Belagavi

“ಪ್ರಯತ್ನ ” ಸಂಘಟನೆಯಿಂದ ಆಟೊ ಚಾಲಕರಿಗೆ ಆಹಾರ ಕಿಟ್ ನೀಡಿಕೆ


ಬೆಳಗಾವಿ ; ಬೆಳಗಾವಿ ಚನ್ನಮ್ಮ ನಗರ ಮತ್ತು ಹರಿಮಂದಿರ ಭಾಗದಲ್ಲಿನ ಅಟೋರಿಕ್ಷಾ ಚಾಲಕರಿಗೆ 1ತಿಂಗಳಿಗೆ ಆಗಬಹುದಾದಷ್ಟು ಆಹಾರ ಕಿಟ್ ಗಳನ್ನು “ಪ್ರಯತ್ನ “ಸಂಘಟನೆಯ ವತಿಯಿಂದ ವಿತರಿಸಲಾಯಿತು .

ಅಕ್ಕಿ ಗೋಧಿ ಹಿಟ್ಟು ಸಕ್ಕರೆ ಚಹಾ ಪೌಡರ್ ಖಾರ ಉಪ್ಪು ಸೇರಿದಂತೆ ದಿನಸಿ ವಸ್ತುಗಳನ್ನು ಈ ಕಿಟ್ ಹೊಂದಿದೆ .
ಸಂಘದ ಅಧ್ಯಕ್ಷೆ ಶಾಂತಾ ಆಚಾರ್ಯ ,ಸದಸ್ಯರುಗಳಾದ ರವಿ ಆಚಾರ್ಯ ,ಸಂಗೀತ ಪಾಟೀಲ ,ಶಾಂತಾರಾಮ್ ಭಟ್ ,ವರದಾ ಭಟ್ ,ಗುರುರಾಜ್ ಭಟ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು .


Leave a Reply