Belagavi

ಕಡಬಿಯಲ್ಲಿ ಕೊರೊನಾ ತಪಾಸಣೆ


ಯರಗಟ್ಟಿ: ನಗರ ಪ್ರದೇಶದಿಂದ ಹಳ್ಳಿಗಳಿಗೆ ಮಹಾಮಾರಿ ರೋಗ ಹರಡದಂತೆ ಕಂಟ್ರೋಲ್ ಮಾಡಲು ವೈದ್ಯರ ನಡೆ ಹಳ್ಳಿಕಡೆ ಎಂದು ಮೊದಲು ಹಂತದಲ್ಲಿ ಅಂಗನವಾಡಿ ಆಶಾ ಕಾರ್ಯಕರ್ತೆಯರಿಂದ ಹಳ್ಳಿಗಳಲ್ಲಿ ಮನೆ ಮನೆಗೆ ತೆರಳಿ ಕೊರೊನಾ ಹೆಮ್ಮಾರಿ ರೋಗದ ಬಗ್ಗೆ ತಿಳುವಳಿಕೆ ಹೇಳಿ ತಪಾಸಣೆ ಮಾಡಿಸಲು ಬರುವಂತೆ ಮನವರಿಕೆ ಮಾಡಿ ತಪಾಸಣೆ ಮಾಡಿ ಲಸಿಕೆ ಹಾಗೂ ಮಾತ್ರೆಗಳನ್ನು ಕೊಡಲಾಯಿತು ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲ್ಲೂಕಿನ ಕಡಬಿ ಗ್ರಾಮದಲ್ಲಿ ಆರೋಗ್ಯ ಇಲಾಖೆ ಹಾಗೂ ಕೊರೊನಾ ವಾರಿಯರ್ಸ್‌ ತಂಡದವತಿಯಿಂದ ಕನ್ನಡ ಪ್ರಾಥಮಿಕ ಶಾಲಾ ಆವರಣದಲ್ಲಿ ಗ್ರಾಮದ ಜನರನ್ನು ಕೊರೋನಾ ತಪಾಸಣೆ ಮಾಡಲಾಯಿತು.

ಈ ಸಂಧರ್ಭದಲ್ಲಿ ಪಿಡಿಓ ಸುವರ್ಣಗೌರಿ ಕೊಣ್ಣೂರ, ಗ್ರಾಮಲ್ಲೆಕ್ಕಾಧಿಕಾರಿ ದೀಪಾ ತೆಗೂರ, ಕಾರ್ಯದರ್ಶಿ ಪ್ರಕಾಶ ಪಾಟೀಲ, ಆರೋಗ್ಯ ಇಲಾಖೆ,ಆಶಾ,ಅಂಗನವಾಡಿ, ಕಾರ್ಯಕರ್ತರು ಉಪಸ್ಥಿತರಿದ್ದರು.
(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply