Belagavi

ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಜಿಲ್ಲೆ ಗೂಗಲ್ ಮೀಟ್ ತಂತ್ರಾAಶದ ಮೂಲಕ “ಕರೋನಾ ಘಟ್ಟದ ಸವಾಲುಗಳು” ಉಪನ್ಯಾಸ ಕಾರ್ಯಕ್ರಮ


ಬೆಳಗಾವಿ:೨೫- ಕ.ಸಾ.ಪ. ಬೆಳಗಾವಿ ಜಿಲ್ಲೆಯ ಎಲ್ಲ ತಾಲೂಕು ಕಸಾಪ ಘಟಕಗಳ ಸಹಯೋಗದೊಂದಿಗೆ ರವಿವಾರ ದಿನಾಂಕ:೩೦/೦೫/೨೦೨೧ ರಂದು ಸಂಜೆ ೫ ಗಂಟೆಗೆ, “ಕರೋನಾ ಘಟ್ಟದ ಸವಾಲುಗಳು” ಎಂಬ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.
ವೆಬಿನಾರ್ ಮೂಲಕ ನಡೆಯುವ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕಾರ್ಯಾಧ್ಯಕ್ಷರು, ಕೆ.ಎಲ್.ಇ.ಸಂಸ್ಥೆ ಬೆಳಗಾವಿಯ ಡಾ.ಪ್ರಭಾಕರ ಕೋರೆ ಅಣ್ಣಾ ಅವರು ಉದ್ಘಾಟಿಸಲಿದ್ದಾರೆ. ಹಾಗೂ ಬೆಳಗಾವಿಯ ಖ್ಯಾತ ವೈಧ್ಯರಾದ ಡಾ.ವನಿತಾ ಮೆಟಗುಡ್ಡ(ಎಮ್.ಡಿ.ಡಿ.ಜಿ.ಒ,ಎಫ್,ಆಯ್.ಸಿ.ಒ.ಜೆ) ಅವರು “ಕರೋನಾ ಘಟ್ಟದ ಸವಾಲುಗಳು” ಎಂಬ ವಿಷಯದ ಬಗ್ಗೆ ಉಪನ್ಯಾಸವನ್ನು ನೀಡಲಿದ್ದಾರೆ. ಕ.ಸಾ.ಪ. ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಗಲಾ ಮೆಟಗುಡ್ಡ ಅವರು ಆಶಯ ನುಡಿಯನ್ನು ಮಂಡಿಸುವರು. ಹಾಗೂ ಖಾನಾಪೂರ ತಾಲೂಕಾ ಅಧ್ಯಕ್ಷರಾದ ಶ್ರೀ ವಿಜಯ ಬಡಿಗೇರ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಜಿಲ್ಲಾ ಕಾರ್ಯಕಾರಿ ಸಮೀತಿಯ ಸರ್ವ ಸದಸ್ಯರು ಹಿರಿಯ- ಕಿರಿಯ ಸಾಹಿತಿಗಳು, ಸಮಸ್ತ ಕನ್ನಡಾಭಿಮಾನಿಗಳು ಈ ಕೆಳಗಿನ ಕೊಂಡಿಯನ್ನು ಬಳಸಿಕೊಂಡು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಕ.ಸಾ.ಪ. ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಗಲಾ ಮೆಟಗುಡ್ಡ ಅವರು ಮತ್ತು ಜಿಲ್ಲಾ ಕಾರ್ಯಕಾರಿ ಸಮೀತಿಯ ಸರ್ವ ಸದಸ್ಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Leave a Reply