Belagavi

ಮೂಡಲಗಿ ; ಸೊಂಕಿತರಿಗೆ ಔಷಧಿಯ ಕಿಟ್ ವಿತರಣೆ


ಹಳ್ಳೂರ : ಕೊರೋನಾ ಎರಡನೇ ಅಲೆಗೆ ಬ್ರೇಕ್ ನೀಡಲು ಸಂಕಲ್ಪ ತೊಟ್ಟಿರುವ ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮೂಡಲಗಿ ತಾಲ್ಲೂಕಿನ ಪ್ರತಿ ಹಳ್ಳಿಗಳ ಸೋಂಕಿತರಿಗೆ ಔಷಧೀಯ ಕಿಟ್ ಗಳನ್ನು ಹಾಗೂ ಸೋಡಿಯಂ ಹೈಪೋಕ್ಲೋರೈಡ್ವಿ ವಿತರಿಸಲಾಯಿತು.

ಅವರು ಹಳ್ಳೂರ ಗ್ರಾಮ ಪಂಚಾಯತಿ ಆವರಣದಲ್ಲಿ ಶನಿವಾರ ನಡೆದ ಸರಳ ಕೋವಿಡ್ ಸಭೆಯಲ್ಲಿ ಶಾಸಕರ ಪರವಾಗಿ ಅವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಅವರು ಪಂಚಾಯತ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.ಕೆಲವೇ ದಿನಗಳಲ್ಲಿ ಮೂಡಲಗಿ ಆರೋಗ್ಯ ಕೇಂದ್ರಕ್ಕೆ ಉಚಿತವಾಗಿ ಆಂಬುಲೆನ್ಸ್ ಸೇವೆ ಪ್ರಾರಂಭವಾಗಲಿದೆ. ಆಶಾ ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ಮನೆ ಮನೆಗೆ ತೆರಳಿ ಸರಕಾರ ನಿಯಮ ಪಾಲಿಸಿ ಜನರಿಗೆ ಕೊರೋನಾ ರೋಗ ಲಕ್ಷಣ ಬಗ್ಗೆ ಮಾಹಿತಿ ನೀಡಬೇಕು ಎಂದು ಹೇಳಿದರು.

ಗೋಕಾಕ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಮುತ್ತಣ್ಣ ಕೊಪ್ಪದ ಅವರು,ಮಾತನಾಡಿ ಸೋಂಕಿತರಿಗೆ ಅಗತ್ಯವಿರುವ ಔಷಧ ಕಿಟ್ಗಳನ್ನು ವಿತರಿಸುತ್ತಿರುವ ಶಾಸಕರ ಮಾನವೀಯತೆ ಮೆಚ್ಚುವಂತದ್ದು. ಈಗಾಗಲೇ ಅವಳಿ ತಾಲ್ಲೂಕಿನಲ್ಲಿ ಸೋಂಕಿತರಿಗೆ ಕೋವಿಡ್ ಕೇರ್ ಸೆಂಟರ್ ತೆರೆದು ಸ್ವಂತ ವೆಚ್ಚದಲ್ಲಿ ಆಕ್ಸಿಜನ್ ನೀಡುತ್ತಿದ್ದಾರೆ. ಗೋಕಾಕ್, ಮಲ್ಲಾಪೂರ.ಪಿ.ಜಿ. ಮೂಡಲಗಿ ಮತ್ತು ಯಾದವಾಡ ದಲ್ಲಿ ಅನುಕೂಲ ಕಲ್ಪಿಸಿಕೊಟ್ಟು ಪ್ರತಿ ಹಂತದಲ್ಲಿಯೂ ಅವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಮಾಡುತ್ತಿದ್ದಾರೆ. ಸೋಂಕಿತರಿಗೆ ಅಗತ್ಯವಾದ ಎಲ್ಲ ಬಗೆಯ ವಸ್ತುಗಳನ್ನು ನೀಡುತ್ತ, ಅವರ ಆರೈಕೆಗಾಗಿ ತಮ್ಮ ಸಿಬ್ಬಂದಿಯನ್ನು ನಿಯೋಜನೆ ಮಾಡಿದ್ದಾರೆ. ಇಷ್ಟೊಂದು ಕಾಳಜಿ ಮಾಡುತ್ತಿರುವ ಅಪರೂಪದ ಶಾಸಕರು ಎಂದು ಹೇಳಿದರು.

