Belagavi

ಸೊಂಕಿತರಿಗೆ ಉತ್ತಮ ಚಿಕಿತ್ಸೆ ನೀಡಿ


ಯುನಿಕೋಡ್ ಗೆ ಬದಲಾವಣೆಗೊಂಡ ಪಠ್ಯ..
ರಾಮದುರ್ಗ: ಕೊವಿಡ್ ೨ನೇ ಅಲೆಯ ತೀವೃತೆಯಿಂದ
ಜನ ಸಂಕಷ್ಟದಲ್ಲಿದ್ದು ಆಸ್ಪತ್ರೆಗೆ ಬರುವ ಸೊಂಕಿತರಿಗೆ
ಉತ್ತಮ ಚಿಕಿತ್ಸೆ ನೀಡುವ ಮೂಲಕ ಸರ್ಕಾರಿ ಆಸ್ಪತ್ರೆ ಕುರಿತು
ಜನರಲ್ಲಿ ಗೌರವದ ಭಾವನೆ ಮೂಡುವಂತೆ ಕಾರ್ಯನಿರ್ವಹಿಸಲು
ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.
ಮಂಗಳವಾರ ಸಾರ್ವಜನಿಕ ಆಸ್ಪತ್ರೆಗೆ ಶಾಸಕರ
ಕ್ಷೇತ್ರಾಭಿವೃದ್ಧಿ ಅನುದಾನದಲ್ಲಿ ರೂ. ೯ ಲಕ್ಷ ವೆಚ್ಚದಲ್ಲಿ ೧೦
ಆಕ್ಸಜನ್ ಕಾಂಟ್ರನ್ಸ್ಸ್ಟೇಟರ್ ಹಸ್ತಾಂತರಿಸಿ ಮಾತನಾಡಿದ ಅವರು,
ಕೊರೊನಾ ಯುದ್ಧದಲ್ಲಿ ವೈದ್ಯರು, ಆಶಾ, ಅಂಗನವಾಡಿ
ಸಿಬ್ಬAದಿಯ ಕಾರ್ಯ ಮಹತ್ವದ್ದಾಗಿದೆ. ಕೊರೊನಾ
ನಿಯಂತ್ರಣಕ್ಕಾಗಿ ಯಾವದೇ ಸಂದರ್ಭದಲ್ಲಿ ನಿಮ್ಮೊಂದಿಗೆ ತಾಲೂಕಾ
ಆಡಳೀತ ಸೇರಿದಂತೆ ನಾನು ನಿಮ್ಮ ನೆರವಿಗೆ ಇರುತ್ತೇನೆ ಎಂದು
ಭರವಸೆ ನೀಡಿದರು.
ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ತನ್ನ ಅಟ್ಟಹಾಸ
ಮುಂದುವರಸಿದ್ದು ನಿಯಂತ್ರಣಕ್ಕೆ ಪ್ರತಿಯೊಬ್ಬರು ಸರ್ಕಾರದ
ಆದೇಶ ಪಾಲನೆ ಮಾಡುವ ಮೂಲಕ, ಸರ್ಕಾರದೊಂದಿಗೆ ಸಹಕಾರ
ನೀಡಬೇಕು ಎಂದು ಹೇಳಿದರಲ್ಲದೆ ಸ್ವಚ್ಚತೆ ಕಾಪಾಡಿಕೊಂಡು
ಜೀವನ ಉಳಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ತಹಶೀಲ್ದಾರ ಮಲ್ಲಿಕಾರ್ಜುನ
ಹೆಗ್ಗನ್ನವರ ಶಾಸಕರು ೬೯ ವಯಸ್ಸಿನಲ್ಲಿ ಅಧಿಕಾರಿಗಳಿಗೆ ಸಲಹೆ,
ಮಾರ್ಗದರ್ಶನ ಮಾಡುತ್ತ ಅವರು ಒಬ್ಬ ಕೊರೊನಾ ವಾರಿರ‍್ಸ್
ತರಹ ಕೆಲಸ ಮಾಡುತ್ತಿರುವದು ಅಧಿಕಾರಿಗಳಿಗೆ ಪ್ರೇರಣೆ
ನೀಡುತ್ತಿದೆ ಎಂದರು. ಧನಲಕ್ಷಿö್ಮÃ ಶುಗರ್ ಅಧ್ಯಕ್ಷ ಮಲ್ಲಣ್ಣ
ಯಾದವಾಡ ಮಾತನಾಡಿ ಶಾಸಕರ ಜನ್ಮದಿನದ ಪ್ರಯುಕ್ತ
ತಾಲೂಕಿನ ಕೊರೊನಾ ವಾರಿರ‍್ಸ್ಗೆ ಆಹಾರದ ಕಿಟ್ ವಿತರಣೆ
ಮಾಡುತ್ತಿದ್ದು ಸಂಕಷ್ಟದಲ್ಲಿದ್ದವರಿಗೆ ನೆರವಾಗುವುದು
ಎಂದು ಹೇಳಿದರು.
ಸಭೆಯಲ್ಲಿ ಪುರಸಭೆ ಅಧ್ಯಕ್ಷ ಶಂಕರ ಬೆನ್ನೂರ, ಜಿಪಂ
ಸದಸ್ಯ ಮಾರುತಿ ತುಪ್ಪದ, ತಾಪಂ ಮಾಜಿ ಅಧ್ಯಕ್ಷ ಬಸವರಾಜ
ತುಪ್ಪದ, ಮುಖ್ಯಾಧಿಕಾರಿ ಎಸ್. ಜಿ. ಅಂಬಿಗೇರ, ಜಿ. ವಿ. ನಾಡಗೌಡ,
ತಾಲೂಕಾ ವೈದ್ಯಾಧಿಕಾರಿ ಮೃತ್ಯುಂಜಯ ತಡಹಾಳ,
ಸಮುಧಾಯ ಆರೋಗ್ಯ ಕೇಂದ್ರದ ಮುಖ್ಯವೈದ್ಯಾಧಿಕಾರಿ
ನಿರ್ಮಲಾ ಹಂಜಿ ಸೇರಿದಂತೆ ಹಲವರಿದ್ದರು


Leave a Reply