Koppal

ತಡರಾತ್ರಿ ಹರಿದು ಬಿದ್ದ ಮೇನ್ ಲೈನ್ ವೈರ್


ಕುಷ್ಟಗಿ:

ತಾಲೂಕಿನ ಗುಮಗೇರಾ ಗ್ರಾಮದಲ್ಲಿ ಮೇನ್ ಲೈನ್ ನಿನ್ನೆ ರಾತ್ರಿ ಸುಮಾರು 10 ಘಂಟೆಯ ಸುಮಾರಿಗೆ ಹರಿದು ಬಿದ್ದಿದೆ. ರಾತ್ರಿ 2-3 ಘಂಟೆಯ ಸುಮಾರಿಗೆ ಪಕ್ಕದ ಮನೆಯವರು ಗಮನಿಸಿ ಸಂದರ್ಭದಲ್ಲಿ ಕಟ್ಟಾಗಿ ಬಿದ್ದಿರುವುದು ಗೊತ್ತಾಗಿದೆ.ಆದರೆ ಇವರಿಗೆ ಇದರಲ್ಲಿ ಕರೆಂಟ್ ಇರೋದು ಗೊತ್ತಾಗಿಲ್ಲಾ .ಸ್ವಲ್ಪ ಗಾಳಿ ಬೀಸುವ ಸಂದರ್ಭದಲ್ಲಿ ಶಾಟ್ ಆಗುವ ಸಂದರ್ಭವನ್ನು ಗಮನಿಸಿದಾಗ ಜನ ಬಯ ಭೀತರಾಗಿದ್ದಾರೆ. ಹಾಗಾಗಿಯೇ ಗ್ರಾಮದಲ್ಲಿ ಕಟ್ಟಿಗೆ ಕಂಬ ,ಮುರಿದ ಕಂಬ ,ಹಳೆ ವೈರ್ ,ತುಂಬಾ ವರ್ಷಗಳ ಸಮಸ್ಯೆ ಗ್ರಾಮದಲ್ಲಿ ಇದ್ದು ,ಗ್ರಾಮ ಪಂಚಾಯತಿ ವತಿಯಿಂದ ಹಾಗೂ ಗ್ರಾಮಸ್ಥರ ವತಿಯಿಂದ ಹಲವಾರು ಬಾರಿ ಕೆಇಬಿ ಗೆ, ಮನವಿ ಪತ್ರ ಕೊಟ್ಟಿದ್ದಾರೆ. ಆದರೂ ಇದು ವರೆಗೂ ಯಾವದೇ ಪ್ರಯೋಜನ ವಾಗಿಲ್ಲಾ.ಈ ಹಿಂದೆ ಒಂದು ಸಾರಿ ಕಟ್ಟಿಗೆ ಕಂಬಕ್ಕೆ ಮೇನ್ ಲೈನ್ ಇತ್ತು ಆವತ್ತು ಕಟ್ಟಿಗೆ ಕಂಬ ಮುರಿದು ಬಿದ್ದು ಹೋಗಿತ್ತು. ಆಗ ಸಹ ಯಾವದೇ ಪ್ರಾಣ ಹಾನಿಯಾಗಿರಲಿಲ್ಲ.ಆಗ ಒಂದು ಕಂಬವನ್ನು ಮಾತ್ರ ಬದಲಾವಣೆ ಮಾಡಿ ಕೊಟ್ಟಿದ್ದಾರೆ.ದಯವಿಟ್ಟು ಇದನ್ನು ಕೂಡಲೇ ಸರಿ ಪಡಿಸಿ ಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.ಒಟ್ಟಾರೆ ಸಂಬಂಧಿಸಿದ ಇಲಾಖೆಯವರು ಆದಷ್ಟು ಬೇಗ ಗ್ರಾಮದ ವಿದ್ಯುತ್ ಸಮಸ್ಯೆ, ಹೊಸ ಕಂಬ,ಹೊಸ ಲೈನ್ (ವೈರ್) ಹಾಕಿ ಗ್ರಾಮಸ್ಥರಿಗೆ ಅನುಕೂಲ ಮಾಡಿ ಕೊಡಬೇಕಾಗಿದೆ.

ಆರ್ ಶರಣಪ್ಪ ಗುಮಗೇರಾ.


Leave a Reply