Koppal

ಅಂಬಾಭವಾನಿ ದೇವಸ್ಥಾನ ಹಾಗೂ ಮಂಗಲ ಭವನದ ಭೂಮಿ ಪೂಜೆ


ಕುಷ್ಟಗಿ:ಕುಷ್ಟಗಿಯ ಎಸ್.ಎಸ್.ಕೆ.ಸಮಾಜದ ಮಂಗಲ ಭವನ ಹಾಗೂ ಶ್ರೀ ಅಂಬಾಭವಾನಿ ದೇವಸ್ಥಾನದ ಅಡಿಗಲ್ಲು ಭೂಮಿ ಪೂಜೆ ಇಂದು ನೆರವೇರಿಸಲಾಯಿತು. ಭೂಮಿ ಪೂಜೆ ಯನ್ನು ಶ್ರೀ ಆನಂದ ಮಹಾರಾಜರು ಹಾಗೂ ಪುರಸಭಾ ಅಧ್ಯಕ್ಷರಾದ ಜಿ.ಕೆ.ಹಿರೇಮಾಠ,ನಡೆಸಿಕೊಟ್ಟರು.ನಂತರ ಮಾತನಾಡಿದ ಜಿ.ಕೆ.ಹಿರೇಮಠ ಅವರು ಎಸ್.ಎಪ್.ಸಿ.ಅನುದಾನದಲ್ಲಿ ಹತ್ತು ಲಕ್ಷ ರೂ ಕಲ್ಯಾಣ ಮಂಟಪ ನಿರ್ಮಾಣಕ್ಕಾಗಿ ಶಾಸಕರೊಂದಿಗೆ ಮಾತನಾಡಿ ಬಿಡುಗಡೆ ಮಾಡುವ ಭರವಸೆ ನೀಡಿದರು. ಶಾಸಕ ಅಮರೇಗೌಡಾ ಬಯ್ಯಾಪೂರ ಅವರು ಈಗಾಗಲೇ ಐದು ಲಕ್ಷ ರೂಪಾಯಿ ಬಿಡುಗಡೆ ಮಾಡಿ ನಿರ್ಮಿತಿ ಕೇಂದ್ರ ದವರಿಗೆ ಕಾಮಗಾರಿ ಕೈಗೊಳ್ಳಲು ಸೂಚಿಸಿದ್ದು ಇಂದು ಚಾಲನೆ ನೀಡಲಾಯಿತು. ಈ ಸಂಧರ್ಬದಲ್ಲಿ ಆನಂದ ಮಹಾರಾಜರನ್ನು ಹಾಗೂ ಪುರಸಭಾ ಅದ್ಯಕ ಜಿ.ಕೆ.ಹಿರೇಮಠ ಅವರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಕೆ.ಸಮಾಜದ ಅಧ್ಯಕ್ಷ ರವಿಂದ್ರ ಬಾಕಳೆ .ಉಪಾಧ್ಯಕ್ಷ ರಾಜಣಸಾ ಕಾಟವಾ.ಖಜಾಂಚಿ ಆನಂದ ರಾಯಬಾಗಿ.ಕೇಶವ ಕಾಟವಾ.ವಿಠ್ಠಲ ದಲಬಂಜನ.ಅನಿಲ್ ರಂಗರೇಜಿ.ಡಾ.ರವಿದಾನಿ.
ಪ್ರಭಾಕರ ಸಿಂಗ್ರಿ.ಅನಿತಾಬಾಯಿ.ರೂಪಾಬಾಯಿ.ಅರುಣಾ ಸೇರಿದಂತೆ. ಸಮಾಜದ ತರುಣ ಸಂಘ .ಮಹಿಳಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಆರ್ ಶರಣಪ್ಪ ಗುಮಗೇರಾ.


Leave a Reply