Koppal

ಸಮಾನ ಮನಸ್ಕರ ಸಮಾಜಮುಖಿ ಸೇವಾಕಾರ್ಯ


ಕೊಪ್ಪಳ: ಕೋರೋನಾ ಹಾವಳಿಯ ಸೋಂಕು ಮತ್ತು ಸಾವುಗಳು ಹೆಚ್ಚುತ್ತಿರುವ ವಿಷಮ ಮತ್ತು ವಿಷಾದದ ಸಂಧರ್ಭದಲ್ಲಿ ನಗರದ ಸಮಾನ ಮನಸ್ಕ ಗೆಳೆಯರ ಈ ಸಮಾಜಮುಖಿ ಸೇವಾಕಾರ್ಯಕ್ಕೆ ಅಭಿನಂದಿಸಲೇಬೇಕಾಗಿದೆ.

ಜಿಲ್ಲೆಯ ಕುಷ್ಟಗಿ ನಗರದ ಯುವ ತರುಣ ಮಿತ್ರರಾದ ಹುಲಗಪ್ಪ ಹಕ್ಕಲ್ ಮತ್ತು ಲಕ್ಕಿ ಕಟ್ಟಿಹೊಲ ಗೆಳೆಯರ ಬಳಗದ ಸದಸ್ಯರು ಲಾಕ್ ಡೌನ್ ಈ ಸಂಕಷ್ಟದ ದಿನಗಳಲ್ಲಿ ದಿನದ ಕೂಲಿ‌ಕೆಲಸಗಾರರು ಅಂದೇ ದುಡಿದು ಉಣ್ಣುವವರಿಗೆ ಶಾಪವಾಗಿ ಪರಿಗಣಿಸಿದ್ದನ್ನು ಅರಿತುಕೊಂಡು ನಮ್ಮವರಿಗೆ ನಾವು ಆಗಲೇಬೇಕು ನಾವು ಆಗದಿದ್ದರೆ ಯಾರು ಆಗುತ್ತಾರೆ ಎಂದು ಚಿಂತಿಸಿ

ದೈನಂದಿನ ಬದುಕಿಗೆ ಅವಶ್ಯಕವಾಗಿ ಬೇಕಾಗುವ ತರಕಾರಿಗಳನ್ನು ಬೀಟ್ ನಲ್ಲಿ ಖರೀದಿಸಿ ಅವಶ್ಯಕತೆ ಇರುವ ಕುಟುಂಬಗಳನ್ನು ಗುರುತಿಸಿಅವರ ಮನೆ ಬಾಗಿಲಿಗೆ ಹೋಗಿ ತಲುಪಿಸುವ ಪ್ರಾಮಾಣಿಕ ಕೆಲಸ ಮಾಡುವ ಮೂಲಕ ಸೈ ಎನಿಸಿಕೊಂಡಿದ್ದಾರೆ

175 ಕಾಯಿಪಲ್ಯ ತುಂಬಿದ ಐದ ರಿಂದ ಅರು ಕೆಜಿ ತೂಗುವ ಕಿಟ್ ಗಳನ್ನು ಸಿದ್ದಪಡಿಸಿ ಅದರಲ್ಲಿ ಉಳ್ಳಾಗಡ್ಡಿ ಮೆಣಸಿನಕಾಯಿ ಟೊಮ್ಯಾಟೊ ಹೂಕೋಸು ಹಾಕಿ ಪ್ಯಾಕ್ ಮಾಡಿ ಹಂಚಿದ ಸಂತೃಪ್ತ ಭಾವ ಅವರದು.

ಇವರಿಗೆ ಸಹಾಯ ಮಾಡಲು ಬಾಳಪ್ಪ ಕಟ್ಟಿಹೊಲ ಶರಣಪ್ಪ ಹಕ್ಕಲ್ ಜೊತೆಯಾಗಿ ಟಾ ಟಾ ಎಸಿ ತುಂಬಾ ಕಿಟ್ ತುಂಬಿಕೊಂಡು ಡಂಬರ್ ಓಣಿ ಯ ಅಕ್ಕಪಕ್ಕದ ಕುಟುಂಬಕ್ಕೆ
ಕಿಟ್ ನೀಡಿಬಂದ ಸಾರ್ಥಕ ಭಾವ ಈ ಗೆಳೆಯರದು

ಇಷ್ಟೇ ಅಲ್ಕದೆ ಕಿಟ್ ವಿತರಣೆ ಮಾಡುವಾಗ ಓಣಿಯ ಜನರಿಗೆ ಹೊರಗಡೆ ಬರುವಾಗ ಮಾಸ್ಕ ಕಡ್ಡಾಯವಾಗಿ ಧರಸಿ ದಿನಾಲೂ ಸಾಬೂನಿಂದ ಕೈ ತೊಳೆಯಲು ಸಾನಿಟೈಸ್ ಬಳಸಿ ದೈಹಿಕ ಅಂತರ ಕಾಪಾಡಿಕೊಳ್ಲಿ ಎಂದು ಹೇಳಲು ಮರೆತಿಲ್ಲ

ಇಂತಹ ನಿಸ್ವಾರ್ಥ ಸೇವಾ ಮನೋಭಾವ ಹೊಂದಿದ ಇಡೀ ದಿನ ತಮ್ಮವೈಯಕ್ತಿಕ ಕೆಲಸ ಬಿಟ್ಡು ಹಣ ಹೊಂದಿಸಿಕೊಂಡು ನಾವು ನಮ್ಮವರು ಎಂದುಹಾರೈಸೋಣ
ಸಂತತಿ ಹೆಚ್ಚಲಿ

ಈ ತರಹದ ಸಹಾಯ ಮಾಡುವ ಗುಣ ಬೆಳೆಯಲಿ ಕಟ್ಡಿ ದುರ್ಗಾದೇವಿ ಹಾಗೂ ನವಲಹಳ್ಳಿ ದುರಗಮ್ಮನ ಆಶೀರ್ವಾದ ಇವರ ಮೇಲೆ ಸದಾ ಇರಲಿ ಎಂದುಹಾರೈಸೋಣ.


Leave a Reply