Belagavi

ಕಾಂಗ್ರೆಸ್ ಮುಖಂಡ ವಿಶ್ವಾಸ್ ವೈದ್ಯರಿಂದ ಉಚಿತ ಔಷಧಿ ವಿತರಣೆ


ಸವದತ್ತಿ : ತಾಲೂಕಿನ ಮುನವಳ್ಳಿಯಲ್ಲಿ ಕೋವಿಡ್ ಸೋಂಕಿಗೆ ಹೋಂ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾಂಗ್ರೆಸ್ ಮುಖಂಡರಾದ ಶ್ರೀ ವಿಶ್ವಾಸ್ ವೈದ್ಯ ರವರು ಉಚಿತ ಔಷಧಿ ವಿತರಿಸಿದರು.

ಕೋವಿಡ್ ಸೋಂಕು ವಿಶ್ವವನ್ನೇ ತಲ್ಲಣಗೊಳಿಸಿದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಅನೇಕರು ಸಾವಿಗೀಡಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮುಖಂಡ ಶ್ರೀ ವಿಶ್ವಾಸ್ ವೈದ್ಯ ರವರು ಸೋಂಕಿತರ ಸಹಾಯಕ್ಕೆ ಮುಂದಾಗಿರುವುದು ಶ್ಲಾಘನೀಯ’ ಎಂದು ಉಮೇಶ್ ಬಾಳಿ ಹೇಳಿದರು. ಇನ್ನೂ 2/3 ನೆ ಅಲೆ ಅಬ್ಬರ ಜೋರಾಗಿದೆ ಸರಕಾರ ಸೂಕ್ತಕ್ರಮಕೈಗೊಳ್ಳುವಂತೆ ಮನವಿ ಮಾಡಿದರು.

‘ಕಳೆದ ಬಾರಿ ಕೋವಿಡ್ ಪ್ರಯುಕ್ತ ವಿಧಿಸಲಾಗಿದ್ದ ಲಾಕ್‌ಡೌನ್ ಸಂದರ್ಭದಲ್ಲಿ ವಿಶ್ವಾಸ್ ವೈದ್ಯ ರವರು ನಿರ್ಗತಿಕರಿಗೆ ಆಹಾರ ಕಿಟ್ ಹಾಗೂ ತರಕಾರಿ ವಿತರಿಸಿದ್ದರು’

ಈ ಸಂದರ್ಭದಲ್ಲಿ ರವಿಂದ್ರ ಯಲಿಗಾರ, ಉಮೇಶ್ ಬಾಳಿ, ಸಿ ಬಿ ಬಾಳಿ, ಎಮ್ ಆರ್ ಗೋಪಶೆಟ್ಟಿ , ಡಾ: ಬಸೀರ ಬೈರಕದಾರ, ಮುನವಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಡಿ ಟೋಪೋಜಿ.ತಾನಾಜಿ ಮುರಂಕರ.ಇರ್ಫಾನ್‌ ಸೊಗಲದ, ಮೀರಾಸಾಬ ವಟ್ಟಾಳ. ಅಂದಾನಪ್ಪ ಗೊಮಾಡಿ.ನಾಗಪ್ಪ ಕಾಮನ್ನವರ .ಕಲ್ಲಪ್ಪ ಕಿತ್ತೂರ ಯಶವಂತ ಯಲಿಗಾರ.ಸಿಂಗಯ್ಯ ಹಿರೇಮಠ ಪಂಚು ಬಾರಕೇರ.ಪ್ರಸಾದ ವೀರಪೈನವರಮಠ.ವೈದಾಧಿಕಾರಿಗಳಾದ ಡಾ: ಎಸ್ ಎಲ್ ದಂಡಗಿ, ಚಂದ್ರು ಜಂಬರ್ಗಿ, ಸುಭಾಷ್ ಹುಜರತ್ತಿ ಹಾಗೂ ಆಶಾ ಕಾರ್ಯಕರ್ತೆಯರು ಸೇರಿ ಆನೇಕ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
(ವರದಿ ಈರಣ್ಣಾ ಹೂಲ್ಲೂರ ಯರಗಟ್ಟಿ)


Leave a Reply