Belagavi

ವೈದ್ಯರ ನಡೆ ಹಳ್ಳಿಯ ಕಡೆ


ಯರಗಟ್ಟಿ : ಸಮೀಪದ ಮುಗಳಿಹಾಳ ಗ್ರಾಮದಲ್ಲಿ ನಡೆದ ವೈದ್ಯರ ನಡೆ ಹಳ್ಳಿಯ ಕಡೆ ಎಂಬ ಕಾರ್ಯಕ್ರಮ ನಡೆಯಿತು.

ನಗರ ಪ್ರದೇಶದಿಂದ ಹಳ್ಳಿಗಳಿಗೆ ಮಹಾಮಾರಿ ಕೊರೊನಾ ರೋಗ ಹರಡದಂತೆ ಕಂಟ್ರೊಲ ಮಾಡಲು ವ್ಯದ್ಯರ ನಡೆ ಹಳ್ಳಿಕಡೆ ನಡೆ ಮೊದಲು ಹಂತದಲ್ಲಿ ಅಂಗನವಾಡಿ ಆಶಾ ಕಾರ್ಯಕರ್ತೆರಿಂದ ಹಳ್ಳಿಗಳಲ್ಲಿ ಮನೆ ಮನೆಗೆ ತೆರಳಿ ಕೊರೊನಾ ಹೆಮ್ಮಾರಿ ರೋಗದ ಬಗ್ಗೆ ತಿಳುವಳಿಕೆ ಹೇಳಿ ತಪಾಸಣೆ ಮಾಡಿಸಲು ಬರುವಂತೆ ಮನವರಿಕೆ ಮಾಡಿ ತಪಾಸಣೆ ಮಾಡಿ ಲಸಿಕೆ ಹಾಗೂ ಮಾತ್ರೆಗಳನ್ನು ಕೊಡಲಾಯಿತು .

ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲ್ಲೂಕಿನ ಮುಗಳಿಹಾಳ ಗ್ರಾಮದಲ್ಲಿ ಕೊರೊನಾ ರೋಗ ತಪಾಸಣೆ ಆರೋಗ್ಯ ಇಲಾಖೆ ಹಾಗೂ ಕೊರೊನಾ ವಾರಿಯರ್ಸ್‌ ತಂಡದವತಿಯಿಂದ ತಪಾಸಣೆ ಮಾಡಲಾಯಿತು.

ಈ ಸಂಧರ್ಭದಲ್ಲಿ ಪಿಡಿಓ ಅಮಿತ್ ನಾಯಕ, ಕಾರ್ಯದರ್ಶಿ ಕರೆಪ್ಪ ದೊಡ್ಡಣ್ಣವರ, ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಉಮೇಶ ಬೆಟಗೇರಿ ಹೆಲ್ತ್ ಇನಿಸ್ಪೆಕ್ಟರ್, ಎಮ್. ಎನ್. ಸೇಕ್, ಮುತ್ತುರಾಜ್ ನೆಸರಗಿ, ಆಶಾ ಕಾರ್ಯಕರ್ತರು, ಗ್ರಾಮ ಪಂಚಾಯತಿ ಸದಸ್ಯರು ಮತ್ತು ಸಿಬ್ಬಂದಿಯವರು ಉಪಸ್ಥಿತರಿದ್ದರು.
(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply