Belagavi

ಕೋವಿಡ್ ರಾಷ್ಟಿçÃಯ ವಿಪತ್ತು ಘೋಷಣೆಗೆ ಆಗ್ರಹ ! ಸರ್ಕಾರಿ ನೌಕರರು ಜನಪ್ರತಿನಿಧಿಗಳ ೩ ತಿಂಗಳ ಅರ್ಧ ಸಂಬಳ ಸರಕಾರದ ಪರಿಹಾರ ನಿಧಿಗೆ ನೀಡಲು ಮುಚಳಂಬಿ ಮನವಿ


ಬೆಳಗಾವಿ ಮೇ., ೨೫- ಈ ಕೊರೋನಾ ಸಂಕಷ್ಟ ಕಾಲವನ್ನು ಸರ್ಕಾರ ರಾಷ್ಟಿçÃಯ ವಿಪತ್ತು ಎಂದು ಘೋಷಣೆ ಮಾಡಿ ಜನರಿಗೆ ಇನ್ನು ದೊಡ್ಡ ಮೊತ್ತದ ಪ್ಯಾಕೇಜನ್ನು ಘೋಷಣೆ ಮಾಡಬೇಕೆಂದು ಕಲ್ಯಾಣರಾವ್ ಮುಚಳಂಬಿ ಆಗ್ರಹಿಸಿದ್ದಾರೆ.
ಬಡ ಮತ್ತು ಮಧ್ಯಮ ವರ್ಗದ ಜನತೆಯ ಆರ್ಥಿಕ ಪರಿಸ್ಥಿತಿ ತೀರ ಕುಂಠಿತಗೊAಡಿದ್ದು ಉದ್ಯೋಗ ನಷ್ಟದಿಂದಾಗಿ ಹಾಗೂ ಸರ್ಕಾರದ ಲಾಕ್ ಡೌನ್ ನಿಂದಾಗಿ ಅಸಂಖ್ಯಾತ ಜನತೆ ಕೆಲಸದಿಂದ ವಂಚಿತರಾಗಿದ್ದು ಈ ಕಾರಣದಿಂದಾಗಿ ಜಿಡಿಪಿ ಕುಸಿದಿರುವ ಸಾಧ್ಯತೆಗಳಿವೆ. ಸರ್ಕಾರದ ಬಹುತೇಕ ವಾರ್ಷಿಕ ಬಜೆಟ್ ಮೊತ್ತಕ್ಕೆ ಹೋಲಿಕೆ ಮಾಡಿದರೆ ಕೊರೋನ ಸಂಕಷ್ಟದಲ್ಲಿ ಘೋಷಣೆ ಮಾಡಲಾದ ರೂ ೧೨೫೦ ಕೋಟಿ ಪ್ಯಾಕೇಜ್ ಸಾಲುವುದಿಲ್ಲ. ಹಾಗೂ ಈ ಪರಿಹಾರ ವಿತರಣೆಯ ವ್ಯವಸ್ಥೆ ಅವೈಜ್ಞಾನಿಕವಾಗಿದ್ದು ಸಂಕಷ್ಟದಲ್ಲಿರುವ ಇತರೆ ಜನಸಾಮಾನ್ಯರಿಗೆ ಇದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ.
ಹಿಂದೆ ಅನೇಕ ಬಾರಿ ದೇಶದಲ್ಲಿ ರಾಷ್ಟಿçÃಯ ವಿಪತ್ತು ಘೋಷಣೆಯಾದಾಗ ಜನರು ಉದಾರವಾಗಿ ದವಸ ದಾನ್ಯ ಬೆಳ್ಳಿ ಬಂಗಾರ ಹಣ ದೇಣಿಗೆ ಕೊಟ್ಟ ಉದಾಹರಣೆಗಳಿವೆ. ಆದ್ದರಿಂದ ಸರಕಾರ ಜನರಿಂದ ದೇಣಿಗೆಯನ್ನು ಆಹ್ವಾನಿಸಬೇಕು ಇದರಿಂದ ಸಂಕಷ್ಟದಲ್ಲಿರುವ ಜನರ ನೆರವಿಗೆ ಬರಲು ಸರಕಾರಕ್ಕೂ ಸಹಾಯವಾಗುತ್ತದೆ.