ಹಿರಿಯ ತಜ್ಞ ವೈದ್ಯ ಡಾ. ಆರ್. ಎಸ್. ಬೆಂಚಿನಮರಡಿ ಮಾತನಾಡಿ, ಲಾಕ್ ಡೌನ್ ಸಮಯದಲ್ಲಿ ಸಾರ್ವಜನಿಕರು ಅನಗತ್ಯವಾಗಿ ಹೊರಗೆ ಬಂದರೆ ಅಪಾಯಕಾರಿ ಆಗಬಹುದು. ಭಾರೀ ವೇಗದಲ್ಲಿ ಗ್ರಾಮೀಣ ಬಾಗದಲ್ಲಿ ಕೊರೋನಾ ಎರಡನೇ ಅಲೆ ರಾಣಕೇಕೆ ಹಾಕುತ್ತಿದೆ ಮುಂದಿನ ದಿನಗಳಲ್ಲಿ ಸಣ್ಣ ಪುಟ್ಟ ಮಕ್ಕಳಿಗೆ ಕೊರೋನಾ ಬರುವ ಸಾಧ್ಯತೆ ಇದೆ. ಗ್ರಾಮೀಣ ಬಾಗದ ಜನರು ಮಾಸ್ಕ್ ವಾರಗಟ್ಟಲೆ ಉಪಯೋಗಿಸುವದು ದೇಹಕ್ಕೆ ಅಪಾಯಕಾರಿ ದಿನಾಲೂ ನೀರಲ್ಲಿ ತೊಳೆದು ಸ್ವಚ್ಛಗೊಳಿಸಿ ಹಾಕಿಕೊಳ್ಳಬೇಕು. ಮೇಲಿಂದ ಮೇಲೆ ಕೈ ಸ್ವಚ್ಛವಾಗಿಟ್ಟುಕೊಳ್ಳಬೇಕು, ಹೊರಗಡೆ ಹೋಗಿ ಮನೆಯೊಳಗೇ ಹೋಗುವಾಗ ಕಾಲು ಕೈ ಮುಖ ತೊಳೆದು ಒಳಗೆ ಹೋಗಬೇಕು ಯಾವದಕ್ಕೂ ನಿರ್ಲಕ್ಷ ಮಾಡದೆ ಹೆದರದೆ ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ತಮ್ಮ ಕುಟುಂಬದ ಸದಸ್ಯರಕ್ಕಿಂತ ನಮ್ಮ ಹೆಮ್ಮೆಯ ಶಾಸಕರು ತಮ್ಮ ಆರೋಗ್ಯದ ಬಗ್ಗೆ ನೀಗಾ ಇಡುತ್ತಿದ್ದಾರೆ. ಅವಳಿ ತಾಲ್ಲೂಕಿನ ಜನರು ಸುರಕ್ಷಿತವಾಗಿ ಇರಬೇಕೆಂಬುದು ಅವರ ಆಶಯವಾಗಿದೆ. ಈಗಲಾದರೂ ಎಚ್ಚೆತ್ತುಕೊಂಡು ಕೊರೋನಾ ನಿಯಂತ್ರಣ ಸಾಧಿಸಲು ಎಲ್ಲರೂ ಬೆನ್ನೆಲುಬಾಗಿ ನಿಲ್ಲುವಂತೆ ಅವರು ಮನವಿ ಮಾಡಿಕೊಂಡರು.

ಇದೆ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ. ಕಂದಾಯ ನಿರೀಕ್ಷಕರು ಸಂಗಣ್ಣ ಹೊಸಮನಿ. ಪಿ ಎಸ್ ಐ ಎಚ್ ವಾಯ್ ಬಾಲದಂಡಿ.ಗ್ರಾ ಲೇ ಸಂಜು ಅಗ್ನೇಪ್ಪಗೋಳ. ಹಣಮಂತ ತೇರದಾಳ.ಬಸವರಾಜ ಲೋಕಣ್ಣವರ. ಮುರಿಗೆಪ್ಪ ಮಾಲಗಾರ. ಭೀಮಪ್ಪ ಡಬ್ಬನವರ. ಮಲ್ಲಪ್ಪ ಹೊಸಟ್ಟಿ. ಗ್ರಾಮ ಪಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಪಿಡಿಓ, ಸಿಬ್ಬಂದಿಗಳು ಪ್ರಾ.ಆ.ಕೇಂದ್ರದ ಸಿಬ್ಬಂದಿ ,ಮತ್ತು ಆಶಾ- ಅಂಗನವಾಡಿ ಕಾರ್ಯಕರ್ತರು ಇದ್ದರು.

ಜೀವ ರಕ್ಷಕ ಔಷಧಿ ಮತ್ತು ಕೊರೋನಾ ಸೋಂಕಿತರಿಗೆ ಹಾಗೂ ಕೊರೋನಾ ಕಾಳಜಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವರಿಗೆ ಅತಿ ಉಪಯುಕ್ತ, ದಿನ ನಿತ್ಯ ಔಷಧಿಗಳನ್ನು ಪೂರೈಸಲಾಯಿತು. ಪಲ್ಸ್ ಆಕ್ಷಿಮೀಟರ್, ಸಾನಿಟೈಸರ್, ಎನ್- 95 ಮಾಸ್ಕ್ ಗಳು, ಗ್ಲೌಸ್, ಸರ್ಜಿಕಲ್ ಮಾಸ್ಕ್,
ಇಂಜೆಕ್ಷನ್ ಗಳಾದ ಟಾಕ್ಸಿಮ್, ಪಿಪ್ಜೊ, ಡೆಕ್ಸಾನ್, ಮಾತ್ರೆಗಳಾದ ಫಾಬಿಪ್ಲೊ, ಅಜೀಥ್ರೋಮೈಸಿನ್, ಐವರ್ ಮಸಿಟಿನ್,ಡೊಲೋ-650, ಝಿಂಕ್, ಇಕೋಸ್ಪ್ರೇನ್, ಐವಿ-100 ಎಂ.ಎಲ್. ಸಲಾಯನ್ ಗಳನ್ನು ವಿತರಿಸಲಾಯಿತು.


Leave a Reply