Belagavi

ಪೊಲೀಸ್ ಮತ್ತು ಗೃಹರಕ್ಷಕ ದಳದ ಸಿಬ್ಬಂದಿಯವರಿಗೆ ಉಪಹಾರ ಸೇವೆ


ಸವದತ್ತಿ: ಪಟ್ಟಣದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷರು ಹಾಗೂ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಪುಂಡಲೀಕ ಭೀಮಪ್ಪ ಬಾಳೋಜಿಯವರ ನೇತೃತ್ವದಲ್ಲಿ ಸವದತ್ತಿಯ ಗಿರಿಜನ್ನವರ ಓಣಿಯ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿ ಸಂಸ್ಥೆಯ ಆಶ್ರಯದಲ್ಲಿ ಕೋವಿಡ್ ಎರಡನೇ ಅಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಯವರಿಗೆ ಮೇ.23 ರಿಂದ ಜೂನ 7 ರವರೆಗೆ ಪ್ರತಿ ದಿನ ಮುಂಜಾನೆ 8.30 ಕ್ಕೆ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಅಲ್ಲೋಪಹಾರ ಮತ್ತು ಕಷಾಯದ ಸೇವೆಯನ್ನು ಮಾಡಲಾಗುತ್ತಿದೆ. ಕೊರೊನಾ ನಿಯಂತ್ರಣಕ್ಕಾಗಿ ಹಗಲಿರಳು ಶ್ರಮಿಸುತ್ತಿರುವ ಪೊಲೀಸ್ ಮತ್ತು ಗೃಹರಕ್ಷಕ ದಳದ ಸಿಬ್ಬಂದಿಯವರು ನಮ್ಮ ಈ ಅಲ್ಪ ಸೇವೆಯನ್ನು ಸ್ವೀಕರಿಸಬೇಕೆಂದು ವಿನಂತಿಸಿದ್ದಾರೆ.

ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿ ಸಂಸ್ಥೆಯ ಸದಸ್ಯರಾದ ಕೇದಾರ ಮೊಕಾಶಿ, ವಿತ್ತಲ ಜಾಮದಾರ, ಅಣ್ಣಪ್ಪ ಪವಾರ, ರವಿ ಗಿರಿಜನ್ನವರ, ಮಲ್ಲೇಶ ರಾಜನಾಳ, ಮಹೇಶ ಜಾಮದಾರ, ಧರ್ಮರಾಜ ಗಿರಿಜನ್ನವರ, ಲಕ್ಷ್ಮಣ ಕಿಟದಾಳ ಉಪಸ್ಥಿತರಿದ್ದರು.
(ವರದಿ ಈರಣ್ಣಾ ಹೂಲ್ಲೂರ ಯರಗಟ್ಟಿ)


Leave a Reply