ಒಟ್ಟಾರೆ ೪.೫ ಲಕ್ಷ ಜನ ಸರ್ಕಾರಿ ನೌಕರರು ಈ ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಅ ವರ್ಗದ ನೌಕರರು ಪ್ರತಿ ತಿಂಗಳು ಅಂದಾಜು ೧.೫ ಲಕ್ಷದವರೆಗೆ ಸಂಬಳ ಪಡೆದರೆ ಬ ವರ್ಗದ ಅಧಿಕಾರಿಗಳು ೧ ಲಕ್ಷದ ವರೆಗೆ ಸಂಬಳ ಪಡೆಯುತ್ತಿದ್ದಾರೆ.
ಸಿ ವರ್ಗದ ನೌಕರರು ೫೦ ಸಾವಿರದಷ್ಟು ಸಂಬಳ ಪಡೆಯುತ್ತಿದ್ದಾರೆ. ಇನ್ನು ೨೨೪ ಶಾಸಕರು ೭೦ ಜನ ರಾಜ್ಯಸಭಾ ಸದಸ್ಯರು ೭೫ ಜನ ವಿಧಾನ ಪರಿಷತ್ ಸದಸ್ಯರು ಸೇರಿದಂತೆ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರನ್ನೂ ಒಳಗೊಂಡAತೆ ಸುಮಾರು ೪೦೦ ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಪಂಚಾಯತ ಅಧ್ಯಕ್ಷರು ೩೦ ಜನ ಇದ್ದಾರೆ. ಇನ್ನು ಖಾಸಗಿ ಸಂಘ-ಸAಸ್ಥೆಗಳು ಉದ್ಯೋಗ ಸಂಸ್ಥೆಗಳು ಉತ್ತಮ ಸ್ಥಿತಿಯಲ್ಲಿರುವ ಉದ್ಯೋಗಸ್ಥರು ವ್ಯಾಪಾರಸ್ಥರು ಸರಕಾರಕ್ಕೆ ದೇಣಿಗೆ ನೀಡಬೇಕು.ಇವರೆಲ್ಲರೂ ಸಮಾಜದ ಒಂದು ಭಾಗ. ಜನ ಸೇವಕರು, ಸಮಾಜ ಸೇವಕರು ಎಂದು ಕರೆಯಿಸಿಕೊಳ್ಳುವ ಸರ್ಕಾರಿ ಅರೆ ಸರ್ಕಾರಿ ನೌಕರರು, ಜನಪ್ರತಿನಿಧಿಗಳು ೨೫ ಸಾವಿರಕ್ಕೂ ಅಧಿಕ ಸಂಬಳ ಹೊಂದಿರುವ ಎಲ್ಲರೂ ಮೂರು ತಿಂಗಳುಗಳ ಕಾಲ ಅರ್ಧ ಸಂಬಳ ದೇಣಿಗೆ ನೀಡಿದರೆ ಅದು ಸರ್ಕಾರದ ಒಂದು ವರ್ಷದ ಬಜೆಟ್ ನಷ್ಟು ಆಗುವುದು. ಸರಕಾರ ಈ ದಣಿಗೆ ಹಣವನ್ನು ಆರ್ಥಿಕ ಸಂಕಷ್ಟದಲ್ಲಿರುವ ಸಾಮಾನ್ಯ ಜನರಿಗೆ ಹಂಚುವುದರಿAದ ಅವರ ನೆರವಿಗೆ ಬಂದAತಾಗುತ್ತದೆ ಅಷ್ಟೇ ಅಲ್ಲ ಇದರಿಂದ ಮತ್ತೆ ಸಮಾಜದಲ್ಲಿ ಆರ್ಥಿಕ ಚೇತರಿಕೆ, ಹಣದ ಹರಿವು ಹೆಚ್ಚಿ ಜಿ.ಡಿ.ಪಿ.ಯೂ ಉತ್ತಮ ಗೊಳ್ಳುತ್ತದೆ. ಕೊರೊನಾ ಸೋಂಕಿತರಿಗೆ ಎಲ್ಲ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಔಷಧೋಪಚಾರ ಮಾಡಬೇಕು ಎಂಬುದು ಕಲ್ಯಾಣರಾವ್ ಮುಚಳಂಬಿ ಅವರ ಆಗ್ರಹವಾಗಿದೆ.


Leave a Reply