Belagavi

ಸೋಂಕು ತಡೆಗೆ ತಹಶಿಲ್ದಾರ, ಆರೋಗ್ಯ ಇಲಾಖೆ, ಶಾಸಕರು ಹಳ್ಳಿ ಕಡೆ


ಯರಗಟ್ಟಿ: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ರುದ್ರಪೂರ, ಹಿರೇಬೂದನೂರ, ತಡಸಲೂರ, ಮಲ್ಲೂರ, ಯಕ್ಕುಂಡಿ  ಗ್ರಾಮಗಳಲ್ಲಿ ಕೊರೋಣಾ ತಪಾಸಣೆಯಲ್ಲಿ ಎಷ್ಟು ಜನಕ್ಕೆ ಪಾಜಿಟೋ ಬಂದಿದೆ ಹಾಗೂ ಗ್ರಾಮದಲ್ಲಿ ಕೊರೊನಾ ಎಷ್ಟು ಜನರು ಮರಣ ಹೊಂದಿದ್ದಾರೆ ಎಂದು ಶಾಸಕರು ವಿಚಾರಣೆ ಮಾಡಿದರು.

ಇನ್ನು ಮುಂದೆ ಯಾರು  ಗ್ರಾಮದಲ್ಲಿ ಜಾತ್ರೆ ಹಾಗೂ ಮದುವೆಯ ಸಮಾರಂಭಗಳನ್ನು ಒಂದು ವರ್ಷಕಾಲ ಮಾಡದೆ ಇರುವುದು ಬಹಳ ಒಳ್ಳೆಯದು ಎಂದು ಗ್ರಾಮದ ಜನರಿಗೆ ತಿಳುವಳಿಕೆ ಹೇಳಿದ ಬೈಲಹೊಂಗಲ ಶಾಸಕರು ಮಹಾಂತೇಶ ಕೌಜಲಗಿ.

ತಾಲೂಕ ಆರೋಗ್ಯ ವೈದ್ಯಾಧಿಕಾರಿಯಾದ ಡಾ ಮಹೇಶ ಚಿತ್ತರಗಿ ಇವರು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಇವತ್ತಿನ ದಿನ ನೀವು ಪ್ರತಿ ಮನೆ ಮನೆಗೆ ಭೇಟಿ ನೀಡಿ ಯಾರಿಗಾದರೂ ಆರೋಗ್ಯ ಸಮಸ್ಯೆ ಇದ್ದರೆ ಅವರಿಗೆ ಬೇಗನೆ ತಪಾಸಣೆ ಮಾಡಿಸಬೇಕು ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಸವದತ್ತಿ ತಶಿಲ್ದಾರ್  ಪ್ರಶಾಂತ ಪಾಟೀಲ, ಈ. ಓ. ಯಶವಂತಕುಮಾರ, ಗ್ರಾಮದ ಲೆಕ್ಕಾಧಿಕಾರಿ ಹಣಜಿ, ಗ್ರಾಮ ಪಂಚಾಯತಿಯ ಅಧ್ಯಕ್ಷರು ಸೋಮಲಿಂಗಪ್ಪ ಸಿದ್ದಪ್ಪ ಜಮನಾಳ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಯಾದ ಯ. ಬಿ. ಅಂಗಡಿ ಗ್ರಾಮ ಪಂಚಾಯಿತಿ  ಅಭಿವೃದ್ಧಿ ಅಧಿಕಾರಿ ಜಿ ಎಮ್ ಗಿರೇಣ್ಣವರ,  ವೈದ್ಯಾಅಧಿಕಾರಿಗಳಾದ  ಆರ್ ಎಸ್ ಬಾಳಿಕಾಯಿ,  ಕಂದಾಯ ನಿರಿಕ್ಷಕರು ಮಾವುತ, ಗ್ರಾ ಪಂ ಅಧ್ಯಕ್ಷರುರಾದ ಮಹಾದೇವಿ ಸೂರಣ್ಣವರ, ಉಪಾಧ್ಯಕ್ಷರಾದ ಲಕ್ಷ್ಮೀ ಪೆಂಡಾರಿ, ಗ್ರಾ ಪಂ ಸದಸ್ಯರಾದ  ಶಿವರಾಜ ಮ ರುದ್ರಪ್ಪನವರ ಹಾಗೂ  ಟಾಷ್ಕಪೋರ್ಸ ಸದಸ್ಯರು ಹಾಗೂ ಆಶಾ ಕಾರ್ಯಕರ್ತರು ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಹಾಗೂ ಅಂಗನವಾಡಿ ಕಾರ್ಯಕರ್ತರು ಮತ್ತು ಪಂಚಾಯಿತಿಯ ಸದಸ್ಯರು ಗ್ರಾಮ ಪಂಚಾಯತಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply