Belagavi

ಲೋಕಕಲ್ಯಾಣಾರ್ಥವಾಗಿ ಮಹಾರುದ್ರಯಾಗ ಹೋಮ


ಯರಗಟ್ಟಿ : ಪಟ್ಟಣದ ಸಮೀಪದ ಶಿಂದೋಗಿ ಮುನವಳ್ಳಿ ಗೋಶಾಲೆಯಲ್ಲಿ ಬುಧವಾರ ಬೆಳಿಗ್ಗೆ 5 ಗಂಟೆಯಿಂದಾ ಮಹಾರುದ್ರ ಯಾಗ ಪಜ್ಜನಿ ಹೋಮವು ಕಟಕೋಳ ಎಂ.ಚಂದರಗಿ ಶ್ರೀ ಗುರು ಗಡದೇಶ್ವರ ಮತ್ತು ವೀರಭದ್ರಶಿವಯೋಗಿ ಶ್ರೀಗಳ ಸಾನಿಧ್ಯದಲ್ಲಿ ವಿಧಿ ವಿಧಾನಗಳಿಂದ ಪ್ರಾರಂಭವಾಯಿತು.

ಶಿಂದೋಗಿ ಮುನವಳ್ಳಿ ಗೊ ಶಾಲೆಯ ಕಮಿಟಿಯಸರ್ವಸದಸ್ಯರು ಕುಟುಂಬದೊಂದಿಗೆಭಾಗಿಗಳಾಗಿದ್ದರು ಶಾಸಕರಾದ ಆನಂದ ಮಾಮನಿ, ಯುವ ಧುರೀಣರಾದ ವಿಶ್ವಾಸ ವೈದ್ಯ, ಟಿ. ಪಿ. ಮನ್ನೋಳಿ, ಸಿ. ಬಿ. ಬಾಳಿ, ಈರಣ್ಣ ಕಮ್ಮಾರ, ಚಂದ್ರು ಜಂಬ್ರಿ, ಅಂಭು ಯಲಿಗಾರ, ಮಂಜು ಹನಸಿ, ಪಂಚಪ್ಪ ಹನಸಿ, ಪ್ರಸಾದ ವೀರಪಯ್ಯನವರಮಠ ಉಪಸ್ಥಿತರಿದ್ದರು.

ಹೋಮ ಹವನ ನಂತರ ಅಷ್ಟದಿಗಬಂಧ ಜರುಗಿತು. ನಂತರ ವೀರಭದ್ರ ಶ್ರೀಗಳು ಆಶಿರ್ವಚನದಲ್ಲಿ ಲೋಕಕಲ್ಯಾಣಾರ್ಥವಾಗಿ ದೇಶದ ಸರ್ವರಿಗೂ ಸುಖಮಯವಾಗಲಿ ಎಂದು ಶಾಸ್ತಿಗಳಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಗೋ ಶಾಲೆಯಲ್ಲಿ ಸರ್ವರೋಗಕ್ಕು ಔಷದ ವಿದೆ ಇಲ್ಲಿಯ ಔಷದದ ಸೇವನೆಯಿಂದ ಬೇಕಾದಂತಾ ಕರೋನದಂತಾ ಬಿಳಿ, ಕರಿ,ಹಳದಿ ಫಂಗಸ ರೋಗಗಳು ಬರುವದಿಲ್ಲಾ ಭಕ್ತರು ಧೈರ್ಯದಿಂದ ಇರಬೇಕು.ಸರಕಾರದ ನಿಯಮಗಳನ್ನು ಪಾಲಿಸಿರಿ ಜನರು ಹೆದರಿ ಸಾಯುತ್ತಿದ್ದಾರೆ.

ಧೈರ್ಯದಿಂದ ಇದ್ದರೆ ಎನು ಆಗುವದಿಲ್ಲಾ ಮುನವಳ್ಳಿ ಶೀಂದೊಗಿ ಶಿಮಿಗಳಿಗೆ ಅಷ್ಟದಿಂಗಬಂಧನಮಾಡಿದೆ ಎಂದರು.

ಶ್ರೀ ಮುರಘೇಂದ್ರ ಶ್ರೀಗಳು ಸಮ್ಮುಖ ವಹಿಸಿದ್ದರು ಸರ್ವರಿಗೂ ಪ್ರಸಾದ ವ್ಯವಸ್ಥೆ ಹಾಗೂ ಮುನವಳ್ಳಿ ಶಿಂದೋಗಿ ಎಲ್ಲ ಭಕ್ತರು ಉಪಸ್ಥಿತರಿದ್ದರು.
(ವರದಿ ಈರಣ್ಣಾ ಹೂಲ್ಲೂರ ಯರಗಟ್ಟಿ)


Leave a Reply