Koppal

ಸೊಂಕಿತರ ಯೋಗ ಕ್ಷೇಮ ನೋಡಿಕೊಳ್ಳುವದು ಬಹಳ ಮುಖ್ಯ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಹೇಳಿಕೆ


ಕುಷ್ಟಗಿ: ತಾಲೂಕಿನಲ್ಲಿರುವ ಸೋಂಕಿತರ ಯೋಗ ಕ್ಷೇಮ ಮುಖ್ಯ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.ತಾಲೂಕಿನ ಹಳ್ಳಿಗಳಲ್ಲಿ ಸೋಂಕು ಹೆಚ್ಚಾಗುತ್ತಿದ್ದು ಸೋಂಕಿತರು ಆರ್.ಎಂ.ಪಿ ವೈದ್ಯರ ಜೊತೆ ಚಿಕಿತ್ಸೆ ಪಡೆಯದಂತೆ ನೋಡಿ ಕೊಳ್ಳಿ ಮತ್ತು ಸೊಂಕಿತರ ಆರೋಗ್ಯ ಯೋಗ ಕ್ಷೇಮ ಮುಖ್ಯವಾಗಿದ್ದು ಪ್ರತಿ ದಿನ ಅವರುಗಳ ಆರೋಗ್ಯದಲ್ಲಿ ಏರು ಪೇರು ಆಗದಂತೆ ನೋಡಿಕೊಳ್ಳಬೇಕು ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.ಕುಷ್ಟಗಿ ತಾಲೂಕು ಪಂಚಾಯತ ಸಭಾಂಗಣದಲ್ಲಿ ನಡೆದ ಕುಷ್ಟಗಿ ತಾಲೂಕಿನ ಸೊಂಕಿತರ ಆರೋಗ್ಯ ಮತ್ತು ಯೋಗ ಕ್ಷೇಮದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನಮ್ಮ ತಾಲೂಕಿನಲ್ಲಿ ಹೆಚ್ಚು ಸೊಂಕಿತರು ಆರ್.ಎಂ.ಪಿ ವೈದ್ಯರ ಸಲಹೆ ಮತ್ತು ಸಾಮಾನ್ಯ ನೆಗಡಿ ಕೆಮ್ಮು ಎಂದು ತಿಳಿದು ಸೊಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಆದ್ದರಿಂದ ಯಾವ ಒಬ್ಬ ಸೊಂಕಿತನು ಕೂಡ ಆರ್.ಎಂ.ಪಿ ಹತ್ತಿರ ಚಿಕಿತ್ಸೆ ಪಡೆಯಬಾರದು ಒಂದು ವೇಳೆ ಸೊಂಕಿತರನ್ನು ಕರೆದುಕೊಂಡು ಚಿಕಿತ್ಸೆ ನೀಡುತ್ತಿದ್ದರೆ ಅಂತಹ ವೈದ್ಯರ ಮೇಲೆ ಕ್ರಮ ಕೈಗೊಂಡು ಅವರುಗಳ ಕ್ಲಿನಿಕ್ ಗಳನ್ನು ಸೀಜ್ ಮಾಡಿ,ಹಾಗೂ ವಿನಾಕಾರಣ ಚಿಕಿತ್ಸೆ ನೀಡುವ ವೈದ್ಯರ ಮೇಲೆ ಕ್ರಮ ಕೈಗೊಳ್ಳಬೇಕು,ಮತ್ತು ನಮ್ಮ ಕುಷ್ಟಗಿ ತಾಲೂಕಿನಲ್ಲಿ ಇನ್ನು ಹೆಚ್ಚು ಕೊವೀಡ್ ಟೆಸ್ಟ್ ಮಾಡಿಸಿಕೊಂಡು, ಕೊರೋನಾ ಸೊಂಕು ಕಡೆಮೆಯಾಗುವಂತೆ ನೋಡಿಕೊಳ್ಳಬೇಕು.