Belagavi

ಬೈಲಹೊಂಗಲ ಶಾಸಕರೆ ಮನೆಯಿಂದ ಹೊರಗೆ ಬನ್ನಿ -ಡಾ.ವಿಶ್ವನಾಥ ಪಾಟೀಲ


ಬೈಲಹೊಂಗಲ: ಕೋವಿಡ್-19 ಎರಡನೇ ಅಲೆಯಿಂದ ಕಂಗೆಟ್ಟಿರುವ ಜನರ ನೆರವಿಗೆ ಶಾಸಕ ಮಹಾಂತೇಶ ಕೌಜಲಗಿ ಅವರು ಮನೆಯಿಂದ ಹೊರಗೆ ಬರಬೇಕೆಂದು ಬೆಳಗಾವಿ ಕಾಡಾ ಅಧ್ಯಕ್ಷ, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಹೇಳಿದರು.

ಪಟ್ಟಣದ ಡಾ.ವಿಶ್ವನಾಥ ಪಾಟೀಲ ಕಾರ್ಯಾಲಯದಲ್ಲಿ ಏರ್ಪಡಿಸಿದ್ಧ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ದಿನೇ-ದಿನೇ ಕೊರೊನಾ ಹಾವಳಿ ಹೆಚ್ಚಾಗಿದ್ದು, ಸಾವು-ನೋವುಗಳ ಸಂಖ್ಯೆಯೂ ಅಧಿಕವಾಗುತ್ತಿದೆ. ಆದರೆ ಜನರ ಕಷ್ಟಗಳಿಗೆ ಸ್ಪಂದಿಸಬೇಕಿದ್ದ ಶಾಸಕರು ಹೆದರಿ ಮನೆಯಲ್ಲಿ ಕುಳಿತಿದ್ದಾರೆ. ಅಧಿಕಾರಿಗಳ ಬಂದಾಗ ಮಾತ್ರ ಮನೆಯಿಂದ ಹೊರಗಡೆ ಬರುತ್ತಿದ್ದಾರೆ. ಶಾಸಕರೇ ಭಯಪಟ್ಟರೆ ಜನ ಸಾಮಾನ್ಯರ ಗತಿ ಏನು ಎಂದು ಪ್ರಶ್ನಿಸಿದರು. ಜನರ ಸೇವೆ ಮಾಡಲು ಮತ ನೀಡಿ ಆರಿಸಿ ಕಳಿಸಿದ್ದಾರೆ. ಕಷ್ಟಕಾಲದಲ್ಲಿ ಮತಕ್ಷೇತ್ರದ ಜನರ ಸಹಾಯಕ್ಕೆ ಬರಬೇಕು. ಗ್ರಾಮೀಣ ಭಾಗಗಳಲ್ಲಿ ಜನರು ಶಾಸಕರನ್ನು ಹುಡುಕಿಕೊಡಿ ಎನ್ನುತ್ತಿದ್ದಾರೆ.
ಈಗಾಗಲೇ ನಮ್ಮ ಬಿಜೆಪಿ ಪಕ್ಷದ ಕಾರ್ಯಕರ್ತರು, ಅಭಿಮಾನಿ ಬಳಗದಿಂದ ನಾನಾ ಯೋಜನೆಗಳನ್ನು ಆರಂಭಿಸಿ ಜನರಿಗೆ ಸಹಾಯ-ಸಹಕಾರ ಮಾಡಲಾಗುತ್ತಿದೆ. ಜನರಲ್ಲಿ ಆತ್ಮವಿಶ್ವಾಸ, ಧೈರ್ಯ ತುಂಬುವ ಕೆಲಸ ಮಾಡಲಾಗುತ್ತಿದೆ. ಆದರೆ ಶಾಸಕರು ಏನೂ ಮಾಡುತ್ತಿದ್ದಾರೆ ಗೊತ್ತಿಲ್ಲ ಎಂದರು. ಕೊರೊನಾದಂತಹ ಕಷ್ಟಕಾಲದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಉತ್ತಮ ಕಾರ್ಯ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಇಂತಹ ಮುಖ್ಯಮಂತ್ರಿ ಸಿಕ್ಕಿರುವುದು ಅಪರೂಪವಾಗಿದೆ ಎಂದರು. ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಎಲ್ಲರೂ ಮುನ್ನಡೆಯಬೇಕೆಂದರು.
(ವರದಿ ಈರಣ್ಣಾ ಹುಲ್ಲೂರ)


Leave a Reply