನಸಿಕ ಆರೋಗ್ಯವು ಒಂದಾಗಿದ್ದು ಅದರ ಕಾಳಜಿ ತುಂಬಾ ಮುಖ್ಯವಾದದ್ದು. ಇಂದು ಚಿತ್ತ ವೀಕಲತೆ (ಸ್ಕಿಜೊಪ್ರೆನಿಯಾ) ದಿವಸದ ಅಂಗವಾಗಿ ಆಸ್ಪತ್ರೆಯ ನಿರ್ದೇಶಕರು ಹಾಗೂ ಇಂದಿನ ಕಾರ್ಯಕ್ರಮದ ಅದ್ಯಕ್ಷ ಸ್ಥಾನ ವಹಿಸಿದ ಡಾ.ಎಸ್.ಸಿ.ಧಾರವಾಡ ಅವರು ಮಾತನಾಡಿದರು. ಕೇವಲ ಚಿತ್ತ ವಿಕಲತೆ (ಸ್ಕಿಜೊಪ್ರೆನಿಯಾ) ಅಷ್ಟೇ ಅಲ್ಲದೇ ಎಲ್ಲಾ ರೀತಿಯ ಮಾನಸಿಕ ಖಾಯಿಲೆಯ ಬಗ್ಗೆ ನಾವು ತಿಳಿಯಬೇಕಾಗಿದೆ ಹಾಗೂ ಮಾನಸಿಕ ಉಪಚಾರದ ಸದುಪಯೋಗ ಪಡೆಯಬೇಕಾಗಿದೆ ಎಂದು ಹೇಳಿದರು. ಪ್ರಸ್ತುತ ಕೊರೊನಾ ಮಹಾಮಾರಿಯ ಕಾಲದಲ್ಲಿ ಪ್ರತಿಯೊಬ್ಬ ನಾಗರಿಕನ ಮನಸ್ಸಿನಲ್ಲೂ ಕೊರೊನಾ ರೋಗಕ್ಕಿಂತ ಸೋಂಕಿನ ಭೀತಿಯು ಮನೆ ಮಾಡಿದೆ ಇದು ಜಾಗೃತಿ ಮಟ್ಟದಲ್ಲಿದ್ದರೆ ಒಳಿತು ಅತಿಯಾದರೆ ಇದೂ ಕೂಡ ಒಂದು ಮಾನಸಿಕ ರೋಗವಾಗಿ ಪರಿಣಮಿಸಬಹುದಾಗಿದೆ. ಇತ್ತೀಚಿನ ಆಧುನಿಕ ಯುಗದಲ್ಲೂ ಜನರು ಮೂಢ ನಂಬಿಕೆಗಳಿಗೆ ಮಾರುಹೊಗಿ ಮಾನಸಿಕ ಆರೋಗ್ಯವನ್ನು ಕಡೆಗಣಿಸುತ್ತಿರುವುದು ನಿಜಕ್ಕು ಖೇದಕರ ಅನಿಸುತ್ತಿದೆ. ಮಾನಸಿಕ ರೋಗಗಳು ಯಾವುದೇ ಮಾಟ ಮಂತ್ರ,, ದೈವಿಕ ಮೂನಿಸು, ದೇವ್ವಭೂತಗಳ ಕಾಟವಲ್ಲ ಸಕಾಲದಲ್ಲಿ ಚಿಕಿತ್ಸೆ ಪಡೆದರೆ ಸಾಮಾನ್ಯ ಜೀವನ ಸಾಗಿಸಬಹುದು ಎಂದು ತಿಳಿ ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ. ಬಿ ಎಸ್ ವiಹಾಂತಶೆಟ್ಟಿ ಮಾತನಾಡುತ್ತ ಚಿತ್ತ ವಿಕಾರತೆ (ಸ್ಕಿಜೊಪ್ರೆನಿಯಾ) ಹಾಗೂ ಇನ್ನಿತರೆ ಯಾವುದೇ ಮಾನಸಿಕ ಖಾಯಿಲೆಗಳು ದೈಹಿಕ ರೋಗಗಳಂತೆ ಸ್ವಲ್ಪ ಸಮಯದವರೆಗೆ ನಮ್ಮ ಮಾನಸಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತಲಿರುತ್ತವೆ. ಆದ್ದರಿಂದ ಅನ್ಯರೋಗಗಳಂತೆ ಇದನ್ನೂ ಭಾವಿಸಿ ಸರಿಯಾದ ಚಿಕಿತ್ಸೆಯನ್ನು ಹೊಂದಿ ಸಂತಸದ ಜೀವನ ಸಾಗಿಸಿರಿ ಎಂದು ಕರೆ ನೀಡಿದರು.
ಚಿತ್ತವಿಕಾರತೆ ಹೇಗೆ ಉದ್ಭವಿಸುತ್ತದೆ? ಅದು ಹೇಗೆ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ? ಎಂಬ ಇತ್ಯಾದಿ ವಿಷಯಗಳಮೇಲೆ ಆಸ್ಪತ್ರೆಯ ಮಾನಸಿಕ ರೋಗ ವಿಭಾಗದ ಮುಖ್ಯಸ್ಥರಾದ ಡಾ. ಅಂಟೋನಿಯೋ ಕರವಾಲ್ಹೋ ಹಾಗೂ ಡಾ. ಅಶ್ವಿನಿ ಪದ್ಮಶಾಲಿ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಸುಮಾರು ೨೫ ಕ್ಕೂ ಅಧಿಕ ನಾಗರಿಕರು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಮಾಸ್ಕ ಧರಿಸಿ ಸಾಮಾಜಿಕ ಅಂತರ ಕಾಪಾಡಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಸಂತೋಷ ಇತಾಪೆ ನಿರೂಪಿಸಿ ವಂದಿಸಿದರು.


Leave a Reply