ಆರೋಗ್ಯ ಇಲಾಖೆಯ ಅಧಿಕಾರಿಗಳು ಪ್ರತಿಯೊಂದು ಹಳ್ಳಿಗಳಿಗೆ ತೆರಳಿ ಕೊವೀಡ್ ಲಸಿಕೆ ಹಾಕಿಸಿಕೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.ತಾಲೂಕಿನ ಎಲ್ಲಾ ಪ್ರತಿಯೊಂದು ಹಳ್ಳಿ ಮಟ್ಟದ ಆರ್.ಎಂ.ಪಿ ಡಾಕ್ಟರ್ ಗಳಿಗೆ ಯಾವುದೇ ರೀತಿಯಿಂದ ಕೊವೀಡ್ ರೋಗಿಗಳನ್ನು ನೋಡಲು ಅವಕಾಶ ಕೊಡಬಾರದು.ನೇರವಾಗಿ ಕೊವೀಡ್ ಸೆಂಟರ್ ಗೆ ಕಳಿಸಿ ಎಂದು ಆರ್.ಎಂ.ಪಿ ವೈದ್ಯರಿಗೆ ಸೂಚನೆ ನೀಡಿ ಅವರಿಗಳಿಗೆ ಸೊಂಕಿತರನ್ನು ಕೊವೀಡ್ ಸೆಂಟರ್ ಗೆ ಕಳಿಸುವಂತೆ ಹೇಳಬೇಕು, ಎಂದು ಅಧಿಕಾರಿಗಳಿಗೆ ಎಂದು ಸೂಚನೆ ನೀಡಿದರು.ಸೊಂಕಿತರನ್ನು ಪತ್ತೆ ಹಚ್ಚಬೇಕು, ಮತ್ತು ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹೆಚ್ಚು ಕೊರೋನಾ ಟೆಸ್ಟ್ ಮಾಡಬೇಕು.ತಾಲೂಕಿನ ರೈತರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಈಗ ತಾಲೂಕಿನಲ್ಲಿ ಬಿತ್ತನೆ ಕಾರ್ಯ ಜೋರಾಗಿದ್ದು ಖಾಸಗಿಯ ಪ್ರತಿ ಗೊಬ್ಬರ ಅಂಗಡಿಯಲ್ಲಿ ಬೀಜ,ಗೊಬ್ಬರ, ಔಷಧಗಳನ್ನು ರೈತರು ಖರೀದಿ ಮಾಡುತ್ತಾರೆ ರೈತರಿಗೆ ಯಾವ ಗೊಬ್ಬರದ ಬೆಲೆ ಮತ್ತು ಬೀಜದ ಬೆಲೆ ಗೊತ್ತಾಗುವದಿಲ್ಲ ಆದ್ದರಿಂದ ಗೊಬ್ಬರದ ಅಂಗಡಿ ಮಾಲೀಕರಿಗೆ ತಮ್ಮ ತಮ್ಮ ಅಂಗಡಿಗಳಲ್ಲಿ ದೊಡ್ಡ ಅಕ್ಷರದಲ್ಲಿ ರೇಟ್ ಬೋರ್ಡ್ ಗಳಲ್ಲಿ ಬರೆದು ಹಾಕುವಂತೆ ತಿಳಿಸಬೇಕು ಎಂದರು.ತಾಲೂಕಿನ ಪ್ರತಿ ರೈತ ಸಂಪರ್ಕ ಕೇಂದ್ರಕ್ಕೆ ಬೇಟಿ ನೀಡಬೇಕು ರೈತರಿಗೆ ಬೀಜ ಗೊಬ್ಬರ ಸಮಸ್ಯೆಯಾಗದಂತೆ ನೋಡಿಕೊಂಡು ರೈತರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಕೃಷಿ ಇಲಾಖೆ ಅಧಿಕಾರಿ ಮಾಹಾದೇವಪ್ಪ ಇವರಿಗೆ ಸಭೆಯಲ್ಲಿ ಸೂಚನೆ ನೀಡಿದರು.ತಾಲೂಕಿನ‌ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆಯರು ಸೋಂಕಿನ ಬಗ್ಗೆ ಉತ್ತಮ ಕೆಲಸ ಮಾಡುತ್ತಿದ್ದಾರೆ ಅದರಂತೆ ಕುಷ್ಟಗಿ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರಿಗೆ ಅಧಿಕಾರಿಗಳು ತಮ್ಮ ಕೇಂದ್ರದ ವ್ಯಾಪ್ತಿಯಲ್ಲಿ ಸೋಂಕಿತರು ಕಂಡು ಬಂದರೆ ಅಧಿಕಾರಿಗಳಿಗೆ ತಿಳಿಸಬೇಕು. ಪ್ರತಿ ಮನೆಗಳಿಗೆ ತೆರಳಿ ಕೊವೀಡ್ ಸೊಂಕಿನ ಬಗ್ಗೆ ಜಾಗೃತಿ ಮೂಡಿಸಲು ಸೂಚನೆ ನೀಡಬೇಕು ಎಂದು ಸಿ.ಡಿ.ಪಿ.ಓ ಅವರಿಗೆ ತಿಳಿಸಿದರು. ನಮ್ಮ ಕೊಪ್ಪಳ ಜಿಲ್ಲೆಯಾದ್ಯಂತ ಇನ್ನು ೬ ದಿನ ಸಂಪೂರ್ಣ ಲಾಕ್ ಡೌನ್ ಇದೇ ಆದ್ದರಿಂದ ಪೋಲಿಸರು ತಮ್ಮ ತಮ್ಮ ಠಾಣೆ ವ್ಯಾಪ್ತಿಯ ಎಲ್ಲಾ ಹಳ್ಳಿಗಳಿಗೆ ತೆರಳಿ ಜನರು ಸುಮ್ಮಸುಮ್ಮನೆ ಹೊರಗಡೆ ಬರದಂತೆ ನೋಡಿಕೊಂಡು
ಒಂದು ವೇಳೆ ಕೃಷಿ ಚಟುವಟಿಕೆಗಳಿಗೆ ಹೊರ ಬಂದರೆ ಮಾಸ್ಕ್ ಮತ್ತು ಸಮಾಜಿಕ ಅಂತರ ಕಾಪಾಡುವಂತೆ ಹೇಳಬೇಕು.ರೈತ ಸಂಪರ್ಕ ಕೇಂದ್ರ, ಆಸ್ಪತ್ರೆ, ಹಾಲು ಅಂಗಡಿಯನ್ನು ಹೊರತು ಪಡಿಸಿ ಜಿಲ್ಲಾಧಿಕಾರಿಗಳ ಆದೇಶದಂತೆ ಕ್ರಮ ಕೈಗೊಂಡು ಜನರನ್ನು ನಿಯಂತ್ರಣ ಮಾಡುವಲ್ಲಿ ಪೋಲಿಸರು ಯಶಸ್ವಿಯಾಗಬೇಕು ಎಂದು ಸಿ.ಪಿ.ಐ ನಿಂಗಪ್ಪ ರುದ್ರಪ್ಪಗೋಳ್ ಇವರಿಗೆ ತಿಳಿಸಿದರು.ಈ ಸಂದರ್ಭದಲ್ಲಿ ತಹಶೀಲ್ದಾರರಾದ ಎಂ.ಸಿದ್ದೇಶ, ತಾಲೂಕು ಪಂಚಾಯತ ಇಓ ತಿಮ್ಮಪ್ಪ, ಸಿ.ಪಿ.ಐ ನಿಂಗಪ್ಪ ರುದ್ರಪ್ಪಗೋಳ್,ತಾಲೂಕ ಪಂಚಾಯತಿ ಎಡಿ ವೆಂಕಟೇಶ ವಂದಾಲಿ ಉಪಸ್ಥಿತರಿದ್ದರು.

ಆರ್ ಶರಣಪ್ಪ ಗುಮಗೇರಾ.


Leave a Reply